ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್
ಚಿತ್ರದುರ್ಗ, ಜನವರಿ, 16: ಇತ್ತಿಚೆಗಷ್ಟೇ ಮಹಾರಾಷ್ಟ್ರದ ನಾಗಪುರದ ಹೆಗಡೇವಾರ್ ವಸ್ತು ಸಂಗ್ರಹಾಲಯ ಒಳಗಡೆ ಪ್ರವೇಶ ನೀಡಿಲ್ಲ ಎಂಬ ಹೇಳಿಕೆಯ ಆಡಿಯೋ ವೈರಲ್ ಆಗಿದ್ದು, ಇದು ಮಾಜಿ ಶಾಸಕ ಗೂಳಿಹಟ್ಟಿ ಅವರದ್ದೇ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ. ಆ ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಅವರು ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಹೊಸದುರ್ಗ ಹಾಲಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ವಿರುದ್ಧ ಗರಂ ಆಗಿದ್ದಾರೆ. ಈ ಆಡಿಯೋ ಇದೀಗ ಎಲ್ಕೆಡೆ ವೈರಲ್ ಆಗುತ್ತಿರುವುದರ ಜೊತೆಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಾನು ಆಡಳಿತ ಪಕ್ಷದ ಶಾಸಕನಾಗಿದ್ದಾಗ ನನಗೆ ಸಾಕಷ್ಟು ಕಿರಿಕಿರಿ ಕೊಟ್ಟಿದ್ದಾರೆ. ಪ್ರತಿ ಹೆಜ್ಜೆ ಹೆಜ್ಜೆಗೂ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಆದರೆ ಈಗ ನಾನು ಹಾಗೆ ಮಾಡುತ್ತಿಲ್ಲ. ನಮ್ಮ ಹುಡುಗನನ್ನು ಪೊಲೀಸರು ಹೊಡೆದು ಹೊಡೆದು ಸಾಯಿಸಿದರು. ಹಿಂದೆ ಲೇಔಟ್‌ಗೆಲ್ಲಾ ಮಣ್ಣು ಹೊಡೆದಿದ್ದರು. ಡಿಸಿ ದಿವ್ಯಾ ಮೇಡಂ ತುಂಬಾ ಸ್ಟ್ರಿಕ್ಟ್ ಎಂದಿದ್ದಾರೆ.

ಡಿಸಿ ಬಗ್ಗೆ ಮಾತನಾಡಿರುವ ಮಾತುಗಳಲ್ಲಿ, ಡಿಸಿ ದಿವ್ಯ ಮೇಡಂ ಅವರಿಗೆ ಹೊಸದುರ್ಗದಿಂದ ಫೋನ್ ಮಾಡಿ ದೂರು ನೀಡುತ್ತಿದ್ದರು. ಡಿಸಿ ಮೇಡಂ ಸ್ಟ್ರಿಕ್ಟ್ ಆಫೀಸರ್. ದೂರು ಕೊಟ್ಟ ಮೇಲೆ ಅಲ್ಲಿಂದ ಕಳುಹಿಸಿ, ಕೇಸ್ ಮಾಡಿಸಿದರು. ಲೇಔಟ್‌ಗಳಿಗೆ ಈಗಲೂ ಮಣ್ಣು ಹೊಡೆಯುತ್ತಿದ್ದಾರೆ. ಆದರೆ ಡಿಸಿ ಮೇಡಂಗೆ ಒಂದೇ ಒಂದು ಟ್ರ್ಯಾಕ್ಟರ್ ಹಿಡಿಸುವುದಕ್ಕೂ ಆಗುತ್ತಿಲ್ಲ ಎಂಬ ಮಾತುಗಳು ಆಡಿಯೋದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.
ಹಿಂದೆ ನಾವಿದ್ದಾಗ ಹೇಗೆ ಸ್ಟ್ರಿಕ್ ಮಾಡುತ್ತಿದ್ದೀರೋ ಈಗಲೂ ಹಾಗೇ ಮಾಡಿ. ಸಾಧ್ಯವಾದರೆ ಮಾಡಿ, ಇಲ್ಲ ಅಂದ್ರೆ ಆಡಳಿತ ಪಕ್ಷದವರ ಜೊತೆ ಹೊಂದಿಕೊಂಡು ಹೋಗುವುದಾದರೆ ನಮ್ಮದೇನು ಅಭ್ಯಂತರ ಇಲ್ಲ ಎಂದಿದ್ದಾರೆ.
-
Tamarind Farming: ಹುಣಸೆ ಕೃಷಿಯಲ್ಲಿ ಹೊಸ ಕ್ರಾಂತಿ: ಟ್ರ್ಯಾಕ್ಟರ್ ಸಹಾಯದಿಂದ ಯಂತ್ರ ತಯಾರಿಸಿದ ರೈತ ಚಂದ್ರಶೇಖರ, ವಿಡಿಯೋ -
CBSE ಗಣಿತ ಪ್ರಶ್ನೆಪತ್ರಿಕೆಯ QR ಕೋಡ್ ಸ್ಕ್ಯಾನ್ ಮಾಡಿದ್ರೆ ಬರ್ತಿದೆ ಇಂಗ್ಲಿಷ್ ಹಾಡು: ಸಿಬಿಎಸ್ಇ ಸ್ಪಷ್ಟನೆ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ












Click it and Unblock the Notifications