'ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ'

ಚಿಕ್ಕಮಗಳೂರು, ಡಿಸೆಂಬರ್ 28: ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ, ಬೆಳಗಾವಿಯಲ್ಲಿ ಅವ್ರು ಕಾಂಗ್ರೆಸ್ ಕಟ್ಟಿ ಆಳಿದೋರು. ಅವರು ಕಾಂಗ್ರೆಸ್ ಬಿಡ್ತಾರೆ ಅನ್ನೋದು ಶುದ್ಧ ಸುಳ್ಳು ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬೆಟ್ಟಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷ ಇರೋದೆ ಕೆದಕಿ-ಕೆದಕಿ ಏನಾದ್ರು ಹೇಳೋಕೆ. ಅವರು ಏನೇ ಹೇಳಿದ್ರು ನಮ್ಮ ಸರ್ಕಾರ ಭದ್ರವಾಗಿದೆ. ಹೊರಟ್ಟಿ ಕೂಡ ಹಿರಿಯ ರಾಜಕಾರಣಿ. ಅನುಭವಿ, ಮೇಧಾವಿ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ಖಾತೆ ಹಂಚಿಕೆ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ. ಪರಮೇಶ್ವರ್ ರನ್ನೂ ಕೇಳಿಯೇ ಖಾತೆ ಹಂಚಿಕೆ ಮಾಡಿರೋದು ಎಂದರು.

Puttaranga Shetty Said that Ramesh Jarkiholi does not leave the Congress party

ಸಚಿವ ಸ್ಥಾನದಿಂದ ವಜಾಗೊಂಡು ಕಾಂಗ್ರೆಸ್‌ ಮೇಲೆ ತೀವ್ರ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಅವರು ಯಾವ ಕಾಂಗ್ರೆಸ್‌ ನಾಯಕರ ಕೈಗೂ ಸಿಗುತ್ತಿಲ್ಲ. ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಹಾದಿ ಹಿಡಿದಿದ್ದಾರೆ ಎನ್ನಲಾಗಿದ್ದು, ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಪಡ್ಣವೀಸ್ ಅವರ ಸಂಪರ್ಕದಲ್ಲಿದ್ದಾರೆ ಎನ್ನುವ ಊಹಾಪೋಹ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+