ಚಿತ್ರದುರ್ಗ: ಸಿದ್ದು ಕಾರ್ಯಕ್ರಮದಲ್ಲಿ ಕಪ್ಪು ಸೀರೆ ನೀರೆಯರ ಪ್ರತಿಭಟನೆ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಿತ್ರದುರ್ಗ, ಮೇ 13: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿರುವ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲಿ ಇಂದು ನಡೆಯುತ್ತಿರುವ ಜನರಿಗೆ ನಮನ- ಜನರಿಗೆ ಮನನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಕಪ್ಪುಸೀರೆಯುಟ್ಟ ನಾರಿಯರು ಪ್ರತಿಭಟಿಸಿಯೇ ಸ್ವಾಗತ ಕೋರಿದರು!

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದ ಬಳಿ ಆಗಮಿಸುತ್ತಿದ್ದಂತೆಯೇ ಧರಣಿ ಸಂಸ್ಥೆ ಅಧ್ಯಕ್ಷೆ ರಮಾ ನಾಗರಾಜ್ ಸೇರಿದಂತೆ ಮೂವರು ಮಹಿಳೆಯರು ಕಪ್ಪು ಸೀರೆಯ ಮೂಲಕ ಪ್ರತಿಭಟನೆ ನಡೆಸಿದರು.[ನಾನೇ ಮುಂದಿನ ಮುಖ್ಯಮಂತ್ರಿ ಅನ್ನುತ್ತಿದ್ದ ಸಿದ್ದರಾಮಯ್ಯ ಉಲ್ಟಾ!]

Black saree protest against Siddaramaiah in Chitradurga

ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಚಿತ್ರದುರ್ಗ ನಗರಕ್ಕೆ ಮೆಡಿಕಲ್ ಕಾಲೇಜು ನಿಗದಿಯಾದ ಸ್ಥಳದಲ್ಲೇ ಮುಖ್ಯಮಂತ್ರಿ ಕಾರ್ಯಕ್ರಮ ಉದ್ಘಾಟಿಸಬೇಕೆಂಬ ಬೇಡಿಕೆಯಿಂದ ತಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ!

ಇಂಥ ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ನಡೆಸಿದ ಮಹಿಳೆಯರ ವರ್ತನೆ ಹಾಸ್ಯಾಸ್ಪದ ಅನ್ನಿಸಿದ್ದು ಸುಳ್ಳಲ್ಲ!

ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ಅತೀ ದೊಡ್ಡ ರಾಜ್ಯ ಅನ್ನಿಸಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಇದುವರೆಗಿನ ಸಾಧನೆಗಳನ್ನು ಜನರಿಗೆ ನೆನಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three women protested against Karnataka chief minister Siddaramaiah by wearing black saree in Chitradurga!
Please Wait while comments are loading...