ಚಿಕ್ಕಮಗಳೂರು: ಲಕ್ಷಾಂತರ ರೂ. ಬೆಲೆಬಾಳುವ ಶ್ರೀಗಂಧ ಮರಗಳ ಕಳ್ಳತನ
ಚಿಕ್ಕಮಗಳೂರು, ಜೂನ್ 29: ಲಕ್ಷಾಂತರ ರುಪಾಯಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಚಿಕ್ಕಮಗಳೂರು ಜಿಲ್ಲೆಯ ದೊರನಾಳು ಗ್ರಾಮದ ಸಮೀಪದ ವಿಶುಕುಮಾರ್ ಎಂಬುವವರ ತೋಟದಲ್ಲಿ ಭಾನುವಾರ ರಾತ್ರಿ ಕಳ್ಳತನ ಮಾಡಲಾಗಿದೆ.
Recommended Video
Congress Cycle Rally against Fuel hike : ಸೈಕಲ್ ಏರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು|Oneindia Kannada
15 ವರ್ಷದ ಆರು ಮರಗಳನ್ನು ಕಡಿದಿರುವ ಕಳ್ಳರು, ಎರಡು ಮರಗಳನ್ನು ತಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಎರಡು ಮರಗಳನ್ನು ಸಾಗಿಸುವ ವೇಳೆ ನಾಯಿಗಳು ಬಂದ ಕಾರಣ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸುಮಾರು ನಾಲ್ಕೂವರೆ ಎಕರೆ ಜಮೀನಿನಲ್ಲಿ 300 ಶ್ರೀಗಂಧ, ಸಾವಿರಾರು ತೇಗದ ಮರಗಳನ್ನು ಹಾಕಲಾಗಿದೆ. ಕಳೆದ ವರ್ಷವೂ ಸಹ ಎರಡು ಮರಗಳನ್ನು ಕಳ್ಳತನ ಮಾಡಲಾಗಿತ್ತು. ಈ ವೇಳೆ ಸಿಸಿಟಿವಿ ಅಳವಡಿಸಿ ನಾಯಿಗಳನ್ನು ಸಹ ಸಾಕಿ ತೋಟದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಆದರೆ ನಿನ್ನೆ ಮತ್ತೆ ಕಳ್ಳತನವಾಗಿರುವುದು ಮಾಲೀಕರಲ್ಲಿ ಆತಂಕ ಉಂಟುಮಾಡಿದೆ.












Click it and Unblock the Notifications