ವಿಚಿತ್ರ ಮಾಸ್ಕ್ ಹಾಕಿ ಹಳ್ಳಿಗೆ ನುಗ್ಗಿ ಬೆದರಿಸುತ್ತಿದ್ದವ ಸಿಕ್ಕಿಬಿದ್ದ

ಚಿಕ್ಕಮಗಳೂರು, ನವೆಂಬರ್ 29: ಶ್ರೀಗಂಧ ಕಳ್ಳತನ ಮಾಡಲು ಊರಿಗೆ ನುಗ್ಗಿ, ತಮ್ಮನ್ನು ಹಿಡಿಯಲು ಬಂದ ಗ್ರಾಮಸ್ಥರನ್ನು ವಿಚಿತ್ರವಾದ ಮುಖವಾಡ ತೊಟ್ಟು ಬೆದರಿಸಿ ಪರಾರಿಯಾಗುತ್ತಿದ್ದ ಕಳ್ಳರಲ್ಲಿ ಒಬ್ಬ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾನೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಸಿಕ್ಕಿಬಿದ್ದ ಶ್ರೀಗಂಧ ಕಳ್ಳನನ್ನು ಕಂಬಕ್ಕೆ ಕಟ್ಟಿಹಾಕಿ ಗ್ರಾಮಸ್ಥರು ನಿನ್ನೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಶ್ರೀಗಂಧ ಕಳ್ಳತನ ಮಾಡಲು ಹೊಂಚುಹಾಕುತ್ತಿದ್ದ ಕಳ್ಳರು ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗುತ್ತಿದ್ದರು. ಅಕಸ್ಮಾತ್ ತಾವು ಕದಿಯುತ್ತಿರುವುದು ಯಾರ ಕಣ್ಣಿಗಾದರೂ ಬಿದ್ದರೆ ಸಾಕು, ತಮ್ಮ ಬಳಿಯಿದ್ದ ವಿಚಿತ್ರವಾದ ಮಾಸ್ಕ್ ತೊಟ್ಟು ಹಿಡಿಯಲು ಬಂದವರಿಗೆ ಭಯ ಹುಟ್ಟಿಸಿ ಓಡಿ ಹೋಗುವಂತೆ ಮಾಡುತ್ತಿದ್ದರು.

Thieves Threaten Villagers By Wearing Mask In Mudigere

ಹೀಗೆ ನಿನ್ನೆಯೂ ಅದೇ ಪ್ಲಾನ್ ನಲ್ಲಿ ಐದು ಮಂದಿ ಕಳ್ಳರು ಶ್ರೀಗಂಧ ಕದಿಯಲು ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದ ಅಂಚಿನಲ್ಲಿದ್ದ 5 ಶ್ರೀಗಂಧದ ಮರಗಳನ್ನು ಕಡಿದು ಪರಾರಿಯಾಗಲು ಯತ್ನಿಸಿದ ಸಂದರ್ಭ ಗ್ರಾಮಸ್ಥರು ಇವರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಹೆದರಿಸಲು ಮುಂದಾದರೂ ಬಿಡದೇ ಹಿಡಿಯಲು ಹೋಗಿದ್ದಾರೆ ಗ್ರಾಮಸ್ಥರು. ಈ ಸಂದರ್ಭ ನಾಲ್ವರು ಪರಾರಿಯಾಗಿ, ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದಾನೆ.

ಅರೇಹಳ್ಳಿಯ ಅಣ್ಣಪ್ಪನನ್ನು ಹಿಡಿದು ಕಂಬಕ್ಕೆ ಕಟ್ಟಿದ ಗ್ರಾಮಸ್ಥರು ಆತನಗೆ ಚೆನ್ನಾಗಿ ಗೂಸಾ ನೀಡಿ ಮೂಡಿಗೆರೆ ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ. ಪೊಲೀಸರು 5 ಶ್ರೀಗಂಧದ ತುಂಡು, ಅಪೆ ಆಟೋ, ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+