ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ, 18 ಮಂದಿ ಸಾವು
ಬೀಜಿಂಗ್, ಜೂನ್ 25: ಚೀನಾದ ಹೆನಾನ್ ಪ್ರಾಂತ್ಯದ ಝೆಚೆಂಗ್ ಪ್ರಾಂತ್ಯದಲ್ಲಿರುವ ಮಾರ್ಷಲ್ ಆರ್ಟ್ಸ್ ಶಾಲೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಈ ದುರಂತದಲ್ಲಿ 18 ಮಂದಿ ಮೃತಪಟ್ಟಿದ್ದು, 16ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಬಂದಿದೆ.
ಶಾಂಗ್ ಕ್ಯೂ ನಗರದ ಮಾರ್ಷಲ್ ಆರ್ಟ್ ಕಲಿಯಲು ಬಂದಿದ್ದ 7 ರಿಂದ 16 ವರ್ಷ ವಯಸ್ಸಿನ ಅನೇಕ ಮಕ್ಕಳು ಮೃತರ ಪಟ್ಟಿಯಲ್ಲಿದ್ದಾರೆ.
ಪ್ರಾಥಮಿಕ ವರದಿಯಂತೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದು, ಅಗ್ನಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಸಿಜಿಟಿಎನ್ ವರದಿ ಮಾಡಿದೆ.

ಗಾಯಗೊಂಡಿರುವ 16 ಮಂದಿ ಪೈಕಿ ನಾಲ್ವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಕಲಿಕಾ ಕೇಂದ್ರದ ಕಟ್ಟಡ ಮಾಲೀಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
more to follow...(Reuters, AP, AFP)











Click it and Unblock the Notifications