ಮೈತ್ರಿಯಿಂದ ಕಾಂಗ್ರೆಸ್ ಗೆ ಧಕ್ಕೆ: ಮಾಜಿ ಸಚಿವ ಆಂಜನೇಯ
ಚಿತ್ರದುರ್ಗ, ಮೇ 24: ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆಯಾಗಿದೆ ಎಂದು ಚಿತ್ರದುರ್ಗದಲ್ಲಿ ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನರನ್ನು ಮೋದಿ ವಶೀಕರಣ ಮಾಡ್ಕೊಂಡು ಗೆದ್ದಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಭರವಸೆ ಈಡೇರಿಸಿಲ್ಲ, ಬಂಡವಾಳ ಶಾಹಿಗಳ ಹಣದಿಂದ ಮಾರ್ಕೆಟಿಂಗ್ ಮಾಡಿಕೊಂಡು ಬಿಜೆಪಿ ಗೆದ್ದಿದೆ. ಬಿಜೆಪಿ ಬಣ್ಣ ಬಣ್ಣದ ಮಾತುಗಳನ್ನಾಡಿ ಗೆದ್ದಿದ್ದು, ಮೋದಿ ಪ್ರಚೋದನೆ ಮಾಡುವ ಮಾತಾಡಿದಂತೆ ಆಡಳಿತ ನಡೆಸಲಿ ಎಂದರು.
ಮೈತ್ರಿಯಿಂದ ಕಾಂಗ್ರೆಸ್ ಗಷ್ಟೇ ಅಲ್ಲ. ಜೆಡಿಎಸ್ ಮೇಲೂ ಪರಿಣಾಮ ಆಗಿದೆ, ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲ. ಎರಡು ಪಕ್ಷಗಳ ವರಿಷ್ಠರ ಮಟ್ಟದಲ್ಲಿ ಮೈತ್ರಿಯಾಗಿದೆ. ಕಾರ್ಯಕರ್ತರು, ಮುಖಂಡರ ಮಟ್ಟದಲ್ಲಿ ಮೈತ್ರಿಯಾಗಿಲ್ಲ, ಮೈತ್ರಿ ಕೇವಲ ಸರ್ಕಾರಕ್ಕೆ ಸೀಮಿತವಾಗಬೇಕಿತ್ತು.

ಚುನಾವಣೆಗೆ ಮೈತ್ರಿ ಅಗತ್ಯವಿರಲಿಲ್ಲ, ಮೈತ್ರಿಯ ಫಲ ಜೆಡಿಎಸ್ ಗೂ ಇಲ್ಲ, ಕಾಂಗ್ರೆಸ್ ಗೂ ಸಿಗಲಿಲ್ಲ, ಎರಡೂ ಪಕ್ಷಗಳು ಅವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸುದ್ದಿಗೋಷ್ಠಿಗೆ ಜೆಡಿಎಸ್ ಮುಖಂಡರು ಗೈರಾಗಿದ್ದರು.












Click it and Unblock the Notifications