ವಿಡಿಯೋ; ಚಿಕ್ಕಮಗಳೂರು ನಗರಕ್ಕೆ ನುಗ್ಗಿದ ಒಂಟಿ ಸಲಗ
ಚಿಕ್ಕಮಗಳೂರು, ಜುಲೈ 12; ಸೋಮವಾರ ಬೆಳಗ್ಗೆ ಚಿಕ್ಕಮಗಳೂರಿನ ಜನರು ಬೆಚ್ಚಿಬಿದ್ದರು. ಕೆಲವು ದಿನದಿಂದ ನಗರದ ಹೊರವಲಯದಲ್ಲಿ ಓಡಾಡುತ್ತಿದ್ದ ಒಂಟಿ ಸಲಗವನ್ನು ಇಂದು ಬೆಳಗ್ಗೆ ನಗರಕ್ಕೆ ಬಂದಿತ್ತು.
ಸೋಮವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಒಂಟಿ ಸಲಗ ಜಯನಗರ ಬಡಾವಣೆ ಮೂಲಕ ಮೂಡಿಗೆರೆ ರಸ್ತೆಗೆ ಬಂದಿತು. ಕಾಫಿಡೇಗೆ ಸೇರಿದ ಎಬಿಸಿ ಕಾಫಿ ಕಂಪನಿ ಗೇಟು ತಳ್ಳಿಕೊಂಡು ಆವರಣಕ್ಕೆ ನುಗ್ಗಿತು.
ಸುಮಾರು 10 ನಿಮಿಷ ಎಬಿಸಿ ಕಾಫಿ ಕಂಪನಿ ಕಾಪೌಂಡ್‌ನಲ್ಲಿ ಓಡಾಡಿತು. ಬಳಿಕ ಹಿಂಭಾಗದಲ್ಲಿರುವ ಬಿದಿರು ಮಳೆಗಳ ನಡುವೆ ಹೋಯಿತು. ಗದ್ದೆಗಳ ಮೂಲಕ ನೆಲ್ಲೂರು ಕಡೆ ಸಂಚಾರ ನಡೆಸಿತು.

ನಗರದಲ್ಲಿ ಆನೆ ನೋಡಿದ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆನೆ ನಗರಕ್ಕೆ ಬಂದರೂ ಯಾರಿಗೂ ಅಪಾಯ ಮಾಡಿಲ್ಲ. ಜನರ ಕೂಗಾಟ, ವಾಹನಗಳ ಓಡಾಟ ಕಂಡು ಅದು ಸಹ ಕ್ಷಣಕಾಲ ಗಾಬರಿಗೊಂಡಿತು.
ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಆನೆ ನಗರಕ್ಕೆ ಮತ್ತೆ ವಾಪಸ್ ಬಂದರೆ ಎಂಬ ಆತಂಕವೂ ಇತ್ತು. ಆದ್ದರಿಂದ ಎಚ್ಚರಿಕೆಯಿಂದ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಕಳೆದ ಎರಡು ದಿನಗಳ ಹಿಂದೆ ನಗರದ ಹೊರವಲಯದ ನೆಲ್ಲೂರು, ವಸ್ತಾರೆ, ಮೂಗ್ತಿಹಳ್ಳಿ ಭಾಗದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿತ್ತು. ಹೊರವಲಯದಲ್ಲಿದ್ದ ಆನೆ ಸೋಮವಾರ ನಗರಕ್ಕೆ ಪ್ರವೇಶ ಮಾಡಿದ್ದು ಆತಂಕಕ್ಕೆ ಕಾರಣವಾಗಿತ್ತು.
ಆನೆ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH | Karnataka: An elephant entered Chikmagalur's ABC Coffee Curing area earlier today. It was sent back to the forest with the help of forest officials. pic.twitter.com/ASySteSgnR
— ANI (@ANI) July 12, 2021












Click it and Unblock the Notifications