ಚಿಕ್ಕಮಗಳೂರಿನಲ್ಲಿ ಕೆರೆಯಲ್ಲಿ ಈಜಲು ಹೋಗಿ ಮೂವರ ಸಾವು
ಚಿಕ್ಕಮಗಳೂರು, ಅಕ್ಟೋಬರ್ 8: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲಹಳ್ಳಿ ಸಮೀಪದ ಕಂಚಿಕಟ್ಟೆ ಕೆರೆಯಲ್ಲಿ ಘಟನೆ ನಡೆದಿದ್ದು, ಜೀವಿತ್ (14), ಮುರಳಿ ಕಾರ್ತಿಕ್ (15), ಚಿರಾಗ್ (16) ಮೃತ ಬಾಲಕರು.
ಜೀವಿತ್, ಮುರಳಿ ಕಾರ್ತಿಕ್ ಮೃತ ದೇಹ ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಅಗ್ನಿಶಾಮಕದಳ ಹಾಗೂ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಮೃತಪಟ್ಟ ಮೂವರೂ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿಗಳಾಗಿದ್ದು, ನಿನ್ನೆ ಸಂಜೆ ಆಯುಧ ಪೂಜೆ ಮುಗಿಸಿಕೊಂಡು ಈಜಲು ಬಂದಾಗ ಈ ದುರ್ಘಟನೆ ನಡೆದಿದೆ.












Click it and Unblock the Notifications