ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ಟಿದ್ದಾರೆ; ಸಿ. ಟಿ. ರವಿ

ಚಿಕ್ಕಮಗಳೂರು, ಡಿಸೆಂಬರ್ 28; "ತಾಯಿ ಇವರೇ ನಿಮ್ಮ ತಂದೆ ಎಂದರೆ ನಂಬುತ್ತಾರೆ ಸಾಕ್ಷಿ ಕೇಳಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರುತ್ತಾರೆ. ಸಿದ್ದರಾಮಯ್ಯ ಅವರಿಗೆ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅದು ಅವರ ದೋಷ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದರು.

ಸೋಮವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ. ಟಿ. ರವಿ, "ಹನುಮ ಹುಟ್ಟಿದ ದಿನಾಂಕ ಗೊತ್ತಾ?" ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. "ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ದರೆ ಅದು ಅವರ ದೋಷ" ಎಂದರು.

"ನಂಬಿಕೆ ಎಲ್ಲವನ್ನೂ ಮೀರಿದ್ದು, ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲಾ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು. ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣಲ್ಲ" ಎಂದು ಸಿ. ಟಿ. ರವಿ ತಿಳಿಸಿದರು.

Siddaramaiah Comment On Hanuman Jayanti CT Ravi Reaction

"ಅವರ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ. ಸಹವಾಸ ದೋಷದಿಂದ ಬಂದಿರುವುದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವ ಕಾರಣಕ್ಕೆ ದೇವರ ಹೆಸರಿಟ್ಟರು. ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ" ಎಂದು ಸಿ. ಟಿ. ರವಿ ಟೀಕಿಸಿದರು.

ಸಿದ್ದರಾಮಯ್ಯ ಹೇಳಿದ್ದೇನು?: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಲು ಹುಟ್ಟೂರು ಸಿದ್ದರಾಮನಹುಂಡಿಗೆ ಭಾನುವಾರ ಸಿದ್ದರಾಮಯ್ಯ ಆಗಮಿಸಿದ್ದರು. ಮತದಾನ ಮಾಡಿದ ಬಳಿಕ ಸ್ನೇಹಿತರ ಮನೆಯಲ್ಲಿ ಬಾಡೂಟ ಸವಿದರು.

ಚಿಕನ್ ಸವಿಯುವಾಗ ಅಲ್ಲಿದ್ದವರೊಬ್ಬರು ಇಂದು ಹನುಮ ಜಯಂತಿ ಎಂದು ನೆನಪಿಸಿದರು. ಆಗ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, "ಹನುಮಂತ ಹುಟ್ಟಿದ ತಾರೀಕು ನಿನಗೇನು ಗೊತ್ತಾ?" ಎಂದು ಕೇಳಿದ್ದರು.

ಸಿದ್ದರಾಮಯ್ಯ ಈ ಹೇಳಿಕೆ ಬಗ್ಗೆ ಹಲವಾರು ನಾಯಕರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮತದಾನ ಮಾಡುವ ಮೊದಲು ಸಿದ್ದರಾಮಯ್ಯ ಗ್ರಾಮದ ಸಿದ್ದರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+