ಹೆಲಿಕಾಪ್ಟರ್‌ನಲ್ಲಿ ಓಡಾಡುವುದು ನನ್ನ ವೈಯಕ್ತಿಕ: ಶಾಸಕರಿಗೆ ರಘು ಆಚಾರ್ ಟಾಂಗ್
ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ವಿರುದ್ಧ ಕಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಎಂಎಲ್‌ಸಿ ರಘು ಆಚಾರ್ ಕಿಡಿಕಾರಿದ್ದಾರೆ.
ಚಿತ್ರದುರ್ಗ, ಜನವರಿ 28 : ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ವಿರುದ್ಧ ಕಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಎಂಎಲ್‌ಸಿ ರಘು ಆಚಾರ್ ಕಿಡಿಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಶಾಸಕರ ಕಮಿಷನ್ ದಂಧೆ ಕುರಿತು ಲೋಕಾಯುಕ್ತ ತನಿಖೆಗೆ ನಾವೇ ಆಗ್ರಹಿಸಿದ್ದೇವೆ. ಈ ಆರೋಪ ಜನಪ್ರತಿನಿಧಿಗಳಿಗೆ ಅಂಟಿರುವ ಕಳಂಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಶಾಸಕರಾಗಲಿ, ಗ್ರಾಮ ಪಂಚಾಯಿತಿ ಸದಸ್ಯನಾಗಲಿ ಯಾರೇ ಆದರೂ ಅವರ ಮೇಲೆ ನಂಬಿಕೆ ಇಟ್ಟು ಮತ ಹಾಕಿರುತ್ತೇವೆ. ಆ ಮಹತ್ವ ಉಳಿಸಿಕೊಳ್ಳುವುದು ಶಾಸಕರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿರುತ್ತದೆ. ಶಾಸಕರೇ ಖುದ್ದಾಗಿ ಮುಖ್ಯಮಂತ್ರಿ ಬಳಿ ಹೋಗಿ ಈ ಪ್ರಕರಣ ತನಿಖೆ ಮಾಡಿಸಲು ಸೂಚನೆ ನೀಡಬೇಕು ಎಂದು ತಿಳಿಸಿದರು.

ರಘು ಅಚಾರ್ ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಾನೆ. ರೋಡ್‌ನಲ್ಲಿ ಓಡಾಡಲ್ಲ ಅಂತ ಕೆಲವರು ಈ ಹಿಂದೆ ನನ್ನ ಬಗ್ಗೆ ಕಮೆಂಟ್ ಮಾಡಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತುಕೊಂಡು ಪಟಾಲಂಗಳ ಮೂಲಕ ಮಾತಾಡಿಸುವುದು ಶಾಸಕರಿಗೆ ಗೌರವ ತರಲ್ಲ, ಏನೇ ವಿಚಾರಗಳು ಇದ್ದರೂ ಅವರೇ ನೇರವಾಗಿ ನನ್ನ ವಿರುದ್ದ ಮಾತನಾಡಬಹುದು ಎಂದು ಶಾಸಕರ ವಿರುದ್ಧ ಕಿಡಿ ಕಾರಿದರು.
ನಾನು ಪ್ರತೀ ಹಳ್ಳಿಗಳಿಗೂ ಭೇಟಿ ನೀಡಿದ್ದೇನೆ. ನಾನು ಮಾಡುವ ಕೆಲಸ ಅರ್ಥ ಮಾಡಿಕೊಳ್ಳಬೇಕು. ಎರಡು ರೀತಿಯ ಜನ ಇರುತ್ತಾರೆ. ಅದರಲ್ಲಿ ಸ್ವಲ್ಪ ಕೆಲಸ ಮಾಡಿ ದೊಡ್ಡ ಪ್ರಚಾರ ತೆಗೆದುಕೊಳ್ಳುವವರು. ಇಲ್ಲ ಕೆಲಸ ಮಾಡಿದ್ದನ್ನು ಒಪ್ಕೊಳ್ಳೋರು. ನಾನು ಎರಡು ಸಲ ಕೆಲಸ ಮಾಡಿದ್ದಕ್ಕೆ ಜನ ಎಮ್‌ಎಲ್‌ಸಿ ಮಾಡಿದ್ದಾರೆ ಎಂದು ತಿಳಿಸಿದರು.
