Get Updates
Get notified of breaking news, exclusive insights, and must-see stories!

ವಿಡಿಯೋದಲ್ಲಿ ಸೆರೆಯಾಯ್ತು ನವಿಲುಗಳ ಪ್ರೇಮ ಸಂಭಾಷಣೆ!

ಚಿಕ್ಕಮಗಳೂರು, ಮೇ.09:ನವಿಲೊಂದು ತನ್ನ ಪ್ರೇಯಸಿಯನ್ನು ಕರೆಯುತ್ತಿರುವ ವಿರಳಾತಿವಿರಳ ವಿಡಿಯೋ ಕಾಫಿನಾಡಿನ ವೈಲ್ಡ್ ಲೈಫ್ ಛಾಯಾಗ್ರಾಹಕ ಶಿವಕುಮಾರ್ ಎಂಬುವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವಾಗ ಈ ಅತಿ ಅಪರೂಪದ ವಿಡಿಯೋ ಸೆರೆ ಸಿಕ್ಕಿದೆ. ಮುತ್ತೋಡಿ ಅರಣ್ಯದಲ್ಲಿ ಈಗಾಗಲೇ ಆಗಾಗ ಅಲ್ಪ-ಸ್ವಲ್ಪ ಮಳೆಯಾಗಿದೆ. ಮುತ್ತೋಡಿಯೊಳಗಿನ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಲ್ಲಿ ನೀರು ತುಂಬಿದೆ. ನೀರಲ್ಲಿ ಮಿಂದು ಮೇಲೆ ಬಂದಿರುವ ನವಿಲು ಮತ್ತೊಂದು ನವಿಲಿನ ಆಗಮನಕ್ಕೆ ಗೀಳಿಟ್ಟಿದೆ.

The peacocks love conversation is found in the forest of Muthodi forest

ಈ ನವಿಲಿನ ಗೀಳನ್ನು ಆಲಿಸಿದ ಮತ್ತೊಂದು ನವಿಲು ಕೂಡ ಕೂಗುವ ಮೂಲಕ ಬರುವ ಸೂಚನೆ ನೀಡಿದೆ. ಎರಡೂ ನವಿಲುಗಳೂ ಮಾತನಾಡುವ ಪರಿಯೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕಾಲ ನವಿಲುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವ ಸಮಯ. ಹಾಗಾಗಿ, ಒಂದು ನವಿಲು ಮತ್ತೊಂದು ನವಿಲಿಗಾಗಿ ಈ ರೀತಿ ಗೀಳಿಡುತ್ತೆ ಅನ್ನೋದು ಪರಿಸರವಾದಿಗಳ ಮಾತು. ಅದೇನೆ ಇದ್ರು, ಎರಡು ನವಿಲುಗಳ ಸಂಭಾಷಣೆ ಮಾತ್ರ ಅತ್ಯದ್ಭುತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+