ರೀ..ಈಶ್ವರಪ್ಪನವರೇ ನಿಮ್ಗೆ ಕಡಿ, ಬಡಿ ಬಿಟ್ರೆ ಬೇರೇನೂ ಗೊತ್ತಿಲ್ವಾ? ಆರ್‌ಎಸ್‌ಎಸ್‌ನಿಂದ ನೀವು ಕಲಿತಿರೋದು ಇದೇನಾ?: ಸಿಎಂ

ಚಿತ್ರದುರ್ಗ, ಫೆಬ್ರವರಿ, 09: ಬಿಜೆಪಿಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕಡಿ, ಬಡಿ, ತರಿ ಇದು ಬಿಟ್ರೆ ಬೇರೆ ಭಾಷೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದೇಶ ವಿಭಜನೆ ಹೇಳಿಕೆ ನೀಡುವವರನ್ನು ಕೊಲ್ಲುವ ಕಾನೂನು ತರಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಹರಿಹಾಯ್ದರು. ಈಶ್ವರಪ್ಪನವರಿಗೆ ಕಡಿ, ಬಡಿ, ತರಿ ಇದು ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಈಶ್ವರಪ್ಪನ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ಕಡಿ, ಬಡಿ, ಕೊಲ್ಲು, ಕತ್ತರಿಸು ಭಾಷೆ ಬಿಟ್ಟು BJPಗೆ ಏನು ಬರಲ್ಲ. ನನಗೆ ಆರ್‌ಎಸ್‌ಎಸ್‌ ಟ್ರೈನಿಂಗ್ ಆಗಿದೆ ಎನ್ನುತ್ತಾರೆ. ಇದೇನಾ ಟ್ರೈನಿಂಗ್ ಆಗಿರುವುದು? ಎಂದು ಪ್ರಶ್ನಿಸಿದರು.

Appropriate action will be taken against K.S.Eshwarappa says CM Siddaramaiah

ಈಶ್ವರಪ್ಪನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಸಂಸದ ಡಿ.ಕೆ.ಸುರೇಶ್ ಅವರನ್ನು ಕೊಲ್ಲಬೇಕು ಎಂದರೆ ಒಬ್ಬ ರಾಜಕೀಯ ಪಕ್ಷದ ಮುಖಂಡರಾಗಿ ಹೇಳುವ ಭಾಷೆನಾ? ಇವರಿಗೆಲ್ಲ ಆರ್‌ಎಸ್‌ಎಸ್‌ ಟ್ರೈನಿಂಗ್ ಕೊಟ್ಟಿರುವುದು ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ 40% ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಾಗಮೋಹನ್ ದಾಸ್ ಕಮಿಷನ್ ಮಾಡಿದ್ದೇವೆ, ದಾಖಲೆ ನೀಡಲಿ. 40% ಭ್ರಷ್ಟಾಚಾರ ಇದ್ದರೆ ದಾಖಲೆ ನೀಡಲಿ ಎಂದರು. ಅಲ್ಲದೆ ಅಧಿಕಾರಿಗಳು ಕೇಳುತ್ತಾರೆ ಎಂದಿದ್ದಾರೆ. ಅಂಥವರ ವಿರುದ್ದ ಕಂಪ್ಲೀಟ್ ಡೀಟೇಲ್ಸ್‌ ನೀಡಲಿ ಎಂದು ಕೆಂಪಣ್ಣ ಹೇಳಿಕೆಗೆ ತಿರುಗೇಟು ನೀಡಿದರು.

ಅನುದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗುವ ಆಲೋಚನೆ ಇಲ್ಲ. ನಮಗೆ ಅನ್ಯಾಯ ಆಗಿರುವುದು ನಿಜ, ನಾವು 100 ರೂಪಾಯಿ ತೆರಿಗೆ ಕೊಟ್ಟರೆ 12 ರೂಪಾಯಿ ಮಾತ್ರ ಬರುತ್ತಿದೆ. ಇನ್ನುಳಿದ 88 ರೂಪಾಯಿ ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು ನಾವೇ ವಸೂಲಿ ಮಾಡುತ್ತೇವೆ ಎಂದರು. ಇದನ್ನು ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ, ಆಗ ಏನೂ ಹೇಳುತ್ತಿದ್ದರು ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.

ನಮ್ಮ ಪಾಲು ನಾವು ಕೇಳಿದರೆ, ದೇಶ ವಿಭಜನೆ ಎನ್ನುತ್ತಾರೆ. ದೇಶ ವಿಭಜನೆ ಮಾಡಲು ಹೊರಟವರು ಯಾರು ಮೋದಿ ಅಲ್ವಾ? ನಿಮಗೆ ಕನ್ನಡಿಗರಾಗಿ ಕೋಪ ಬರಲ್ವಾ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ನೀವೆಲ್ಲ ಸತ್ಯ ಬರೆಯದೇ ಓದರೆ ಏನೂ ಮಾಡೋದು.

ಅಪ್ಪರ್ ಭದ್ರ ವಿಚಾರದಲ್ಲಿ ಮೇಡಂ ಇವಳು ನಿರ್ಮಲಾ ಸೀತಾರಾಮನ್‌. 23-24 ಬಜೆಟ್‌ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ಹೇಳಿದ್ದಾರೆ. ಬಜೆಟ್‌ನಲ್ಲಿ ಹೇಳಿ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ. 8 ಸಾವಿರ ಕೋಟಿಯಲ್ಲಿ 6 ಸಾವಿರ ಕೋಟಿ ನೀಡಿದ್ದೇವೆ. ಅಪ್ಪರ್ ಭದ್ರಾ ವಿಚಾರದಲ್ಲಿ ಡಿ.ಕೆ.ಶಿ ಕೇಳಿದ್ದಾರೆ ಎಂದರು.

ನಾನು ಕೂಡಾ ನೀರಾವರಿ ಮಂತ್ರಿಗಳನ್ನು ಕೇಳಿದ್ದೇನೆ. ಕೇಳಿದರೆ ಕೊಡ್ಬೇಕು ಅಂತಾ ಎಲ್ಲಿದೆ ಅಂತಾ ಬಜೆಟ್‌ನಲ್ಲಿ ಹೇಳಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ನಿರ್ಮಲ ಸೀತಾರಾಮನ್ ರಾಜ್ಯದಿಂದ ಆಯ್ಕೆ ಆಗಿದ್ದಾರೆ. ನಮ್ಮ ರಾಜ್ಯದಿಂದ ಪ್ರತಿನಿಧಿಸಿದ್ದಾರೆ, ಜವಬ್ದಾರಿ ಇಲ್ವಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಿಸಸ್ ನಿರ್ಮಲ ಸೀತರಾಮನ್ ರಿಜೆಕ್ಟ್ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ಕೇಂದ್ರದಿಂದ 5,300 ಕೋಟಿ ಬರುತ್ತದೆ ಎಂದು ಹೇಳಿದ್ದರು. ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿದ್ದಾರೆ, ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ಮೇಲೆ ನಿಮಗೆಲ್ಲಾ ಕೋಪ ಬರಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+