ಸಾಕ್ಷ್ಯ ನಾಶ ಶಂಕೆ ಹಿನ್ನೆಲೆ ರೇಣುಕಾಸ್ವಾಮಿ ಕುಟುಂಬದ ಮೇಲೂ ಪೊಲೀಸರ ಹದ್ದಿನ ಕಣ್ಣು
Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನು ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಇದೀಗ ಸಂಧಾನದ ವಿಚಾರ ಬೆಳಕಿಗೆ ಬಂದಿದೆ. ಹಾಗಾದರೆ ಪೊಲೀಸರು ಏನೆಲ್ಲ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಹರಸಾಹರ ಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿಜಯಲಕ್ಷ್ಮಿ ಅವರು ಟೆಂಪಲ್ ರನ್ ಮುಂದುವರೆಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿನ ಪ್ರಸಾದ ತಂದು ದರ್ಶನ್‌ಗೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಈಗಾಗಲೇ ನಟ ದರ್ಶನ್‌ನನ್ನು ಚಿತ್ರರಂಗದ ಹಲವರು ಭೇಟಿ ಮಾಡಿ ಬಂದಿದ್ದಾರೆ. ಅಲ್ಲದೆ, ದರ್ಶನ್ ಹಾಗೂ ರೇಣುಕಾಸ್ವಾಮಿ ಕುಟುಂಬದ ನಡುವೆ ಸಂಧಾನ ಮಾಡುವ ಕಾರ್ಯಗಳು ಕೂಡ ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನುವ ವಿಚಾರ ಬೆಳಕಿದೆ ಬಂದಿದೆ. ಆದ್ದರಿಂದ ಎಚ್ಚೆತ್ತ ಪೊಲೀಸರು ಕಂಬಿ ಹಿಂದೆ ಇರುವ ನಟ ದರ್ಶನ್ ಅಲ್ಲದೆ, ಮೃತ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡುವವರ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರದಲ್ಲಿ ನಟ ದರ್ಶನ್ ಪರವಾಗಿ ಕೆಲವರು ಮಾತನಾಡುತ್ತಿದ್ದರೆ, ಇನ್ನೂ ಕೆಲವರು ವಿರೋಧದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ ಸರದಿ ಪ್ರಕಾರ ಪ್ರತಿದಿನ ರೇಣುಕಾಸ್ವಾಮಿ ಮನೆಗೆ ಸರದಿ ಪ್ರಕಾರ ಭೇಟಿ ನೀಡುತ್ತಲೇ ಇದ್ದಾರೆ. ಆದ್ದರಿಂದ ಸಾಕ್ಷ್ಯ ನಾಶವಾಗುವ ಶಂಕೆ ವ್ಯಕ್ತವಾದ ದೃಷ್ಟಿಯಿಂದ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇದರಿಂದ ಈಗಾಗಲೇ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದವರಿಗೆ ಢವಢವ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಇದುವರೆಗೂ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದವರನ್ನು ಪೊಲೀಸರು ತನಿಖೆಗೊಳಪಡಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕುಮಾರ್ ಬಂಗಾರಪ್ಪ ಏನ್ ಹೇಳಿದ್ದೇನು?: ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ನನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಬಲವಾದ ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಮುಂದಾಗಿದ್ದಾರೆ. ಇನ್ನು ಕೆಲವರು ದರ್ಶನ್ ಪರ, ಇನ್ನು ಕೆಲವರು ವಿರೋಧವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ.
ಹಾಗೆಯೇ ಇದೀಗ ಕುಮಾರ್ ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿ ಶಾಕಿಂಗ್ ಹೇಳಿಕೆಯೊದನ್ನು ನೀಡಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆ ನಡೆಯಲೇಬಾರದಿತ್ತು, ಆದರೆ ನಡೆದುಬಿಟ್ಟಿದೆ. ಚಿತ್ರರಂಗದಲ್ಲಿ ಹೊಗಳುವುದರ ಜೊತೆ ತೆಗಳುವ ಸನ್ನಿವೇಶಗಳು ಇರುತ್ತದೆ ಎಂದು ನಟ ಕುಮಾರ್ ಬಂಗಾರಪ್ಪ ಹೇಳಿದರು. ಅಲ್ಲದೆ, ರೇಣುಕಾಸ್ವಾಮಿ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಹೇಳಿದರು.
ಇದೀಗ ಈ ಪ್ರಕರಣ ಕೋರ್ಟ್‌ನಲ್ಲಿದ್ದು, ಈ ಬಗ್ಗೆ ಮಾತಾಡುವುದು ಅಷ್ಟು ಸರಿಯಲ್ಲ. ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ತನಿಖೆ ನಡೆಯುತ್ತಿದೆ. ನ್ಯಾಯಾಲಯ ಇದೆ, ಕಾನೂನಿದೆ ಎಲ್ಲಾವನ್ನು ನೋಡಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಯಾರಿಗೇ ನೋವಾದರೂ ಕುಟುಂಬದ ಎಲ್ಲಾರಿಗೂ ನೋವಾಗುತ್ತದೆ. ಈ ಘಟನೆ ದರ್ಶನ್ ಅವರಿಂದಲೇ ಆಗಿದ್ದರೆ, ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ದೇವರು ಇದ್ದಾನೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟು, ಅನ್ಯಾಯ ಆದವರಿಗೆ ನ್ಯಾಯ ಕೊಡಿಸುತ್ತಾನೆ. ನಾನು ಸಹ ದರ್ಶನ್ ಜೊತೆ ಒಂದು ಸಿನಿಮಾ ಮಾಡಿದ್ದೀನಿ. ಒಂದು ತಿಂಗಳ ದರ್ಶನ್ ಜೊತೆ ಕೆಲಸ ಮಾಡಿದೆ. ದರ್ಶನ್‌ಗೆ ಅವರದ್ದೇ ಆದಂತಹ ಆ್ಯಟಿಟ್ಯೂಡ್ ಇದೆ. ದರ್ಶನ್ ತನ್ನದೇ ಶ್ರಮದಿಂದ ಬೆಳೆದು ಸ್ಟಾರ್ ಆದವರು ಎಂದು ಹೇಳಿದರು.












Click it and Unblock the Notifications