ತರೀಕೆರೆ ರೈಲ್ವೆ ಅಧಿಕಾರಿಗಳ ಯಡವಟ್ಟು, ಶ್ರೀಮತಿಯಾದ ಶೋಭಾ ಕರಂದ್ಲಾಜೆ!
Recommended Video

Lok Sabha Elections 2019 : ಅಧಿಕಾರಿಗಳ ಯಡವಟ್ಟಿನಿಂದಾಗಿ ಶ್ರೀಮತಿಯಾದ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಫೆಬ್ರವರಿ 22:ತರೀಕೆರೆ ರೈಲ್ವೆ ಅಧಿಕಾರಿಗಳು ಮಾಡಿದ ಯಡವಟ್ಟಿಗೆ ಕುಮಾರಿ ಶೋಭಾ ಕರಂದ್ಲಾಜೆ ಅವರು ಶ್ರೀಮತಿ ಶೋಭಾ ಕರಂದ್ಲಾಜೆಯಾಗಿದ್ದಾರೆ.
ಹೌದು, ತರೀಕೆರೆಯಲ್ಲಿ ಇಂದು ಶುಕ್ರವಾರ ಮಧ್ಯಾಹ್ನ ರೈಲ್ವೆ ಪ್ಲಾಟ್ ಫಾರಂ ವಿಸ್ತರಣೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆಂದು ಮಾಡಿಸಲಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಕುಮಾರಿಗೆ ಅಧಿಕಾರಿಗಳು ಶ್ರೀಮತಿ ಪಟ್ಟ ಕಟ್ಟಿದ್ದಾರೆ. ಅಂದರೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಶ್ರೀಮತಿ ಎಂದು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಲಾಗಿದೆ.

ರೈಲ್ವೆ ಫ್ಲಾಟ್ ಫಾರಂ ವಿಸ್ತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಆದ ಈ ಯಡವಟ್ಟು ನೋಡಿ ರಾಷ್ಟ್ರಮಟ್ಟದಲ್ಲಿ ಕುಮಾರಿ ಎಂದು ಗುರುತಿಸಿಕೊಂಡಿದ್ದ ಸಂಸದೆ ಶೋಭಾ ಕರಂದ್ಲಾಜೆಗೆ ಅವಮಾನವಾದಂತಾಗಿದೆ.












Click it and Unblock the Notifications