ನಾಲ್ಕನೇ ಬಾರಿ ಕನ್ನ; ನಾಲ್ಕು ಲಕ್ಷವಿದ್ದ ಹುಂಡಿ ಕಳವು
ಚಿಕ್ಕಮಗಳೂರು, ಮೇ 30: ಚಿಕ್ಕಮಗಳೂರಿನ ಕಡೂರು ತಾಲೂಕು ಸಖರಾಯಪಟ್ಟಣದಲ್ಲಿನ ದೇವಸ್ಥಾನವೊಂದರಲ್ಲಿ ಹುಂಡಿಗಳು ಕಳುವಾಗಿರುವ ಘಟನೆ ನಡೆದಿದೆ.
ಇಲ್ಲಿನ ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದಲ್ಲಿದ್ದ 4 ಹುಂಡಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ನಾಲ್ಕು ಹುಂಡಿಗಳಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಹಣ್ಣವಿದ್ದುದಾಗಿ ತಿಳಿದುಬಂದಿದೆ. ಎಂಟಕ್ಕೂ ಹೆಚ್ಚು ಜನ ಕಳ್ಳರು ಸೇರಿ ಹುಂಡಿಗಳನ್ನು ತೆಗೆದುಕೊಂಡು ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ದೇವಾಲಯದಲ್ಲಿ ಹುಂಡಿ ಕಳುವಾಗುತ್ತಿರುವ ಘಟನೆ ಇದೇ ಮೊದಲೇನಲ್ಲ. ಸತತ ನಾಲ್ಕನೇ ಬಾರಿ ಹುಂಡಿ ಕಳ್ಳತನ ನಡೆದಿದೆ.

ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಡಾಗ್ ಸ್ಕ್ವಾಡ್ ತಂಡದಿಂದಲೂ ತನಿಖೆ ನಡೆಸಲಾಗಿದೆ.












Click it and Unblock the Notifications