ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Chikkamagaluru Utsav 2023: ಕುಸ್ತಿ ಸ್ಪರ್ಧೆಗೆ ಚಾಲನೆ, ಪ್ರಶಸ್ತಿಗಳ ವಿವರ ಇಲ್ಲಿದೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ, 16: ಜನವರಿ 18ರಿಂದ 22ರವರೆಗೂ ಚಿಕ್ಕಮಗಳೂರು ಉತ್ಸವ ನಡೆಯಲಿದ್ದು, ಇದರ ಪ್ರಯುಕ್ತ ನಗರದಲ್ಲಿ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಲಾಗಿದೆ. ಕುಸ್ತಿ ಸಂಸ್ಕೃತಿಯ ಪ್ರತೀಕ, ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಯುದ್ಧ ಕಲೆಯಾಗಿದೆ. ಇಂತಹ ಕಲೆಯನ್ನು ಬೀಜ ರೂಪದಲ್ಲೇ ಸಂರಕ್ಷಿಸುವ ಸಲುವಾಗಿ ಜಿಲ್ಲಾ ಹಬ್ಬದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಿ ಸ್ಪರ್ಧಾಗಳುಗಳಿಗೆ ಪ್ರೇರೇಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿಲ್ಲಿ ಹೇಳಿದರು.

ನಗರದ ಬೈಪಾಸ್ ಸಮೀಪದ ಎಸ್.ಎಸ್.ಆರ್.ಡಿ. ಪ್ರಾಯೋಗಿಕ ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತಾನಾಡಿದರು. ಕುಸ್ತಿ ಪಟುಗಳು ಕೇವಲ ದೇಹವನ್ನು ಹುರಿಗೊಳಿಸುವುದಲ್ಲದೇ ಸಂಕಷ್ಟದ ಸಮಯದಲ್ಲಿ ದೇಶದ ರಕ್ಷಣೆಯ ವಿಚಾರದಲ್ಲಿ ಬೆನ್ನೆಲುಬಾಗಿ ನಿಂತವರು. ಇಂದಿನ ದಿನಗಳಲ್ಲಿ ಸೈನ್ಯವನ್ನು ತುಕಡಿಗಳೆಂದು ನಾವುಗಳು ಕರೆಯುತ್ತೇವೆ. ಆದರೆ ಒಂದು ಕಾಲದಲ್ಲಿ ಗ್ರಾಮಗಳಲ್ಲಿ ಸೈನಿಕರಿಗೆ ತರಬೇತಿ ನೀಡುವ ಕೇಂದ್ರವಾಗಿ ಕುಸ್ತಿ ಅಕಾಡಗಳು ಕಾರ್ಯನಿರ್ವಹಿಸಿದ್ದವು. ಇದರ ಪರಿಣಾಮ ದೇಶದ ವಿವಿಧೆಡೆ ರಾಜಮಹಾರಾಜರು ಉದಯವಾಗಿದ್ದಾರೆ ಎಂದು ಹೇಳಿದರು.

Chikkamagaluru Utsav 2023: ಈ ಬಾರಿಯ ಆಹಾರ ಮೇಳ ಹೇಗಿರಲಿದೆ?, ಇಲ್ಲಿದೆ ವಿವರChikkamagaluru Utsav 2023: ಈ ಬಾರಿಯ ಆಹಾರ ಮೇಳ ಹೇಗಿರಲಿದೆ?, ಇಲ್ಲಿದೆ ವಿವರ

ಕುಸ್ತಿ ಕೇವಲ ಗ್ರಾಮೀಣ ಕ್ರೀಡೆ ಮಾತವಲ್ಲದೇ ದೇಹವನ್ನು ಹತೋಟಿಯಲ್ಲಿಡುವ ಸಾಧನವಾಗಿತ್ತು. ಒಂದು ಕಾಲದಲ್ಲಿ ದೇಶದ ಅನೇಕ ಭಾಗಗಳಲ್ಲಿ ಕುಸ್ತಿ ಅಕಾಡಗಳು ಕಾರ್ಯನಿರ್ವಹಿಸುತ್ತಿದ್ದವು ಮದರು.

