ದೇಶದಲ್ಲೇ 2ನೇ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ಪಡೆದ ಚಿತ್ರದುರ್ಗ ಡಿಸಿಸಿ ಬ್ಯಾಂಕ್..!
ಚಿತ್ರದುರ್ಗ, ಅಕ್ಟೋಬರ್ 04: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರಾಷ್ಟ್ರದ 02ನೇ ಅತ್ಯುತ್ತಮ ಡಿ.ಸಿ.ಸಿ. ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಾಗೂ ಚಿತ್ರದುರ್ಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿರುವ ಡಿ.ಸುಧಾಕರ್ ತಿಳಿಸಿದ್ದಾರೆ.
ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 351 ಡಿ.ಸಿ.ಸಿ. ಬ್ಯಾಂಕುಗಳ ಪೈಕಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 02 ನೇ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಯನ್ನು ಚಿತ್ರದುರ್ಗದ ಡಿ.ಸಿ.ಸಿ. ಬ್ಯಾಂಕ್ ಪಡೆದುಕೊಂಡಿದೆ ಎಂದರು.

ನ್ಯಾಷನಲ್ ಫೆಡರೇಷನ್ ಆಫ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ ಲಿ.(ಎನ್.ಎ.ಎಫ್.ಎಸ್.ಸಿ.ಒ.ಬಿ) ಮುಂಬೈ ಅವರ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ಕೊಡಮಾಡುವ ಅತ್ಯುತ್ತಮ ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೊದಲ ಸ್ಥಾನವನ್ನು ತೆಲಂಗಾಣದ ಕರೀಂನಗರ ಡಿಸಿಸಿ ಬ್ಯಾಂಕ್ ಹಾಗೂ ಮೂರನೆ ಸ್ಥಾನವನ್ನು ರಾಜಸ್ಥಾನದ ಜೈಪುರ ಡಿಸಿಸಿ ಬ್ಯಾಂಕ್ ಪಡೆದುಕೊಂಡಿದೆ.
ಇದು 2021-22ನೇ ಸಾಲಿನ ಪ್ರಶಸ್ತಿಯಾಗಿದೆ. ಕಳೆದ ಸೆ.26 ರಂದು ರಾಜಸ್ಥಾನ ರಾಜ್ಯದ ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಮತ್ತು ಪಾರಿತೋಷಕ ನೀಡಿ ಸನ್ಮಾನಿಸಲಾಗಿದೆ.
ಡಿ.ಸಿ.ಸಿ. ಬ್ಯಾಂಕ್ ಕಳೆದ 67 ವರ್ಷಗಳಿಂದ ರೈತಬಾಂಧವರ ಅವಶ್ಯಕತೆಗೆ ಅನುಗುಣವಾಗಿ ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ ನೀಡುತ್ತಾ ಬಂದಿದ್ದು, ಸಾಲ ಹಂಚಿಕೆ, ವಸೂಲಾತಿ ಮತ್ತು ಠೇವಣಿ ಸಂಗ್ರಹಣೆ, ಸ್ವಸಹಾಯ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಾಧಿಸುತ್ತಾ ಬಂದಿದೆ.

ಬ್ಯಾಂಕ್ ರೈತ ಸ್ನೇಹಿ ಮತ್ತು ಗ್ರಾಮೀಣಾಭಿವೃದ್ದಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದ್ದು ಬ್ಯಾಂಕ್ ಪ್ರತಿ ವರ್ಷ ಎಲ್ಲಾ ವ್ಯವಹಾರಗಳಲ್ಲಿ ಅಂದರೆ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಷೇರು ಸಂಗ್ರಹಣೆ, ಹೂಡಿಕೆಗಳು, ಸಾಲ ವಸೂಲಾತಿ, ಹೊಸ ರೈತರಿಗೆ ಸಾಲ ವಿತರಣೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿರುವುದನ್ನು ಆಧರಿಸಿ ಚಿತ್ರದುರ್ಗದ ಬ್ಯಾಂಕ್‍ಗೆ ಪ್ರಶಸ್ತಿ ಸಂದಿದೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಅವರು, ಪ್ರ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತಭಾಂದವರಿಗೆ ಬೆಳೆ ಸಾಲ ಮತ್ತು ವ್ಯವಸಾಯ ಅಭಿವೃದ್ಧಿಗೆ ಮಧ್ಯಮಾವಧಿ ಸಾಲ ಹಾಗೂ ವ್ಯವಸಾಯೇತರ ಸಾಲಗಳಾದ ಗೃಹ ನಿರ್ಮಾಣ/ಖರೀದಿ ಸಾಲ, ಚಿನ್ನಾಭರಣ ಸಾಲ, ವಾಹನ ಸಾಲ, ಮೀರಳತೆ ಸಾಲ, ನೌಕರ ವರ್ಗಕ್ಕೆ ಸಂಬಳಾಧಾರಿತ ಸಾಲ, ಸ್ಥಿರಾಸ್ತಿ ಆಧಾರದ ಮೇಲೆ ಸಾಲ, ಸ್ವಸಹಾಯ ಸಂಘಗಳಿಗೆ (ಎಸ್.ಹೆಚ್.ಜಿ) ಸಾಲ ನೀಡುವ ಮೂಲಕ ಎಲ್ಲಾ ವರ್ಗದ ಸಹಕಾರಿ ಬಂಧುಗಳ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ನೆರವು ಕಲ್ಪಿಸಿದೆ.
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಚಿತ್ರದುರ್ಗ ಜಿಲ್ಲಾ ಮಟ್ಟದ ಬ್ಯಾಂಕಾಗಿದ್ದು, 14 ಶಾಖೆಗಳನ್ನು ಹೊಂದಿದ್ದು, ಚಿತ್ರದುರ್ಗದಲ್ಲಿ ಕೇಂದ್ರ ಕಛೇರಿ ಹೊಂದಿರುತ್ತದೆ. ಕಳೆದ 67 ವರ್ಷಗಳಿಂದ ರೈತಬಾಂಧವರ ಅವಶ್ಯಕತೆಗೆ ಅನುಗುಣವಾಗಿ ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ ನೀಡುತ್ತಾ ಬಂದಿದ್ದು, ಸಾಲ ಹಂಚಿಕೆ, ವಸೂಲಾತಿ ಮತ್ತು ಠೇವಣಿ ಸಂಗ್ರಹಣೆ, ಸ್ವಸಹಾಯ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಾಧಿಸುತ್ತಾ ಬಂದಿದೆ.
ಕಳೆದ ಮಾರ್ಚ್ ಅಂತ್ಯದವರೆಗೆ ಬ್ಯಾಂಕಿನಲ್ಲಿ 415 ಸಹಕಾರ ಸಂಘಗಳು ಸದಸ್ಯತ್ವನ್ನು ಪಡೆದಿರುತ್ತಾರೆ. ಡಿ.ಸುಧಾಕರ್‍ರವರು 2004 ರಿಂದ ಬ್ಯಾಂಕಿನ ನಿರ್ದೇಶಕರಾಗಿ ಮತ್ತು 3 ಬಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ನಾಯಕತ್ವ ಮತ್ತು ಅಧ್ಯಕ್ಷತೆಯ ಮಾರ್ಗದರ್ಶನದಲ್ಲಿ ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಹಾಗೂ ಶಾಸಕರಾದ ಟಿ.ರಘುಮೂರ್ತಿ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಬೆಂಬಲ ಮತ್ತು ಸಹಕಾರದೊಂದಿಗೆ ಬ್ಯಾಂಕ್ ರೈತ ಸ್ನೇಹಿ ಮತ್ತು ಗ್ರಾಮೀಣಾಭಿವೃದ್ದಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದ್ದು ಬ್ಯಾಂಕ್ ಪ್ರತಿ ವರ್ಷ ಎಲ್ಲಾ ವ್ಯವಹಾರಗಳಲ್ಲಿ ಅಂದರೆ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಷೇರು ಸಂಗ್ರಹಣೆ, ಹೂಡಿಕೆಗಳು, ಸಾಲ ವಸೂಲಾತಿ, ಹೊಸ ರೈತರಿಗೆ ಸಾಲ ವಿತರಣೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ.
ಠೇವಣಿ ರೂ.509.19 ಕೋಟಿ ಸಂಗ್ರಹಣೆಯಾಗಿರುತ್ತದೆ. 2023-24ನೇ ಸಾಲಿಗೆ ಜಿಲ್ಲೆಯ 66,000 ರೈತರಿಗೆ ರೂ.500 ಕೋಟಿ ಅಲ್ಪಾವಧಿ ಕೃಷಿ ಬೆಳೆ ಸಾಲ ವಿತರಿಸಲು ಹಾಗೂ 1,140 ರೈತರಿಗೆ ರೂ.74.50 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲು ಗುರಿ ಹಾಕಿಕೊಳ್ಳಲಾಗಿದೆ. 2022-23ನೇ ಸಾಲಿನಲ್ಲಿ 500 ಸ್ವಸಹಾಯ ಸಂಘಗಳಿಗೆ ರೂ.10 ಕೋಟಿ ಸಾಲ ವಿತರಿಸಲು ಗುರಿ ಹಾಕಿಕೊಳ್ಳಲಾಗಿದೆ.
ಜಿಲ್ಲೆಯ 8 ಗ್ರಾಮಗಳಲ್ಲಿ 8 ಹೊಸ ಶಾಖೆಗಳನ್ನು ತೆರಯಲು ಆರ್.ಬಿ.ಐ ನಿಂದ ಅನುಮತಿ ಪಡೆಯಲಾಗಿದೆ. ರಾಮಗಿರಿ, ಹೊರಕೆದೇವಪುರ, ಮಾಡದಕೆರೆ, ಹೊಸದುರ್ಗ ರೋಡ್, ದರ್ಮಪುರ, ಐಮಂಗಲ, ತಳಕು ಮತ್ತು ಸಾಸಲಹಳ್ಳಿಗಳಲ್ಲಿ ಬ್ಯಾಂಕಿನ ಹೊಸ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಂಡಿರುತ್ತದೆ. 2022-23ನೇ ಸಾಲಿಗೆ ಬ್ಯಾಂಕ್ ರೂ.7.28 ಕೋಟಿ ನಿವ್ವಳ ಲಾಭಗಳಿಸಿರುತ್ತದೆ ಎಂದರು.












Click it and Unblock the Notifications