ಶಾಸಕರಿಗೆ ಕೇಳಲು ಬಯಸುತ್ತೇನೆ ನಮ್ಮ ಅಕ್ಕ ಪಕ್ಕ ಯಾರನ್ನು ಇಟ್ಟುಕೊಳ್ಳುತ್ತೇವೆ ಎನ್ನುವುದು ಮುಖ್ಯ. ಪಟಾಲಂಗಳಿಂದ ಗಾಜಿನ ಮನೆಗೆ ಕಲ್ಲು ಹೊಡೆಸುವ ಕೆಲಸ ಶಾಸಕರು ಬಿಡಲಿ ಎಂದು ಶಾಸಕ ತಿಪ್ಪಾರೆಡ್ಡಿ ವಿರುದ್ಧ ರಘು ಅಚಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿದೆ. ಕೆಳಗಿಂದ ಒಂದು ರೀತಿ, ಕಾಂಕ್ರೀಟ್ ರೋಡ್‌ನಲ್ಲಿ ಕೆಟ್ಟೋಗಿದೆ. ಚಿತ್ರದುರ್ಗದಲ್ಲಿ ಎಷ್ಟು ಕಾಂಕ್ರೀಟ್ ರೋಡ್ ಆಗಿದೆ ಕ್ವಾಲಿಟಿ ಚೆಕ್ ಮಾಡಿಸೋಣ. ಇದರಲ್ಲಿ ಕಳಪೆ ಇಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ ಎಂದು ಶಾಸಕರಿಗೆ ಸವಾಲು ಹಾಕಿದರು.
ನನ್ನ ಮೇಲೆ ಇದುವರೆಗೂ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ಕಳೆದ 25 ವರ್ಷಗಳಿಂದ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ಎಲ್ಲಾ ಪಕ್ಷಗಳ ಮಂತ್ರಿಗಳು ನನ್ನ ಸ್ನೇಹಿತರೇ ಯಾರ ಬಳಿಯೂ ಫೇವರ್ ತಗೆದುಕೊಂಡಿಲ್ಲ. ನಾನು ಎಲ್‌ಎಲ್‌ಸಿ ಆಗಿದ್ದಾಗ ಏನು ಕೆಲಸ ಮಾಡಿದ್ದೇನೆ ಎನ್ನುವುದನ್ನು ತಿಳಿಸಿ ಚುನಾವಣೆಯಲ್ಲಿ ಜನರ ಮುಂದೆ ಮತ ಕೇಳುತ್ತೇನೆ. ಬರುವ ಫೆಬ್ರವರಿ 7 ರ ಬೆಳಗ್ಗೆಯಿಂದ ಪ್ರತೀ ಹಳ್ಳಿಗೂ ಪ್ರಚಾರಕ್ಕೆ ತೆರಳುತ್ತೇನೆ ಎಂದರು.
ನಾನು ಏನು ಕೆಲಸ ಮಾಡಿದ್ದೇನೆ ಎಂದು ಇವರ ತರ ಡೋಲು ಹೊಡೆದುಕೊಂಡು ಹೋಗಲ್ಲ. ಹೆಲಿಕಾಪ್ಟರ್‌ನಲ್ಲಿ ಓಡಾಡುವುದು ಅದು ನನ್ನ ವೈಯಕ್ತಿಕ. ನಾನು ಹೈವೇಲಿ ಟ್ರಾವೆಲ್ ಮಾಡಲ್ಲ, 11 ವರ್ಷದಿಂದ ಚಾಪರ್ ಅಲ್ಲಿಯೇ ಓಡಾಡುವುದು ಎಂದು ರಘು ಆಚಾರ್ ತಿಳಿಸಿದರು.











Click it and Unblock the Notifications