ಕೇದಾರನಾಥದಲ್ಲಿ ಸಿಲುಕಿದ ಚಿತ್ರದುರ್ಗದ ಮೂಲದ ಮೂವರು ಮಹಿಳೆಯರು

ಚಿತ್ರದುರ್ಗ, ಆಗಸ್ಟ್‌, 15: ಕೇದಾರನಾಥ ದೇವಾಲಯ ದರ್ಶನಕ್ಕೆ ಹೋಗಿದ್ದ ಚಿತ್ರದುರ್ಗದ ಮೂವರು ಮಹಿಳೆಯರು ಕೇದಾರ ಬಳಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗೀತಾ, ಅಂಬಿಕಾ ಹಾಗೂ ರತ್ನಮ್ಮ ಕೇದಾರ ಬಳಿ ಸಿಲುಕಿಕೊಂಡವರಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ 40 ಜನರ ತಂಡದೊಂದಿಗೆ ಚಿತ್ರದುರ್ಗದ ಮೂವರು ಮಹಿಳೆಯರು ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಕೇದಾರನಾಥ ದೇವಾಲಯ ದರ್ಶನಕ್ಕೆ ಹೋಗಿದ್ದರು. ಇದೀಗ ಕೇದಾರನಾಥ ಬಳಿ ವಿಪರೀತ ಮಳೆ ಹಾಗೂ ಗುಡ್ಡ ಕುಸಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿಂದ ಸುಮಾರು 30 ಕೀಲೋ ಮೀಟರ್ ದೂರದಲ್ಲಿ ಇವರು ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Chitradurgas Three women stuck in Kedarnath

ಇನ್ನು ಈ ಮೂವರು ಮಹಿಳೆಯರು ತಮ್ಮ ತವರಿಗೆ ಸುರಕ್ಷಿತವಾಗಿ ಕರೆಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮೈಸೂರಿಗರು ನಾಪತ್ತೆ

ಕೆಲವು ತಿಂಗಳ ಹಿಂದೆ ಕುಲು ಮನಾಲಿ ಪ್ರವಾಸಕ್ಕೆ ಹೋಗಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿಯೊಂದು ಲಭ್ಯವಾಗಿತ್ತು.

ಪ್ಯಾಕೇಜ್ ಟೂರ್‌ನಲ್ಲಿ ಶ್ರೀನಿಧಿ, ನವ್ಯ,ವೀರ್ ಹಾಗೂ ಅವರ ಪತ್ನಿ ಮೈಸೂರಿನಿಂದ ಕುಲು ಮನಾಲಿ ಪ್ರವಾಸಕ್ಕೆ ತೆರಳಿದ್ದರು. ರಾಜ್ಯಾದ್ಯಂತ 50ಕ್ಕೂ ಹೆಚ್ಚು ಜನರು ಇವರ ಜೊತೆ ತೆರಳಿದ್ದರು ಎಂದು ತಿಳಿದುಬಂದಿತ್ತು. ಇನ್ನು ಜುಲೈ 09ರಂದು ಅವರು ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು, ಈ ವೇಳೆ ಭಾರೀ ಮೆಳೆ ಇರುವ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಿದ್ದರು. ಆದ್ದರಿಂದ ನಾವು ಕೊಠಡಿಯಲ್ಲಿ ಸುರಕ್ಷಿತರಾಗಿದ್ದೇವೆ ಎನ್ನುವ ಮಾಹಿತಿಯನ್ನು ರವಾನಿಸಿದ್ದರು.

ಬಳಿಕ ಯಾರೊಬ್ಬರೂ ಸಂಪರ್ಕ್ಕೆ ಸಿಗುತ್ತಿಲ್ಲ ಹಾಗೂ ಮಾಹಿತಿಯೂ ಇಲ್ಲದಂತಾಗಿತ್ತು. ಈ ಹಿನ್ನೆಲೆ ಪ್ರವಾಸಿಗರು ಮನೆಯವರು ಆತಂಕಗೊಂಡಿದ್ದು, ನಮ್ಮವರನ್ನು ಸುರಕ್ಷಿತವಾಗಿ ಕರೆತರುವಂತೆ‌ ಮನವಿ ಮಾಡಿದ್ದರು. ಆದರೆ ಸಂಬಂಧಿಕರಿಗೆ ಯಾವ ಟ್ರ್ಯಾವಲ್ಸ್ ಅಂತಲೂ ಕೂಡ ಸರಿಯಾದ ಮಾಹಿತಿ ಇಲ್ಲದಂತಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+