'ಬಿ.ಕೆ ಹರಿಪ್ರಸಾದ್ ದೊಡ್ಡ ನಾಯಕ, ಆದ್ರೆ ಇಷ್ಟೊಂದು ಹೊಟ್ಟೆ ಕಿಚ್ಚು ಇರಬಾರದು'

ಚಿತ್ರದುರ್ಗ, ಸೆಪ್ಟೆಂಬರ್ 12: ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಒಬ್ಬ ದೊಡ್ಡ ನಾಯಕ, ಅವರಿಗೆ ಇಷ್ಟೊಂದು ಹೊಟ್ಟೆ ಕಿಚ್ಚು ಇರಬಾರದು ಎಂದು ಕುರುಬ ಸಮುದಾಯದ ಈಶ್ವರನಂದಪುರಿ ಶ್ರೀಗಳು ಆಕ್ರೋಶ ಹೊರ ಹಾಕಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಒಬ್ಬ ದೊಡ್ಡ ನಾಯಕ ಅವರಿಗೆ ಇಷ್ಟು ಹೊಟ್ಟೆ ಕಿಚ್ವು ಇರಬಾರದು. ಎರಡನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಅವರು ಒಂದು ಸಮುದಾಯವನ್ನು ಬೆಳೆಸಿದರು. ಕುರುಬರನ್ನು ಬೆಳೆಸಿದ್ದರು ಅಂತ ಹೇಳುತ್ತಿದ್ದಾರೆ. ಈ ರೀತಿ ಹೇಳಬಾರದು, ಹರಿಪ್ರಸಾದ್ ಒಬ್ಬ ಪ್ರಬುದ್ಧ ರಾಜಕಾರಣಿ ಅವರು ಹಾಗೆ ಮಾತಾನಾಡಬಾರದಿತ್ತು ಎಂದರು.

Eshwaranandapuri Sri Outrage Against B.K Hariprasad

ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹರಿಪ್ರಸಾದ್, ಪಂಚೆ, ವಾಚ್ ಕಟ್ಟಿಕೊಂಡು ಸಿಎಂ ಆಗಿದ್ದಾರೆ ಎಂದು ಹೆಸರು ಹೇಳದೇ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ದಲಿತರನ್ನು ಸಿಎಂ ಮಾಡಬಹುದಿತ್ತು ಎಂದಿದ್ದರು. ಈ ಹೇಳಿಕೆಯನ್ನು ಶ್ರೀಗಳು ಖಂಡಿಸಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಚಿವ ಸಂಪುಟದಲ್ಲಿ ಎಷ್ಟು ಜನ ಕುರುಬರು ಇದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಎಲ್ಲಾ ಸಮುದಾಯದ ನಾಯಕ. ಜಾತಿ ರಾಜಕಾರಣ ಯಾವತ್ತು ಮಾಡಲಿಲ್ಲ‌. ಅವರು ಬಡವರು, ಹಿಂದುಳಿದ, ಮಹಿಳೆಯರ, ದಲಿತರ ಪರವಾಗಿ ಧ್ವನಿ ಎತ್ತರುವ ಜನ ನಾಯಕರು. ಇಂತಹ ನಾಯಕನ ಬಗ್ಗೆ ಜನತೆಗೆ ಹರಿಪ್ರಸಾದ್ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದನ್ನು ನಾನು ಯಾಕೆ ಪ್ರಸ್ತಾಪ ಮಾಡಿದೆ ಎಂದರೆ ಯಾರು ಕೇಳದೇ ಹೋದರೆ, ಮಾತಾನಾಡದೇ ಹೋದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದರು.

ಜಾತಿ ವರ್ಕ್ ಔಟ್ ಮಾಡಿದರೆ ಕುರುಬರು 10-12 ಜನ ಮಂತ್ರಿಗಳು ಇರುತ್ತಿದ್ದರು. ಸಿದ್ದರಾಮಯ್ಯ ಹಾಗೆ ಮಾಡಲ್ಲಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ರಾಜಕೀಯ ಮಾಡಲಿಲ್ಲ ಜನರಿಗೊಸ್ಕೊರ ರಾಜಕೀಯ ಮಾಡಿದರು. ಇದನ್ನು ಬಿ.ಕೆ ಹರಿಪ್ರಸಾದ್ ಅರ್ಥ ಮಾಡಿಕೊಳ್ಳಬೇಕು. ಹಿಂದುಳಿದ ಸಮಾಜಗಳು ಒಂದಾಗಬೇಕು ಎಂದು ಸಂದೇಶವನ್ನು ಶ್ರೀಗಳು ನೀಡಿದ್ದಾರೆ.

Eshwaranandapuri Sri Outrage Against B.K Hariprasad

ಕುರುಬರು ಎಲ್ಲಾ ಸಮುದಾಯದ ಪರವಾಗಿ ಇದ್ದಾರೆ ಎಂದು ಸಂದೇಶ ಕೊಟ್ಟಂತಹ ವ್ಯಕ್ತಿ ಯಾರಾದರೂ ಇದ್ದರೇ ಅದೇ ಸಿದ್ದರಾಮಯ್ಯ .ಅವಕಾಶಗಳನ್ನು ಹಂಚಿಕೊಳ್ಳಲು ಎಲ್ಲರೂ ಬರುತ್ತಾರೆ ಆದರೆ ಉಪಕಾರ ಮಾಡಿದವರನ್ನು ಎಲ್ಲರೂ ಬೇಗ ಮರೆಯುತ್ತಾರೆ. ಹೈಕಮಾಂಡ್ ಒಪ್ಪಿಗೆ ಹಾಗೂ 136 ಶಾಸಕರಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ ಎಂದು ಈಶ್ವರನಂದ ಶ್ರೀಗಳು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+