ಚಾರ್ಮಾಡಿಗೆ ಚಾರಣಕ್ಕೆ ಬಂದಿದ್ದ ಯುವಕ ಏಕಾಏಕಿ ಕಣ್ಮರೆ: ಮುಂದೆನಾಯ್ತು?
ಚಿಕ್ಕಮಗಳೂರು, ಫೆಬ್ರವರಿ 26: ಚಾರಣಕ್ಕೆಂದು ಚಾರ್ಮಾಡಿಗೆ ತೆರಳಿದ ಯುವಕನೊಬ್ಬ ಕಾಡಿನ ಮಧ್ಯೆ ನಾಪತ್ತೆಯಾಗಿದ್ದ ವಿಚಾರ ಆತಂಕಕ್ಕೀಡು ಮಾಡಿತ್ತು. ಇದೀಗ ಆತ ಪತ್ತೆಯಾಗುವುದರೊಂದಿಗೆ ಪ್ರಸಂಗ ಸುಖಾಂತ್ಯಗೊಂಡಿದೆ.
ಮೂಡಿಗೆರೆಯ ಬಲ್ಲಾಳರಾಯನ ದುರ್ಗದಿಂದ ಹತ್ತು ಮಂದಿ ಯುವಕರ ತಂಡ ಬೆಳ್ತಂಗಡಿಯ ಚಾರ್ಮಾಡಿಯ ಭಂಡಾಜೆ ಫಾಲ್ಸ್‌ಗೆ ಫೆಬ್ರವರಿ25ರಂದು ಚಾರಣಕ್ಕೆ ತೆರಳಿದ್ದರು. ಕೆಎಂಸಿ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿಗಳ ಈ ತಂಡದಲ್ಲಿದ್ದ ಧನುಷ್ ಎಂಬಾತ ಕಾಡಿನ ಮಧ್ಯೆ ಮೊಬೈಲ್ ಸ್ವಿಚ್ ಆಫ್ ಆಗಿ ನಾಪತ್ತೆಯಾಗಿದ್ದನು.

ಗೆಳೆಯ ಕಾಣದೇ ಇದ್ದಾಗ, ಸಂಪರ್ಕಕಕ್ಕೂ ಸಿಗದೇ ಇದ್ದಾಗ ತಂಡದಲ್ಲಿದ್ದ ಆದಿತ್ಯ ಎಂಬ ಯುವಕ 112 ಪೊಲೀಸ್ ವಾಹನಕ್ಕೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಯುವಕ ಕಣ್ಮರೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣವೇ ಹೋಗಿ ತಂಡದಲ್ಲಿದ್ದ ಯುವಕರನ್ನು ವಿಚಾರಿಸಿದ್ದಾರೆ.
ಅದರಂತೆ ಆತ ತಪ್ಪಿಕೊಂಡಿರುವ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ್ದಾರೆ. ಅದರಂತೆ ಪೊಲೀಸರು ರಾತ್ರಿ ವೇಳೆ ಕಾಡಿನ ಮಧ್ಯೆ 3.30 ಗಂಟೆಗಳ ಕಾಲ ಹುಡುಕಾಟ ನಡಿಸಿದ್ದಾರೆ. ಕೊನೆಗೆ ಗುಡ್ಡದ ಪ್ರದೇಶದಲ್ಲಿ ಮಧ್ಯರಾತ್ರಿ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯ ಮಧ್ಯದಲ್ಲಿ ಓರ್ವನೇ ಇದ್ದಿರುವುದು ಕಂಡು ಬಂದಿದೆ. ಆತ ಸುರಕ್ಷಿತವಾಗಿದ್ದು, ಸದ್ಯ ಆತನ ತಂಡದೊಂದಿಗೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.
ಬೆಂಗಳೂರು: ಮಕ್ಕಳಿಂದ ಮೊಬೈಲ್ ಕಳ್ಳತನ ಮಾಡಿಸುವ ಗ್ಯಾಂಗ್ ಆ್ಯಕ್ಟೀವ್
ಬೆಂಗಳೂರು: ಮಕ್ಕಳನ್ನು ಮುಂದೆ ಬಿಟ್ಟು ಕಳ್ಳತನ ಮಾಡಿಸುತ್ತಿರುವ ಗ್ಯಾಂಗ್ ಬೆಂಗಳೂರಿನಲ್ಲಿ ಆ್ಯಕ್ಟೀವ್ ಆಗಿದೆ. ಗುಂಪೊಂದು ಮಕ್ಕಳನ್ನು ಮುಂದೆ ಬಿಟ್ಟು ಕಳ್ಳತನ ಮಾಡಿಸುತ್ತಿದೆ. ಈ ಗುಂಪು ಮಕ್ಕಳಿಂದ ಒಂದು ಮೊಬೈಲ್ ಪಡೆದು ಅವರಿಗೆ ಐನೂರು ರೂಪಾಯಿ ನೀಡಿ ಕಳ್ಳತನಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಲಿಂಗರಾಜಪುರ ನಿವಾಸಿಗಳು ಆರೋಪ ಮಾಡಿದ್ದಾರೆ.
ಇತ್ತೀಚಿಗೆ ಮನೆಯಲ್ಲಿ ಮಧ್ಯಾಹ್ನ ಮಲಗಿದ್ದ ವ್ಯಕ್ತಿಯ ಮೊಬೈಲ್‌ಅನ್ನು ಕಳ್ಳತನ ಮಾಡಿ ಓರ್ವ ಬಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬಾಣಸವಾಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಕ್ಕಳನ್ನು ಬಳಸಿಕೊಂಡು ಈ ರೀತಿಯ ಅಪರಾಧ ಕೃತ್ಯ ಮಾಡಿಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಪೊಲೀಸರಿಗೆ ಒತ್ತಾಯಿಸಿದ್ದಾರೆ.












Click it and Unblock the Notifications