ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ, ಗುಣ ಇದೆಯಾ?; ಸಿಟಿ ರವಿ

ಚಿಕ್ಕಮಗಳೂರು, ಜನವರಿ 02: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿಯೇ ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಾತಿನ ಸಮರ ನಡೆದಿದೆ. "ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ಆದರೆ ಗುಣ ಇದೆಯೇ" ಎಂದು ಬಿಜೆಪಿ ನಾಯಕ ಸಿ. ಟಿ. ರವಿ ಪ್ರಶ್ನೆ ಮಾಡಿದರು.

ಮಂಗಳವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಆಂಜನೇಯ ವಿರುದ್ಧ ಕಿಡಿ ಕಾರಿದರು. "ನಿಮ್ಮ ಹೆಸರು ಅಂಜನೇಯ, ನೀವು ಹೇಳಿದಿರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ ಅಂತ. ರಾಮ ಎಲ್ಲರಿಗೂ ನ್ಯಾಯ ಕೊಟ್ಟು, ಧರ್ಮದ ಪರ ಕೆಲಸ ಮಾಡಿದ" ಎಂದರು.

Siddaramaiah Name CT Ravi Statement On H Anjaneya Comment

"ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ಟರಾ?. ದಲಿತರಿಗೆ ಅಂತಾ ಇಟ್ಟ 11 ಸಾವಿರ ಕೋಟಿ ವಾಪಸ್ ತೆಗೆದುಕೊಂಡರು. ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಇಟ್ಟರು. ಒಬ್ಬರಿಗೆ ಆನ್ಯಾಯ ಮಾಡುವವರೂ ರಾಮನಿಗೆ ಸಮಾನಾಗಲು ಸಾಧ್ಯವೇ?" ಎಂದು ಪ್ರಶ್ನೆ ಮಾಡಿದರು.

"ಆಯೋಧ್ಯ ಹೋರಾಟದಲ್ಲಿ ಪಾಲ್ಗೊಂಡರು ಎಂದು 31 ವರ್ಷದ ನಂತರ ಆ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗಿದೆ. ರಾಮನ ಹೆಸರು ಇಟ್ಕೊಂಡಿದಕ್ಕೆ ರಾಮನ ಗುಣ ಬಂದಿದೆ ಅಂತಾ ಭಾವಿಸೋಕೆ ಅಗುತ್ತದೆಯೇ?. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ಆದರೆ ಗುಣ ಇದೆಯೇ?" ಎಂದು ಸಿ. ಟಿ. ರವಿ ಟೀಕಿಸಿದರು.

ನಾವೆಲ್ಲರೂ ಭಾಗವಹಿಸಿದ್ದೆವು; "92ರ ಕರ ಸೇವೆಯಲ್ಲಿ ನಾವು ಭಾಗವಹಿಸಿದ್ದೆವು. ನಾನು, ಸುನಿಲ್ ಕುಮಾರ್ ಸೇರಿದಂತೆ ಸಾಕಷ್ಟು ಜನ ಭಾಗವಹಿಸಿದ್ದೆವು. ನಾವೆಲ್ಲರೂ ಅಯೋಧ್ಯೆ ಕರೆ ಸೇವೆಯಲ್ಲಿ ಭಾಗವಹಿಸಿದ್ದೆವು. ನಮಗೆ ಇನ್ನೂ ಆಮಂತ್ರಣ ಬಂದಿಲ್ಲ" ಎಂದರು.

"ಯಾರಿಗೆ ಆಮಂತ್ರಣ ಕೊಡಬೇಕು ಎಂಬ ನಿರ್ಧಾರ, ಮಾಡುವ ಅಧಿಕಾರ ರಾಮ ಮಂದಿರ ನಿರ್ಮಾಣ ಟ್ರಸ್ಟಿಗೆ ಮಾತ್ರ ಇದೆ. ಆ ಅಧಿಕಾರ ಪ್ರಧಾನ ಮಂತ್ರಿಗಳಿಗೂ ಇಲ್ಲ. ಅವರು ಈ ಬಗ್ಗೆ ನಿರ್ಣಯ ಮಾಡುತ್ತಾರೆ. ಇನ್ನೂ ಕಾಲಾವಕಾಶ ಇದೆ" ಎಂದು ಹೇಳಿದರು.

"ಆಮಂತ್ರಣ ಪತ್ರಿಕೆ ಬರಬಹುದು, ಬರದೇ ಇರಬಹುದು. ಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದವರಿಗೆ ಇನ್ನು ಆಮಂತ್ರಣ ಬಂದಿಲ್ಲ. ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಕಾಂಗ್ರೆಸ್ ಯಾವಾಗ ಬಯಸಿತ್ತು? ಅವರು ಬಯಸಿದ್ದರೆ ಸ್ವತಂತ್ರ ಭಾರತದಲ್ಲಿ ಹೋರಾಟ ಮಾಡುವ ಪ್ರಮಯವೇ ಇರುತ್ತಿರಲಿಲ್ಲ" ಎಂದು ಸಿ. ಟಿ. ರವಿ ಕುಟುಕಿದರು.

"ದೇಶಕ್ಕೆ ಸ್ವತಂತ್ರ ಬಂದ ಸಂದರ್ಭದಲ್ಲಿ ಮಂದಿರ ನಿರ್ಮಾಣ ಆಗುತ್ತಿತ್ತು. ಹೋರಾಟ ಹಾಗೂ ಕರಸೇವೆ ಮಾಡುವ ಸಂದರ್ಭ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಮಂದಿರ ನಿರ್ಮಾಣ ಹೋರಾಟದ ಸಂದರ್ಭದಲ್ಲಿ, ಒಂದು ಹೇಳಿಕೆಯೂ ಕೊಟ್ಟಿಲ್ಲ. ಮಾಜಿ ಸಚಿವ ಆಂಜನೇಯ ಹೇಳಿಕೆ ಕೊಟ್ಟಿಲ್ಲ" ಎಂದರು.

"ಸಿದ್ದರಾಮಯ್ಯ ಅವರಿಗೆ ಆಮಂತ್ರಣ ಪತ್ರಿಕೆ ಬರುತ್ತದೋ ಬಿಡುತ್ತದೋ ಗೊತ್ತಿಲ್ಲ. ಆದರೆ ಪ್ರತಿ ಮನೆಗೂ ಮಂತ್ರಾಕ್ಷತೆ ಬಂದೇ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಂಜನೇಯ ಮನೆಗೆ ಅಯೋಧ್ಯೆಯ ಮಂತ್ರಾಕ್ಷತೆ ತಲುಪುತ್ತದೆ" ಎಂದು ಸಿ. ಟಿ. ರವಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+