ಇನ್ನೆರಡು ದಿನ ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಬಂದ್
ಚಿಕ್ಕಮಗಳೂರು, ಆಗಸ್ಟ್ 7: ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಮುಂದುವರೆದಿದೆ. ಚಾರ್ಮಾಡಿ ಘಾಟ್ ನಲ್ಲೂ ಕಳೆದ ರಾತ್ರಿ ಗುಡ್ಡ ಕುಸಿತ ಸಂಭವಿಸಿದ್ದು, ಚಾರ್ಮಾಡಿ ಘಾಟ್ ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಆಗಸ್ಟ್ 7 ಹಾಗೂ 8ರಂದು ಎರಡು ದಿನಗಳ ಕಾಲ ಇಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮಳೆ ಇನ್ನೂ ಮುಂದುವರೆದಿದ್ದು, ಪದೇ ಪದೇ ಗುಡ್ಡ ಕುಸಿತ ಸಂಭವಿಸುತ್ತಿದೆ. ಹಾಗೆಯೇ ಮರಗಳೂ ನೆಲಕ್ಕೆ ಉರುಳುತ್ತಿವೆ. ಹೀಗಾಗಿ ಸಂಚಾರವನ್ನು ನಿಷೇಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಎರಡು ದಿನಗಳ ಸಂಚಾರವನ್ನು ನಿಷೇಧಿಸಲು ಆದೇಶಿಸಿದ್ದಾರೆ.












Click it and Unblock the Notifications