ರಕ್ತ ಚೆಲ್ಲಿಯಾದರೂ ದತ್ತಪೀಠವನ್ನು ಹಿಂದೂಗಳದ್ದಾಗಿಸಿಕೊಳ್ಳುತ್ತೇವೆ:ಪ್ರಮೋದ್ ಮುತಾಲಿಕ್
ಚಿಕ್ಕಮಗಳೂರು, ಅಕ್ಟೋಬರ್.28: ಶ್ರೀರಾಮಸೇನೆ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಇಂದು ಬೃಹತ್ ಶೋಭಾಯಾತ್ರೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದರು.
ಶೋಭಯಾತ್ರೆ ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ಶಂಕರಮಠದಿಂದ ಆರಂಭವಾಗಿದ್ದು, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ದತ್ತಮಾಲಾಧಾರಿಗಳು ಭಾಗಿಯಾಗಲಿದ್ದಾರೆ.
ನಗರದ ಬಸವನಹಳ್ಳಿ ರಸ್ತೆ, ಎಂ.ಜಿ.ರಸ್ತೆ, ಮೂಲಕ ಬೋಳರಾಮೇಶ್ವರದವರೆಗೆ ಶೋಭಾಯಾತ್ರೆ ನಡೆಯಲಿದ್ದು, ನಾಗಸಾಧುಗಳು ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಲಿದ್ದು,
ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಡೆಯುತ್ತಿರುವ ಶೋಭಾಯಾತ್ರೆ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಕ್ತವನ್ನು ಚೆಲ್ಲಿಯಾದರೂ ದತ್ತಪೀಠವನ್ನು ಹಿಂದುಗಳದ್ದಾಗಿಸಿಕೊಳ್ಳುತ್ತೇವೆ. ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳಿಗೆ ದತ್ತಪೀಠ ವಿವಾದವನ್ನು ಸದಾ ಜೀವಂತ ಇಡಬೇಕಿದೆ.
ದೇವೇಗೌಡರು ಹುಬ್ಬಳ್ಳಿ ಈದ್ಗಾ ವಿವಾದ ಬಗೆಹರಿಸಿದಂತೆ ಸಿ.ಎಂ ಕುಮಾರಸ್ವಾಮಿ ದತ್ತಪೀಠ ವಿವಾದವನ್ನು ಬಗೆಹರಿಸಿ ಹಿಂದುಗಳಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.












Click it and Unblock the Notifications