ಮಂಡ್ಯದಲ್ಲಿ ಜೆಡಿಎಸ್ ಮಣಿಸುವುದಕ್ಕೆ ಹೊರಟಿದ್ದಾರೆ ಎಂದ ಸಿಎಂ:ಯಾರ ಮೇಲೆ ಈ ಆರೋಪ?

Recommended Video

      ಮಂಡ್ಯದಲ್ಲಿ ಜೆಡಿಎಸ್ ಮಣಿಸುವುದಕ್ಕೆ ಹೊರಟಿದ್ದಾರೆ ಎಂದ ಸಿಎಂ:ಯಾರ ಮೇಲೆ ಈ ಆರೋಪ?

      ಚಿಕ್ಕಮಗಳೂರು, ಏಪ್ರಿಲ್ 05:ಮಂಡ್ಯದಲ್ಲಿ ಹೆಸರಿಗೆ ಪಕ್ಷೇತರ ಅಭ್ಯರ್ಥಿಯಷ್ಟೆ. ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಜೊತೆ ಟಿವಿ ಮೀಡಿಯಾ ಪಕ್ಷೇತರ ಅಭ್ಯರ್ಥಿ ಬೆಂಬಲಕ್ಕಿದೆ.ಇಷ್ಟೆಲ್ಲಾ ಸೇರಿ ಜೆಡಿಎಸ್ ಮಣಿಸೋದಕ್ಕೆ ಹೊರಟಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ತಿಂಗಳಿಂದ ಮಾಧ್ಯಮದಲ್ಲಿ ಬರ್ತಿರೋದೆ ಬೇರೆ. ಸ್ಥಳೀಯವಾಗಿ ಅಲ್ಲಿರುವ ಪರಿಸ್ಥಿತಿಯೇ ಬೇರೆ. ಮೇ 23ರ ಬಳಿಕ ನಾನು ನಿಮಗೆ ಉತ್ತರಿಸುತ್ತೇನೆ ಎಂದರು.

      ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

      ಮಾಧ್ಯಮಗಳು ಅವರ ಜೊತೆ ಸೇರಿದ್ದಾರೆ ಎಂದ ಕುಮಾರಸ್ವಾಮಿ, ದೇಶದಲ್ಲಿ ಮಂಡ್ಯ ಬಿಟ್ಟು ಬೇರೆ ಕಡೆ ಎಲೆಕ್ಷನ್ ನಡೆಯುತ್ತಿಲ್ವಾ?.ಎಲ್ಲಾ ರೀತಿಯ ಚಕ್ರವ್ಯೂಹ ರಚನೆ ಮಾಡಿದ್ದಾರೆ. ಮಂಡ್ಯ ಜನ ಎಲ್ಲವನ್ನೂ ಮೆಟ್ಟಿ ನಿಲ್ತಾರೆ. ಐಡಿ ರೇಡ್ ಉದ್ದೇಶ ಎಲ್ಲರಿಗೂ ಗೊತ್ತಿದೆ. ಬಿಜೆಪಿಯವ್ರ ಮಾರ್ಗದರ್ಶನದಲ್ಲಿ ರೇಡ್ ನಡೆಯುತ್ತಿದೆ.ಅದಕ್ಕೆಲ್ಲಾ ಸೊಪ್ಪು ಹಾಕದೆ ಹೋರಾಟಕ್ಕೆ ಹೊರಟಿದ್ದೇವೆ ಎಂದು ಆರೋಪಿಸಿದರು.

      They plotting to defeat the JDS:CM Kumaraswamy

      ಎತ್ತಿನ ಗಾಡಿಯಲ್ಲಿ ಬಂದವರು ಕೊಟ್ಯಾಧಿಪತಿಗಳಾಗಿದ್ದು ಹೇಗೆ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಯಿಸಿದ ಕುಮಾರಸ್ವಾಮಿ, ಸಿ.ಟಿ.ರವಿ ಎಂ.ಎಲ್.ಎ. ಆದಾಗ ಏನಿತ್ತು. ಅವರು ಎಂ.ಎಲ್.ಎ ಆದಾಗ ನನ್ನ ಬಳಿ ಏನು ತೆಗೆದುಕೊಂಡು ಹೋದ್ರು ಕೇಳಿ. ನಿಮ್ಮದ್ದು ಗೋಲ್ಡನ್ ಹ್ಯಾಂಡ್ ಎಂದ್ಹೇಳಿ ನನ್ನಿಂದ ಬಂಡವಾಳ ತೆಗೆದುಕೊಂಡು ಹೋಗಿದ್ದರು.ನಿಮ್ಮಿಂದ ಉದ್ಧಾರ ಆದೆ ಎಂದಿದ್ದರು ಎಂದು ತಿಳಿಸಿದರು.

      ದೇವೇಗೌಡ್ರು ಕೃಷಿ ಬಿಟ್ಟು ಬೇರೆ ವ್ಯವಹಾರ ಮಾಡದೆ ಇರಬಹುದು ಆದರೆ ನಾನು ಚಿತ್ರದ ನಿರ್ಮಾಪಕ, ಹಂಚಿಕೆದಾರ, ನಮ್ಮದೇ ವ್ಯವಹಾರಗಳಿವೆ. ರಾಜಕೀಯ ನಮ್ಮ ವೃತ್ತಿ, ಹಣ ಮಾಡಲು ಬಂದಿಲ್ಲ. ಎಂ.ಎಲ್.ಎ ಆದ ಮೇಲೆ ಕಲ್ಲು ಹೊಡೆಯೋದು, ಸರ್ಕಾರದ ಆಸ್ತಿ ಲೂಟಿ ಮಾಡೋದನ್ನ ನಾನು ಮಾಡಿಲ್ಲ, ನಾನು ಸಿ.ಟಿ. ರವಿ ಕೈಯಲ್ಲಿ ಹೇಳಿಸಿಕೊಳ್ಳಬೇಕಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+