ಶವಯಾತ್ರೆ ವೇಳೆ ಹಾರ್ನ್ ಮಾಡಿದ್ದಕ್ಕೆ ಬಸ್ ಡ್ರೈವರ್ ಗೆ ಥಳಿತ

ಚಿತ್ರದುರ್ಗ, ಜೂನ್ 6: ಶವಸಂಸ್ಕಾರ ಮಾಡಲು ಹೋಗುತ್ತಿದ್ದ ಸಂದರ್ಭ, ಹಿಂದೆ ಬಸ್ ನಲ್ಲಿ ಹಾರ್ನ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಚಾಲಕನಿಗೆ ಮೃತರ ಸಂಬಂಧಿಗಳು ಥಳಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಜಿಲ್ಲೆಯ ಮೇದೇಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಮುಂದೆ ಮುಸ್ಲಿಂ ಸಮುದಾಯದ ವ್ಯಕ್ತಿಯ ಶವಯಾತ್ರೆ ನಡೆಯುತ್ತಿತು. ಈ ವೇಳೆ ಹಾರ್ನ್ ಮಾಡಿದ ಎಂಬ ಕಾರಣಕ್ಕೆ ಖಾಸಗಿ ಬಸ್ ಚಾಲಕ ರಾಕೇಶ್ ಎಂಬುವವರ ಮೇಲೆ ಮೃತ ಸಂಬಂಧಿಕರು ಹಲ್ಲೆ ನೆಡೆಸಿದ್ದಾರೆ.

ಬಸ್ ನಿಲ್ದಾಣದ ಮುಂದೆ ಖಬರುಸ್ತಾನ್ ಬಳಿ ಶವಯಾತ್ರೆ ತೆರಳುತಿತ್ತು. ಆಗ ಬಸ್ ನಿಲ್ದಾಣಕ್ಕೆ ತಿರುವು ಪಡೆಯಲು ಬಸ್ ಚಾಲಕ ರಾಕೇಶ್ ಹಾರ್ನ್ ಮಾಡಿದ್ದಾರೆ. ಹಾರ್ನ್ ಮಾಡಿದ್ದಕ್ಕೆ ಆಕ್ರೋಶಗೊಂಡ ಮೃತರ ಸಂಬಂಧಿಕರು ಆತನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ರಾಕೇಶ್ ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆಯಿಂದ ಕ್ಷಣಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

bus driver beaten by people for horning during funeral

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಸಂತೋಷ್ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+