ಅಖಾಡದಲ್ಲಿ ಅನುಸರಿಸಬೇಕಾದ ಕ್ರಮಗಳು

ಅಖಾಡದಲ್ಲಿ ಅನುಸರಿಸಬೇಕಾದ ಕ್ರಮಗಳು

ಹಾಗೆಯೇ ಎಲ್ಲಾ ಗ್ರಾಮದ ಯುವಕರು ದೇಹವನ್ನು ಸದೃಢವಾಗಿಡುವ ಜೊತೆಗೆ ನೈತಿಕವಾಗಿ ಬದುಕುವ ಮೌಲ್ಯದ ಶಿಕ್ಷಣವನ್ನು ಅಕಾಡದಲ್ಲಿ ಕಲಿಸಲಾಗುತ್ತಿತ್ತು. ಪ್ರತಿಯೊಬ್ಬ ಕುಸ್ತಿಪಟು ಅಕಾಡಕ್ಕೆ ಹೋಗುವ ಮುನ್ನ ಮಣ್ಣನ್ನು ಮುಟ್ಟಿ ನಮಸ್ಕರಿಸುವ ಆಧ್ಯಾತ್ಮಿಕ ವಾದ ಸಂಸ್ಕೃತಿ ನಮ್ಮಲ್ಲಿದೆ. ಕಸರತ್ತಿಗೂ ಮುನ್ನ ಕೆಲವು ಪರಂಪರೆಯನ್ನು ಪಾಲಿಸಿಕೊಂಡು ಅಕಾಡಕ್ಕಿಳಿ ಯುವ ಸಂಪ್ರದಾಯ ಭಾರತೀಯ ಕುಸ್ತಿ ಸಂಸ್ಕೃತಿಯಲ್ಲಿ ಅಡಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು: ರಾಜ್ಯಮಟ್ಟದ ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ ಹಿರಿಯರು, ಯುವಕರಿಗೆ ಉತ್ಸಾಹಚಿಕ್ಕಮಗಳೂರು: ರಾಜ್ಯಮಟ್ಟದ ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ ಹಿರಿಯರು, ಯುವಕರಿಗೆ ಉತ್ಸಾಹ

ಸೋಲು, ಗೆಲುವನ್ನ ಸಮನಾಗಿ ತೆಗೆದುಕೊಳ್ಳಬೇಕು

ಸೋಲು, ಗೆಲುವನ್ನ ಸಮನಾಗಿ ತೆಗೆದುಕೊಳ್ಳಬೇಕು

ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿಪಟುಗಳು ಹೊಸತನದ ವಾತಾವರಣದಲ್ಲಿ ಭಾಗವಹಿಸುವುದು ಅತಿಮುಖ್ಯ. ಸೋಲು, ಗೆಲುವನ್ನು ಸರಿಸಮಾನವಾಗಿ ತೆಗೆದುಕೊಳ್ಳಬೇಕು. ಸ್ಪರ್ಧೆಯಲ್ಲಿ ಕಲಿತಂತಹ ಅನುಭವಗಳನ್ನು ಸ್ಫೂರ್ತಿಯಾಗಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಯಾವೆಲ್ಲ ಬಹುಮಾನಗಳು ಇರಲಿವೆ?

ಯಾವೆಲ್ಲ ಬಹುಮಾನಗಳು ಇರಲಿವೆ?

ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದವರಿಗೆ ನಗದು, ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ, ದ್ವೀತಿಯ ಸ್ಥಾನದವರಿಗೆ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ, ತೃತೀಯ ಸ್ಥಾನ ಗಳಿಸಿದವರಿಗೆ ನಗದು, ಕಂಚಿನ ಪದಕ, ಪ್ರಶಸ್ತಿ ಮತ್ತು ಚತುರ್ಥ ಸ್ಥಾನಗಳಿಸಿದವರಿಗೆ ನಗದು, ಕಂಚಿನ ಪದಕ, ಪ್ರಶಸ್ತಿ ಪತ್ರ ಮತ್ತು ಭಾಗವಹಿಸಿದ ಎಲ್ಲಾ ಕುಸ್ತಿಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದರು.

ವಯಸ್ಸಿಗೆ ತಕ್ಕಂತೆ ಸ್ಪರ್ಧೆ ಆಯೋಜನೆ

ವಯಸ್ಸಿಗೆ ತಕ್ಕಂತೆ ಸ್ಪರ್ಧೆ ಆಯೋಜನೆ

ಕುಸ್ತಿ ತರಬೇತುದಾರ ನಾಗರಾಜ್ ಮಾತನಾಡಿ, ಸ್ಪರ್ಧೆಯಲ್ಲಿ 14 ವರ್ಷದಿಂದ 19 ವರ್ಷದ ಯುವಕ- ಯುವತಿಯರು ಹಾಗೂ ಪುರುಷ, ಮಹಿಳೆಯರಿಗಾಗಿ ಎಂಟು ವಿಭಾಗದಲ್ಲಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಯಾ ವಯಸ್ಸಿನ ಪಟುಗಳಿಗೆ ದೇಹತೂಕದ ಅಂದಾಜಿನಲ್ಲಿ ಸ್ಪರ್ಧೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಪಂಚಾಯತಿ ಸಿಇಓ ಜಿ.ಪ್ರಭು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲವಳ್ಳಿ, ದೈಹಿಕ ಶಿಕ್ಷಕರಾದ ಮುನಿಸ್ವಾಮಿ, ನಾಗರಾಜ್, ಕುಮಾರಸ್ವಾಮಿ, ಹಿರಿಯ ಕುಸ್ತಿ ಪಟುಗಳಾದ ಬೀರೂರು ಹೊನ್ನಪ್ಪ, ರಾಜೇಶ್, ಮಂಜು ಸೇರಿದಂತೆ ಮತ್ತಿತರರು ಹಾಜರಿದ್ದರು.

English summary
Chikkamagaluru Utsav 2023: Chikkamagaluru Utsav start from january 18th to 22, wrestling competition start from january 15th, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X