Breaking: ಬಂಧನದ ಊಹಾಪೋಹದ ಬಗ್ಗೆ ಮುರುಘಾ ಶ್ರೀಗಳ ಸ್ಪಷ್ಟನೆ
ಚಿತ್ರದುರ್ಗ, ಆಗಸ್ಟ್ 29: ಚಿತ್ರದುರ್ಗದ ಮುರುಘಾಮಠಕ್ಕೆ ಸಂಬಂಧಿಸಿದ ಯಾವುದೇ ರೀತಿ ಗಾಳಿಸುದ್ದಿಗಳನ್ನು ನಂಬಬಾರದು ಎಂದು ಮುರುಘಾಮಠದ ಶಿವಮೂರ್ತಿ ಶರಣರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಮಠಕ್ಕೆ ಹಿಂದುರುಗಿದ ಮುರುಘಾ ಶರಣರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ಕಾರಣಕ್ಕೂ ಭಕ್ತರು ಆತಂಕಕ್ಕೆ ಒಳಗಾಬೇಡಿ. ಎದುರಾಗಿರುವ ಸಮಸ್ಯೆಯನ್ನು ಶಾಂತವಾಗಿ ಎದುರಿಸೋಣ. ಎಲ್ಲರೂ ಸೇರಿ ಎದುರಿಸೋಣ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.
ಇದೇ ವೇಳೆ ಇಂಥ ಆರೋಪಗಳು ಮತ್ತು ಘಟನೆಗಳು ನಡೆಯುತ್ತಿರುವುದು ಮೊದಲೇನಲ್ಲ. ಹಿಂದೆಯಲ್ಲಾ ಇಂಥ ಪಿತೂರಿಗಳು ಒಳಗಡೆ ನಡೆಯುತ್ತಿದ್ದು, ಈಗ ಹೊರಗೆ ನಡೆಯುತ್ತಿದೆ. ಇದಕ್ಕೆ ತಾಂತ್ವಿಕ ಅಂತ್ಯ ಕಾಣಬೇಕಾಗಿದೆ ಎಂದು ಮುರುಘಾಮಠದ ಶಿವಮೂರ್ತಿ ಶರಣರು ಹೇಳಿದ್ದಾರೆ.

ನೆಲದ ಕಾನೂನು ಗೌರವಿಸುವಂತೆ ಕರೆ:
ಈ ನೆಲದ ಕಾನೂನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಮಠಾಧೀಶರು ಹೇಳಿದರು. ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ, ಹೀಗೆ ಇರುವಾಗ ಯಾವುದೇ ಊಹಾಪೋಹಗಳಿಗೆ ಅವಕಾಶ ಇರುವುದಿಲ್ಲ. ಯಾರೊಬ್ಬರು ಕೂಡಾ ಗಾಳಿ ಸುದ್ದಿಗಳನ್ನು ನಂಬಬಾರದು ಎಂದು ಭಕ್ತರಿಗೆ ಶ್ರೀಗಳ ಕಿವಿಮಾತು ಹೇಳಿದರು.
ಮುರುಘಾಮಠವು ಎಲ್ಲಾ ಆರೋಪಗಳಿಂದ ಮತ್ತು ಸಮಸ್ಯೆಯಿಂದ ಮುಕ್ತವಾಗಿ ಹೊರ ಬರುತ್ತೇನೆ. ಎಲ್ಲರಿಗೂ ಶುಭವಾಗಲಿ. ಅಭಿಮಾನದ ಚಿಲುಮೆಯನ್ನು ಚಿಮ್ಮಿಸಿದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಿವಮೂರ್ತಿ ಶರಣರು ಹೇಳಿದ್ದಾರೆ.












Click it and Unblock the Notifications