ಬಿಟ್ ಕಾಯಿನ್; ಕಾಂಗ್ರೆಸ್ ನಾಯಕರನ್ನು ವ್ಯಂಗ್ಯವಾಡಿದ ಸಚಿವರು
ಚಿತ್ರದುರ್ಗ, ನವೆಂಬರ್ 15; "ರಾಜ್ಯದಲ್ಲಿದ್ದ ಬುಸ್ ಬುಸ್ ನಾಗಪ್ಪ ದೆಹಲಿಗೂ ಹೋಗಿದೆ. ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಮಾಧ್ಯಮಗಳ ಮುಂದೆ ಕಾಂಗ್ರೆಸ್ ಮುಖಂಡರು ಬರುತ್ತಿದ್ದಾರೆ" ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಸೋಮವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕಾರೋಬಯ್ಯನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ ಮನೆಗೆ ಎರಡು ತಿಂಗಳ ಹಿಂದೆ ಬೆಂಕಿ ಅಂಟಿಕೊಂಡು ಸುಡುತ್ತಿತ್ತು. ಅವರೇ ಈಗ ಬಿಜೆಪಿ ಬಗ್ಗೆ ಮಾತನಾಡುವ ಗೊಂದಲದಲ್ಲಿ ಇದ್ದಾರೆ" ಎಂದರು.
ಬಿಟ್ ಕಾಯಿನ್ ಹಗರಣ ಹೊರ ಬಂದ ಬಳಿಕ ಬೊಮ್ಮಾಯಿ 'ಮಂದಹಾಸ' ಮರೆ ಆಯಿತೇ?
"ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಒಂದು ಕಡೆ, ಮತ್ತೊಂದು ಕಡೆ ಸಿದ್ದರಾಮಯ್ಯ ಬಿಟ್ ಕಾಯಿನ್ ಕುರಿತು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬುಸ್ ಬುಸ್ ನಾಗಪ್ಪ ಇದೆ ಎಂದುಕೊಂಡಿದ್ದೆ, ಅದು ದೆಹಲಿಗೂ ಹೋಯ್ತು" ಎಂದು ವ್ಯಂಗ್ಯವಾಡಿದರು.
ಬಿಟ್ ಕಾಯಿನ್; ಪ್ರತಾಪ್ ಸಿಂಹ ಬಾಯಲ್ಲಿ ಇದೆಂಥ ಮಾತು?
"ಬುಸ್ ಬುಸ್ ನಾಗಪ್ಪ ರೀತಿ ಜೇಬಲ್ಲಿ ಇದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ರಾಜ್ಯದ ಜನರ ದಿಕ್ಕು ತಪ್ಪಿಸಬಾರದು, ಜನರ ಸಮಸ್ಯೆ ಕುರಿತು ಚರ್ಚೆ ಆಗಬೇಕು. ಇದುವರೆಗೂ ಬಿಟ್ ಕಾಯಿನ್ ಬಿಟ್ಟು ಬೇರೆ ಯಾವ ವಿಚಾರ ಮಾತನಾಡುತ್ತಿಲ್ಲ" ಎಂದು ಆರೋಪಿಸಿದರು.
ಬಿಟ್ ಕಾಯಿನ್ ವಿಚಾರ; ಮೌನ ಮುರಿದ ಮುಖ್ಯಮಂತ್ರಿಗಳು!
"ಬಿಟ್ ಕಾಯಿನ್ ಕುರಿತಂತೆ ಕಾಂಗ್ರೆಸ್ ನಾಯಕರು ದಾಖಲೆ ಇದ್ದರೆ ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. ಈಗ ಚರ್ಚೆಗಳ ಅವಶ್ಯಕತೆ ಇಲ್ಲ" ಎಂದು ಕೇಂದ್ರ ಸಚಿವರು ಹೇಳಿದರು.
ಗ್ರಾಮಕ್ಕೆ ಸಚಿವರ ಭೇಟಿ; ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬಯ್ಯನಹಟ್ಟಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು.
ಸೋಮವಾರ ಕೇಂದ್ರ ಸಚಿವ, ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು, ವೈಯಕ್ತಿಕ ಪರಿಹಾರ ನೀಡಿದರು. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ತಾಲೂಕು ಪಂಚಾಯಿತಿ ಇಓಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕುರಿತು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, "ಹಣಕಾಸಿನ ಖಜಾನೆ ಮಾಡಿಕೊಂಡು ಸತ್ತವರಿಗೆಲ್ಲ ದುಡ್ಡು ಕೊಡುತ್ತಾ ಇರಿ. ಯಾರು ಸಾಯುತ್ತಾರೋ ಅವರಿಗೆಲ್ಲ ಚೆಕ್ ಅಥವಾ ಹಣ ನೀಡುತ್ತಾ ಬಂದು ಬಿಡಿ. ಅದೇ ಅಲ್ವಾ ಅವರಿಗೆ ಪರಿಹಾರ?" ಎಂದರು.
"ಸರ್ಕಾರ ಅಂದರೆ ಯಾರಾದರೂ ಸತ್ತಮೇಲೆ ಹಣ ಕೊಡೋದು?. ಕಾಸು ಕೊಟ್ಟರೆ ಸಮಾಧಾನ ಅದಂತೆ ಅಲ್ವಾ?. ನನಗೆ ಕಾನೂನು ಹೇಳಿ ಕೊಡಬೇಡಿ, ನಾನೇ ನಿಮಗೆ ಪಾಠ ಮಾಡುತ್ತೀನಿ" ಎಂದು ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಇಓ ಅಧಿಕಾರಿ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.
"ಬಡವರಿಗೆ ಮನೆ ಕಟ್ಟಿಕೊಳ್ಳಲು ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಜೊತೆಗೆ ಅವರ ಹೆಸರಿಗೆ ಖಾತೆ ಮಾಡಿ ಪೂರ್ಣಗೊಳಿಸಿ. ಹಳೆ ಮನೆಗಳನ್ನು ತೆಗೆದು ಹೊಸ ಮನೆಗಳನ್ನು ಕಟ್ಟಿಕೊಡಬೇಕು, ನಾನು ಮತ್ತೆ ಇಲ್ಲಿಗೆ ಭೇಟಿ ನೀಡಲಾಗುವುದು. ಅಷ್ಟೋತ್ತಿಗೆ ಮನೆಗಳು ಪ್ರಾರಂಭವಾಗಿರಬೇಕು" ಎಂದು ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.
ಒಂದೇ ಕುಟುಂಬದ ಮೂವರು ಸಾವು; ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಕಾರೋಬನಹಟ್ಟಿಯಲ್ಲಿ ನಡೆದಿದೆ. ಚನ್ನಕೇಶವ (26) ಪತ್ನಿ ಸೌಮ್ಯ (20) ಸ್ಥಳದಲ್ಲೇ ಮೃತಪಟ್ಟಿದ್ದರು.
ಗಾಯಗೊಂಡಿದ್ದ ಮನೆಯ ಯಜಮಾನ ಕ್ಯಾಸಣ್ಣ (55) ಚಿಕಿತ್ಸೆ ಫಲಕಾರಿಯಾಗದೇ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಕ್ಯಾಸಣ್ಣ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಮನೆಯ ಯಜಮಾನ ಕ್ಯಾಸಣ್ಣ ಹಿರಿಯ ಮಗನೊಂದಿಗೆ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು.