ಚಿತ್ರದುರ್ಗ : ಕೆಎಸ್ಆರ್‌ಟಿಸಿ ವೊಲ್ಪೋ ಬಸ್ ಪಲ್ಟಿ, 4 ಸಾವು

Posted By:
Subscribe to Oneindia Kannada

ಚಿತ್ರದುರ್ಗ, ಡಿಸೆಂಬರ್ 28 : ಮುಂಬೈಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿಯ ವೊಲ್ವೋ ಬಸ್ ಪಲ್ಟಿ ಹೊಡೆದು ನಾಲ್ವರು ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 19 ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಮುಂಜಾನೆ 2.30ರ ಸುಮಾರಿಗೆ ಚಿತ್ರದುರ್ಗದ ಸೀಬಾರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೆಎಸ್ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಸ್ಥಳದಲ್ಲೇ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, 10 ಮಹಿಳೆಯರು ಮತ್ತು 9 ಪುರುಷರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. [ರಾಜಸ್ಥಾನ, ಗುಜರಾತ್ ಗೂ KSRTC ಬಸ್ ಸೇವೆ]

 ksrtc

ಮೃತಪಟ್ಟವರನ್ನು ಸತೀಶ್ ದತ್ತಾತ್ರೇಯ (60), ರೋಹನ್ ನಾಯ್ಕ್ (28), ಮುರುಗನಾಥನ್ ಮತ್ತು ಮಹಾರಾಷ್ಟ್ರ ಮೂಲದ ಶ್ವೇತಶ್ರೀ (24) ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಸ್ಆರ್‌ಟಿಸಿ ವೊಲ್ವೋ ಬಸ್ ಬೆಂಗಳೂರಿನಿಂದ-ಮುಂಬೈಗೆ ಹೊರಟಿತ್ತು. ಗಾಯಗೊಂಡವರಲ್ಲಿ ಬಸ್ಸಿನ ಚಾಲಕ ನಾಗರಾಜ್ ಸಹ ಸೇರಿದ್ದಾನೆ. ಎಲ್ಲರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್ ಸೇರಿದಂತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four persons were killed and over 20 injured when a Karnataka State Road Transport Corporation (KSRTC) Volvo bus fell off the road into a farm land near Shibara Village of Chitradurga on Monday, December 2th morning.
Please Wait while comments are loading...