ಸಿದ್ದರಾಮಯ್ಯ "ಹುಲಿಯಾ" ಅಲ್ಲ, "ಇಲಿಯಾ" ಎಂದ ಸಿ ಟಿ ರವಿ

Recommended Video

      Karnataka Bypoll results 2019 : CTV Ravi says the public has made the right choice | BJP | CONGRESS

      ಚಿಕ್ಕಮಗಳೂರು, ಡಿಸೆಂಬರ್ 9: ಉಪ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ನಮ್ಮ ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿದೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಸಂತಸ ವ್ಯಕ್ತಪಡಿಸಿದ್ದಾರೆ.

      ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ - ಜೆಡಿಎಸ್ ಕಿಚಡಿ ಸರ್ಕಾರ ಬೇಡ ಎಂಬ ಆದೇಶವನ್ನು ಮತದಾರರು ಈ ಫಲಿತಾಂಶದ ಮೂಲಕ ನೀಡಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಅಧಿಕಾರಕ್ಕಾಗಿ ಹಗಲು ಕನಸು ಕಾಣುತ್ತಾ ಇದ್ದರು. ಕೆಲವರು ನಾನು ಮುಖ್ಯಮಂತ್ರಿ ಎಂದು ಕೋಟು, ಸೂಟು ಹೊಲಿಸಿಕೊಳ್ಳಲು ತಯಾರಾಗಿದ್ದರು. ಆದರೆ ಕೈ- ದಳಕ್ಕೆ ಮತದಾರರು ತಪರಾಕಿ ಕೊಟ್ಟಿದ್ದಾರೆ" ಎಂದರು.

      "ಮತದಾರರು ಸ್ಥಿರ ಸರ್ಕಾರಕ್ಕೆ ಮತ ಹಾಕಿದ್ದಾರೆ. ಜನರ ದೃಷ್ಟಿಯಲ್ಲಿ ಅನರ್ಹ ಶಾಸಕರು ಅರ್ಹರು. ಅನರ್ಹರು ಎಂದು ಜಪ ಮಾಡುತ್ತಿದ್ದ ಜೆಡಿಎಸ್, ಕಾಂಗ್ರೆಸ್ ನವರಿಗೆ ನೀವು ಅನರ್ಹರು, ನೀವು ಅಯೋಗ್ಯರು ಎಂಬ ಫಲಿತಾಂಶವನ್ನು ಜನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹುಲಿಯಾ ಅಲ್ಲ ಇಲಿಯಾ. ಇದು ಯಡಿಯೂರಪ್ಪ ಸರ್ಕಾರ ಸ್ಥಿರವಾಗಿರಬೇಕು ಎಂದು ಜನರು ಕೊಟ್ಟ ಜನಾದೇಶ" ಎಂದು ಸಂತಸ ವ್ಯಕ್ತಪಡಿಸಿದರು.

      Siddaramaiah Is Not Huliya He Is Iliya Said CT Ravi In Chikkamagaluru

      ಖಾತೆ ಹಂಚಿಕೆ ಕುರಿತೂ ಅಭಿಪ್ರಾಯ ಹಂಚಿಕೊಂಡ ಅವರು, "ಈ ವಿಷಯ ಮುಖ್ಯಮಂತ್ರಿಗಳ ಪರಮಾಧಿಕಾರ. ಸಿಎಂಗೆ ಅನುಭವ ಇದೆ. ಆ ಸವಾಲನ್ನು ಸರ್ಮರ್ಥವಾಗಿ ಅವರು ನಿರ್ವಹಿಸಿದ್ದಾರೆ. ಸೋತ ಅಭ್ಯರ್ಥಿಗಳಿಗೆ ಪಾರ್ಟಿ ಕಟ್ಟುವ ಕೆಲಸ ಕೊಡುತ್ತೇವೆ" ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+