ಗಣಪತಿ ವಿಸರ್ಜಿಸಿ ಬರುವಾಗ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಮೂವರು ಧಾರುಣ ಸಾವು
ಚಿಕ್ಕಮಗಳೂರು, ಸೆಪ್ಟೆಂಬರ್ 7 : ಗಣಪತಿ ವಿಸರ್ಜನೆ ಮಾಡಿ ಹಿಂದಿರುಗುತ್ತಿದ್ದ ವೇಳೆ ಟ್ಯಾಕ್ಟರ್ ನಲ್ಲಿದ್ದ ಮಂಟಪಕ್ಕೆ ಮಾಡಿದ್ದ ಅಲಂಕೃತ ಕಮಾನಿಗೆ ವಿದ್ಯುತ್ ತಂತಿ ತಗುಲಿ ಮೂವರು ಮೃತ ಪಟ್ಟು, 6 ಮಂದಿ ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಮೃತರನ್ನು ಜಿ.ಹೊಸಳ್ಳಿ ಗ್ರಾಮದ ರಾಜು(50), ಪಾರ್ವತಿ(28) ಹಾಗೂ ರಚನಾ(22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಂಗೀತಾ(18) ಎಂಬ ಯುವತಿ ಹಾಗೂ ಹಾಗೂ ಪಲ್ಲವಿ(13) ಎಂಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೌರಿ(40) ಮಹಿಳೆ ವಿದ್ಯುತ್ ಪ್ರವಹಿಸಿ ಅಸ್ವಸ್ಥರಾಗಿದ್ದು, ಅವರಿಗೆ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚೌತಿ ಹಬ್ಬದ ಅಂಗವಾಗಿ ಜಿ.ಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದ್ದು, ಮಂಗಳವಾರ ರಾತ್ರಿ ಟ್ರ್ಯಾಕ್ಟರ್ ಮೂಲಕ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು. ಹಿಂದಿರುಗುತ್ತಿದ್ದ ವೇಳೆ ಟ್ಯಾಕ್ಟರ್‌ಗೆ ಕಟ್ಟಲಾಗಿದ್ದ ಕಮಾನು ರಸ್ತೆ ಬದಿಯಲ್ಲಿದ್ದ ವಿದ್ಯುತ್ ತಂತಿಗೆ ತಗುಲಿದೆ. ಪರಿಣಾಮ ಟ್ಯಾಕ್ಟರ್‌ನಲ್ಲಿ ಕುಳಿತಿದ್ದವರಿಗೆ ವಿದ್ಯುತ್ ಪ್ರವಹಿಸಿದೆ. ಟ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್‍ನ ಇಂಜಿನ್ ಮೇಲೆ ಕುಳಿತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ.

ಕತ್ತಲ್ಲಿ ನಡೆದ ಅವಘಡ
ಕಳೆದ ರಾತ್ರಿ ಗಣಪತಿ ವಿಸರ್ಜಿಸಿ ಮನೆಗೆ ಹಿಂತಿರುವಾಗ ಈ ಅಗಘಡ ಸಂಭವಿಸಿದ್ದು ಚಾಲಕನ ನಿರ್ಲಕ್ಷ್ಯ ದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ, ಖುಷಿ ಖುಷಿಯಿಂದ ಗಣೇಶನ ವಿಸರ್ಜಿಸಿ ಮಾಡಿ ಮನೆಗೆ ವಾಪಸ್ಸು ಆಗುವ ವೇಳೆ ಈ ಅಪಘಾತ ಸಂಭವಿಸಿದ್ದು ಜಿ ಹೊಸಳ್ಳಿ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ.
ಜೀವನ್ಮರಣ ಹೋರಾಟದಲ್ಲಿರುವ ಬಾಲಕಿ, ಓರ್ವ ಯುವತಿ
ಇನ್ನು ಘಟನೆಯಲ್ಲಿ ಇನ್ನು ಇಬ್ಬರು ಜೀವನ್ಮರಣ ಹೋರಾಟದಲ್ಲಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಟ್ರಾಕ್ಟರ್ ನಲ್ಲಿ ಕುಳಿತ್ತಿದ್ದ ಸಂಗೀತ ಹಾಗೂ ಪಲ್ಲವಿ ಎಂಬುವವರು ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ. ಹಬ್ಬದ ವಾತಾವರಣ ವಿದ್ದ ಮನೆಯಲ್ಲಿಗ ನೀರವ ಮೌನ ಆವರಿಸಿದ್ದು ಮಕ್ಕಳು ಬದುಕುಳಿಯಲ್ಲಿ ಎಂದು ದೇವರಲ್ಲಿ ತಂದೆ ತಾಯಿ ಬೇಡಿಕೊಳ್ಳುತ್ತಿದ್ದಾರೆ. ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications