ಕೊಗ್ರೆಯಲ್ಲಿ ಬಾವಿಗೆ ಬಿದ್ದ ಭಾರೀ ಗಾತ್ರದ ಕಡವೆ ರಕ್ಷಣೆ
ಚಿಕ್ಕಮಗಳೂರು, ಸೆಪ್ಟೆಂಬರ್ 10: ಚಿಕ್ಕಮಗಳೂರಿನಲ್ಲಿ ಆಹಾರ ಅರಸಿಕೊಂಡು ಬಂದಿದ್ದ ಕಡವೆಯೊಂದು ಬಾವಿಗೆ ಬಿದ್ದು ನಿತ್ರಾಣಗೊಂಡಿದ್ದು, ಅದನ್ನು ಗ್ರಾಮಸ್ಥರೇ ಸೇರಿ ರಕ್ಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮಕ್ಕೆ ಬಂದ ಕಡವೆಯೊಂದು ಬಾವಿಗೆ ಬಿದ್ದಿದೆ. ಇದರಿಂದ ಅದರ ಒಂದು ಕಾಲು ಮುರಿದಿದ್ದು, ಬಾವಿಯಿಂದ ಮೇಲೆ ಬರಲು ಹರಸಾಹಸ ಪಡುತ್ತಿತ್ತು. ಜೊತೆಗೆ ಹಸಿವಿನಿಂದ ನಿತ್ರಾಣಗೊಂಡಿತ್ತು.

ಇದನ್ನು ಕಂಡ ಸ್ಥಳೀಯರು ಭಾರೀ ಗಾತ್ರದ ಕಡವೆಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಜೊತೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಶು ವೈದ್ಯರಿಂದ ಗಾಯಗೊಂಡ ಕಡವೆಗೆ ಚಿಕಿತ್ಸೆ ನೀಡಲಾಗಿದೆ. ಇದೀಗ ಕಡವೆ ಚೇತರಿಸಿಕೊಂಡಿದೆ.












Click it and Unblock the Notifications