ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟ್ ಬೀಸಿದ ಬಿಜೆಪಿ ರಾಜ್ಯಾಧ್ಯಕ್ಷ
ಚಿತ್ರದುರ್ಗ, ಫೆಬ್ರವರಿ 6: ಕೇಂದ್ರ ಸರ್ಕಾರ ಈಗಾಗಲೇ ರೈತರ ಜೊತೆ ಅನೇಕ ಸುತ್ತಿನ ಮಾತುಕತೆ ನಡೆಸಿದ್ದು, ಒಂದೂವರೆ ವರ್ಷ ಕೃಷಿ ಕಾಯ್ದೆಗಳಿಗೆ ತಡೆ ನೀಡುವ ಭರವಸೆಯನ್ನು ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರೈತರ ಹೆರಿನಲ್ಲಿ ಇದೊಂದು ರೀತಿಯ ರಾಜಕೀಯ ಹೋರಾಟವಾಗಿದೆ. ಎಡಪಕ್ಷಗಳು, ಕಾಂಗ್ರೆಸ್ ಸೇರಿಕೊಂಡು ಹೋರಾಟ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸಂಧಾನಕ್ಕೆ ಕರೆದಾಗ ಮಾತುಕತೆ ಮಾಡುವುದು ಕ್ರಮ, ಆದರೆ ಅವರು ಮಾತನಾಡಲು ಸಿದ್ಧರಿಲ್ಲ ಎಂದರು.
ಇದೇ ವೇಳೇ ವಿವಿಧ ಸಮಯದಾಯಗಳಿಗೆ ಮೀಸಲಾತಿ ಬಗ್ಗೆ ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎಂದರಲ್ಲದೆ, ಸಿಎಂ ಯಡಿಯೂರಪ್ಪ ವಿರುದ್ಧ ಸತತವಾಗಿ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ತಿರುಗಿ ಬಿದ್ದಿಲ್ಲ, ತಮ್ಮ ಸಮಸ್ಯೆ ಬಗ್ಗೆ ಕೇಳಿದ್ದಾರೆ ಅಷ್ಟೆ. ಶಾಸಕ ಯತ್ನಾಳ್ ದಿನಕ್ಕೊಂದು ಮಾತು ಹೇಳುತ್ತಾರೆ, ದಿನಕ್ಕೊಂದು ಕನಸು ಕಾಣುತ್ತಾರೆ ಅದು ಸಹಜ. ಯತ್ನಾಳ್ ಹೇಳಿಕೆಗಳ ಬಗ್ಗೆ ಶಿಸ್ತು ಸಮಿತಿಗೆ ವರದಿ ಕಳಿಸಲಾಗಿದೆ, ಕೇಂದ್ರ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.












Click it and Unblock the Notifications