ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ-ಬೆಂಗಳೂರು ಬಸ್ ಚಿತ್ರದುರ್ಗದಲ್ಲಿ ಪಲ್ಟಿ

By Madhusoodhan
|
Google Oneindia Kannada News

ಚಿತ್ರದುರ್ಗ, ಆಗಸ್ಟ್, 16: ಹಿರಿಯೂರು ತಾಲೂಕಿನ ಚನ್ನಮನಹಳ್ಳಿ ಬಳಿ ಮಂಗಳವಾರ ಮುಂಜಾನೆ ಕೆಎಸ್‍ ಆರ್ ಟಿಸಿ ಬಸ್ ಪಲ್ಟಿ ಆದ ಪರಿಣಾಮ ಬಸ್ಸಿನಲ್ಲಿದ್ದ ಹಲವು ಬಾಲಕರು ಸೇರಿ 30ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.

ಕಲಬುರಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎ-32-ಎಫ್- 2075 ಸಂಖ್ಯೆಯ ಕೆ ಎಸ್ ಆರ್ ಟಿಸಿ ಬಸ್ ಪಲ್ಟಿಯಾಗಿದೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ವೇಗವಾಗಿದ್ದ ಬಸ್ ನಿಯಂತ್ರಣಕ್ಕೆ ಬಂದಿಲ್ಲ. ಗಾಬರಿಗೊಂಡ ಚಾಲಕ ಹೆದ್ದಾರಿಯಿಂದ ಪಕ್ಕ ಬಸ್ ನಿಲ್ಲಿಸಲು ಮುಂದಾದಾಗ ಬಸ್ ಪಲ್ಟಿಯಾಗಿದೆ.[ಚಿತ್ರದುರ್ಗ : ಭೀಕರ ಅಪಘಾತ, 7 ವಿದ್ಯಾರ್ಥಿನಿಯರು ಸಾವು]

accident

ಅಪಘಾತದಲ್ಲಿ 8 ಕ್ಕೂ ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಚಿತ್ರದುರ್ಗದಲ್ಲಿ 1,200 ಎಕರೆಯಲ್ಲಿ ಹೆರಿಟೇಜ್ ಹಬ್ ನಿರ್ಮಾಣ]

ಗಾಯಗೊಂಡ ಬಸ್ ಚಾಲಕ ನಾರಾಯಣ, ರುದ್ರಪ್ಪ ರೂಪಾಬಾಯಿ, ರುಕ್ಮಾಬಾಯಿ, ಚಂದ್ರಶೇಖರ್, ಆರೀಫ್‍ ಅಹಮ್ಮದ್ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಯಾಣಿಕರೆಲ್ಲಾ ಕಲಬುರಗಿ ಹಾಗೂ ಶಹಾಪುರದವರು ಎಂದು ಹೇಳಲಾಗಿದೆ.

English summary
As many 30 people suffered serious injures after an KSRTC bus they were travelling by overturned near Hiriyur Taluk Chennamanahalli, on 16 August morning. The bus was proceeding from Kalaburagi to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X