ಬಿಜೆಪಿ ನಾಯಕರು ಒಂದು ಮಾಸ್ಕ್‌ ಖರೀದಿ ಮಾಡಿದ್ದು 2,500ಕ್ಕೆ ನಾವು ಕೇವಲ 10-20 ರೂಪಾಯಿಗಷ್ಟೇ: ಡಿ.ಸುಧಾಕರ್

ಚಿತ್ರದುರ್ಗ, ನವೆಂಬರ್, 11: ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಸವಾಲಿನ ಹೇಳಿಕೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡುವಂತಹ ಕೆಲಸಗಳನ್ನು ಮಾಡಿದ್ದಾರೆ. ಇನ್ನೂ ಈ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಡಿ.ಸುಧಾಕರ್ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹೊರ ರಾಜ್ಯ ಚುನಾವಣೆ, ಬೈ ಎಲೆಕ್ಷನ್‌ಗೆ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಹಣ ಬಳಕೆ ವಿಚಾರವಾಗಿ ಪ್ರಧಾನಿ ಮೋದಿ ಸವಾಲಿನ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಸ್ಟವಾಗಿ‌ ಉತ್ತರ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ನಿಲುವೇ ನನ್ನ ನಿಲುವು ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

D Sudhakar Reaction on BJP Corruption

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಅಬಕಾರಿ ಇಲಾಖೆಯಲ್ಲಿ ಕೆಲಸ‌ ಮಾಡಿದವನಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ಈ ವಿಚಾರ ಸತ್ಯಕ್ಕೆ‌ ದೂರವಾದುದು. ಈ ವಿಚಾರವಾಗಿ ಸಿಎಂ ಸವಾಲ್ ಹಾಕಿದ್ದು, ಅವರ ನಿಲುವು ಸರಿ ಇದೆ. ಅಷ್ಟೊಂದು ಭ್ರಷ್ಟಾಚಾರ ಮಾಡುವುದಕ್ಕೆ ಆ ಇಲಾಖೆ ಭಾರೀ ಅಲ್ಲ ಎಂದರು.

ಕೊರೊನಾ ಸಮಯದಲ್ಲಿ ಬಿ.ಎಸ್‌.ಯಡಿಯೂರಪ್ಪ, ಶ್ರೀ ರಾಮುಲು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಸಮಯದಲ್ಲಿ 2,500 ರೂಪಾಯಿಗೆ ಒಂದು ಮಾಸ್ಕ್ ಖರೀದಿ ಮಾಡಿದ್ದಾರೆ. ನಾವು 10-20 ರೂಪಾಯಿ ಮಾಸ್ಕ್ ಖರೀದಿ ಮಾಡುತ್ತಿದ್ದೆವು. ಆದರೆ ಎರಡೂವರೆ ಸಾವಿರ ರೂಪಾಯಿಯ 3 ಲಕ್ಷ ಮಾಸ್ಟ್‌ ಖರೀದಿ ಮಾಡಿದ್ದಾರೆ. ಇದರಲ್ಲಿ ಹೊಸ ಸತ್ಯಾಂಶ ಇದೆಯೋ ಇಲ್ಲವೋ ನಿಮ್ಮ ಊಹೆಗೇ ಬಿಡುತ್ತೇನೆ. ಈ ವಿಚಾರವಾಗಿ ಉಪ್ಪು ತಿಂದವರು ನೀರು ಕುಡಿತಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಡಿಸೆಂಬರ್‌ವರೆಗೆ ಮಾತ್ರ ಎಂಬ ಕೇಂದ್ರ ಸಚಿವ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ಜನಪರ ವಿಚಾರಗಳನ್ನು ಯಾವುದನ್ನೂ ಅವರು ಚರ್ಚೆ ಮಾಡಲ್ಲ. ನಾವು ಕೊಟ್ಟ ಗ್ಯಾರಂಟಿ ಎಷ್ಟು ಅನುಕೂಲ ಆಗಿದೆ ಅಂತಾ ಉಪ ಚುನಾವಣೆಯಲ್ಲಿ ಉತ್ತರ ಸಿಗಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದೀಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಕ್ಕ ಉತ್ತರವನ್ನು ಈಗಾಗಲೇ ನೀಡಿದ್ದಾರೆ ಅಂತಾ ಸಚಿವ ಡಿ.ಸುಧಾಕರ್ ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕೊರೊನಾ ಸಮಯದಲ್ಲಿ ಬಿಜೆಪಿ ಮಾಡಿದ ಭ್ರಷ್ಟಚಾರಗಳನ್ನು ಎತ್ತಿಹಿಡಿಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+