ಹಿರಿಯೂರಿನ ಈ ಐತಿಹಾಸಿಕ ಪ್ರವಾಸಿ ಮಂದಿರದಲ್ಲಿ ಇಸ್ಪೀಟ್ ಜೂಜಾಟ: ಸಚಿವ ಡಿ.ಸುಧಾಕರ್ ಬೆಂಬಲಿಗರು ಸೇರಿದಂತೆ 16 ಮಂದಿ ಅಂದರ್‌

ಚಿತ್ರದುರ್ಗ, ಡಿಸೆಂಬರ್‌, 18: ಸರ್ಕಾರಿ ಬಂಗಲೆಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಸಚಿವ ಡಿ.ಸುಧಾಕರ್ ಬೆಂಬಲಿಗರು ಇಬ್ಬರು ನಗರಸಭೆ ಸದಸ್ಯರು ಸೇರಿದಂತೆ 16 ಮಂದಿಯನ್ನು ಬಂಧಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ವಾಣಿ ವಿಲಾಸ ಜಲಾಶಯದ ಕ್ರಾಸ್ ಬಳಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ್ದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ 16 ಮಂದಿ ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಬಂಧಿತರಿಂದ. 4 ಲಕ್ಷದ 37 ಸಾವಿರ ರೂಪಾಯಿ ನಗದು, ‌52 ಇಸ್ಪೀಟ್ ಎಲೆಗಳು ಹಾಗೂ ಆಟಕ್ಕೆ ಬಳಸಿದ ಬಿಳಿ ಬಟ್ಟೆಯ ಟವಲ್‌ ವಶಪಡಿಸಿಕೊಂಡಿದ್ದಾರೆ.

Gambling at Hiriyurs historic tourist spot: 16 people arrest including D.Sudhakar supporters

ನಾಸೀರ್ ವಿವಿ ಪುರ (54), ರಾಜಪ್ಪ (50) ಹಿರಿಯೂರು ನಗರ, ಚಿತ್ರಲಿಂಗೇಶ (38) ಆಲಮರದಹಟ್ಟಿ, ಕೆ. ಮಂಜುನಾಥ್ ಯಾದವ್ (30) ಜಾನುಕೊಂಡ, ಟಿ.ಮಂಜುನಾಥ್ (49) ಹಿರಿಯೂರು ಟೌನ್, ಚಿಕ್ಕಣ್ಣ (45) ತಾವರೆಕೆರೆ, ಮಣಿಕಂಠ (25) ಜೆಜಿ ಹಳ್ಳಿ, ಬಾಬು (38) ಹಿರಿಯೂರು ಟೌನ್, ಧನರಾಜ್ (42) ಹಿರಿಯೂರು ಟೌನ್, ಮಾರುತಿ (35) ಹಿರಿಯೂರು ಟೌನ್, ಮುದಿಯಣ್ಣ ( 48) ಹಿರಿಯೂರು ಟೌನ್, ರವಿ ಅಲಿಯಾಸ್ ಕಬ್ಬಡಿ ರವಿ, (36) ಹಿರಿಯೂರು ಟೌನ್ ಹಾಗೂ ನಗರಸಭೆ ಸದಸ್ಯರಾದ ಅಜೇಯ್ ಕುಮಾರ್ (ಅಜ್ಜಪ್ಪ), ಅನಿಲ್ ಕುಮಾರ್ ಬಂಧಿತ ಆರೋಪಿಗಳಿಗಿದ್ದಾರೆ.

ಸಚಿವರ ಬೆಂಬಲಿಗರು: ಇಸ್ಪೀಟ್ ಆಟದಲ್ಲಿ ತೊಡಗಿರುವ ನಗರಸಭೆ ಸದಸ್ಯರಾದ ಅಜೇಯ್ ಕುಮಾರ್ ಹಾಗೂ ಅನಿಲ್ ಕುಮಾರ್ ಇಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಬೆಂಬಲಿಗರಾಗಿದ್ದಾರೆ. ಇಸ್ಪೀಟ್ ಆಟ ಆಡಲು ಜಿಲ್ಲಾ ಉಸ್ತುವಾರಿ ಸಚಿವ ಕೃಪಾಕಟಾಕ್ಷ ಇದಿಯೇ ಹೇಗೆ ಎನ್ನಲಾಗುತ್ತಿದೆ. ಸಚಿವ ಡಿ.ಸುಧಾಕರ್ ಅವರ ತವರು ಕ್ಷೇತ್ರದಲ್ಲಿ ಇಸ್ಪೀಟ್ ಆಟ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಸಚಿವರ ಉತ್ತರವೇನು ಎಂಬುದು ತಿಳಿಯಬೇಕಿದೆ.

ಅನುಮತಿ ಕೊಟ್ಟಿದ್ದು ಯಾರು?

ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಇಸ್ಪೀಟ್ ಜೂಜಾಟ ಆಡಲು ಅನುಮತಿ ಕೊಟ್ಟಿದ್ದು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ವಾಣಿವಿಲಾಸ ಜಲಾಶಯದ ಬಳಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಬಂಗಲೆಯನ್ನು ಅತಿಥಿಗಳು ತಂಗುವುದಕ್ಕೆ ನಿರ್ಮಾಣ ಮಾಡಲಾಗಿದೆ. ಆದರೆ ಇಸ್ಪೀಟ್ ಆಡಲು ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಕಾಣತೊಡಗಿದೆ.

ಈ ಸಂಬಂಧ ಹಿರಿಯೂರು ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಏಕಕಾಲದಲ್ಲಿ ಅಥವಾ 16 ಮಂದಿ ಒಳಗಡೆ ಪ್ರವೇಶಿಸಿ ಒಂದೇ ಕಡೆ ಸೇರಲು ಅವಕಾಶ ಕೊಟ್ಟಿದ್ದು ಹೇಗೆ?, ಅಲ್ಲದೆ ಐಬಿ ನೋಡಿಕೊಳ್ಳಲು ಉಸ್ತುವಾರಿ ನೇಮಕ ಮಾಡಲಾಗಿರುತ್ತದೆ. ಆತನ ಗಮನಕ್ಕೆ ಇದು ಬರಲಿಲ್ಲವೇ ಎಂಬ ಹತ್ತು ಹಲವಾರು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+