ಚಿತ್ರದುರ್ಗ; ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ಆಯ್ಕೆ
ಚಿತ್ರದುರ್ಗ, ಮೇ 27 : ರಾಜಾಶ್ರಯದ ಐತಿಹಾಸಿಕ ಮಠಗಳಲ್ಲಿ ಒಂದಾಗಿರುವ ಕೋಟೆ ನಾಡು ಚಿತ್ರದುರ್ಗದ ಮುರುಘಾಮಠದ ಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದು, ಶ್ರೀಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ನೇಮಕ ಮಾಡಿದ್ದಾರೆ.
ಚಿತ್ರದುರ್ಗ ನಗರದ ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶರಣರು ಈ ಘೋಷಣೆ ಮಾಡಿದ್ದಾರೆ. ಇನ್ನು ನೂತನ ಉತ್ತರಾಧಿಕಾರಿ ಬಸವಾದಿತ್ಯ ಸ್ವಾಮೀಗಳಿಗೆ ಹಣೆಗೆ ವಿಭೂತಿ ಇಟ್ಟು, ರುದ್ರಾಕ್ಷಿ ಮಾಲೆ ಹಾಕುವ ಮೂಲಕ ಘೋಷಿಸಿದರು.
ಮುರುಘಾ ಶರಣರ ನಂತರ ಭಕ್ತರೆಲ್ಲರೂ ನೂತನ ಉತ್ತರಾಧಿಕಾರಿ ಶ್ರೀಗಳಿಗೆ ಹೂವಿನ ಸುರಿಮಳೆ ಸುರಿಸಿದರು. ಮುರುಘಾ ಶ್ರೀಗಳು ಹಿರಿಯ ಸ್ವಾಮೀಜಿಗಳ ಪರಂಪರೆಯನ್ನು ಪಾಲಿಸಿಕೊಂಡ ಬಂದಿದ್ದಾರೆ ಎನ್ನಬಹುದು.

ಆತುರದ ನಿರ್ಧಾರ ಇಲ್ಲ : ನೂತನ ಉತ್ತರಾಧಿಕಾರಿ ಘೋಷಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶರಣರು, "ಇದು ಆತುರದ ನಿರ್ಧಾರವಲ್ಲ, ಒಂದು ವರ್ಷದ ಹಿಂದೆಯೇ ಉತ್ತರಾಧಿಕಾರಿ ಘೋಷಣೆ ಬಗ್ಗೆ ನಿರ್ಧರಿಸಲಾಗಿತ್ತು" ಎಂದು ಹೇಳಿದರು.
ಬಸವಾದಿತ್ಯ ಸ್ವಾಮೀಜಿನಗಳು ಚಿತ್ರದುರ್ಗ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಮತ್ತು ಚಂದ್ರಕಲಾ ದಂಪತಿಗಳ ಎರಡನೇ ಪುತ್ರರು. ಚಿತ್ರದುರ್ಗ ನಗರದ ಎಸ್ಜೆಎಂ ಸ್ವಾತಂತ್ರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಮತ್ತು ಶಿವಮೂರ್ತಯ್ಯ ದಂಪತಿಯ ಪುತ್ರ ಬಸವಾದಿತ್ಯರು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಮಠದ ನೂತನ ಉತ್ತರಾಧಿಕಾರಿಯಾದ ನಂತರ ಮಾತನಾಡಿದ ಅವರು, ಬಸವಾದಿತ್ಯ ಸ್ವಾಮಿಗಳು "ನನಗೆ ಚಿಕ್ಕ ವಯಸ್ಸಿನಲ್ಲೇ ಮಠದ ಜವಾಬ್ದಾರಿ ನೀಡಿದ್ದಾರೆ. ಮಠವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುಲಾಗುವುದು" ಎಂದು ಹೇಳಿದರು.
20 ಯತಿವರ್ಯರು ಮಠವನ್ನು ಮುನ್ನಡೆಸಿದ್ದಾರೆ; "ಇದು ಭಕ್ತರ ಶ್ರದ್ಧಾಕೇಂದ್ರ , ಇಲ್ಲಿ ನಮ್ಮನ್ನು ಸೇರಿದಂತೆ 20 ಯತಿವರ್ಯರು ಮಠವನ್ನು ಮುನ್ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನವನ ಬದುಕು ಅಸ್ಥಿರವಾಗಿದೆ. ಮನೆಗಳಲ್ಲಿ ಅನಿರೀಕ್ಷಿತ ಅಪಘಾತ, ಹೃದಯಾಘಾತದಲ್ಲಿ ನಿಧನರಾದರೆ ಜವಾಬ್ದಾರಿಯನ್ನು ಮನೆಯವರು ತೆಗೆದುಕೊಳ್ಳುತ್ತಾರೆ. ಆದರೆ ಮಠಗಳಲ್ಲಿ ಆ ರೀತಿ ಆದರೆ ಶೂನ್ಯ ನಿರ್ಮಾಣವಾಗಬಾರದು ಎಂದು ಭಕ್ತರು ಹಾಗೂ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.












Click it and Unblock the Notifications