• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗ: ಖಾಸಗಿ ಬಸ್ ಸುಟ್ಟು ಕರಕಲು, 6 ಸಾವು

By Srinath
|

ಚಿತ್ರದುರ್ಗ, ಏ. 16: ಒಂದೇ ಸಮನೆ ರಾತ್ರಿ ಸಮಯಗಳಲ್ಲಿ ದುಃಸ್ವಪ್ನದಂತೆ ಕಾಡುತ್ತಿದ್ದ ಭೀಕರ ಬಸ್ ಅಪಘಾತಗಳು ತಹಬಂದಿಗೆ ಬಂದಿವೆ ಅನ್ನುವಷ್ಟರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ ಮೇಟಿಕುರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದು ಬೆಳಗಿನ ಜಾವ (2 ಗಂಟೆಯಲ್ಲಿ) ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಲೇಲ್ಯಾಂಡ್ ಸ್ಲೀಪರ್ ಕೋಚ್ ಬಸ್ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದು, ಪಲ್ಟಿ ಹೊಡೆದಿದೆ. ತಕ್ಷಣ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ಇಡೀ ಬಸ್ಸು ಸುಟ್ಟು ಕರಕಲಾಗಿದೆ. ಬೆಂಗಳೂರಿನ ಮೆಜಿಸ್ಟಿಕ್ ನಲ್ಲಿರುವ ಎಸ್ ಪಿಆರ್ ಟ್ರಾವೆಲ್ಸ್ ಗೆ ಸೇರಿದ ಬಸ್ ಇದಾಗಿದೆ.

ದಾವಣಗೆರೆಯಿಂದ ಬೆಂಗಳೂರಿಗೆ ಬರುತ್ತಿದ್ದ ಈ ಬಸ್ಸಿನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. ಅವರ ಪೈಕಿ 6 ಮಂದಿ ಸಜೀವ ದಹನವಾಗಿದ್ದಾರೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ.
(ವೋಲ್ವೋ ಬಸ್ ದುರಂತಗಳು)

ಬಸ್ ಚಾಲಕನ ಅಜಾಗರೂಕತೆಯ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಚಾಲಕ ಹಮೀದ್ ಅಪಘಾತವಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು, ಹೊರ ಜಿಗಿದಿದ್ದಾರೆ. ತಕ್ಷಣ ಪೊಲೀಸರ್ ಮತ್ತು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಲಾಗಿ, ಪರಿಹಾರ ಕಾರ್ಯಗಳು ಭರದಿಂದ ನಡೆದಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

English summary
Chitradurga bus accident: 6 passengers burnt alive today early morning (April 16). The bus that belongs to SPR travels was travelling from Davanagere to Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X