ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರ ಕೈಚಳಕ: ಅಕ್ರಮ ಗಾಂಜಾ ಸಾಗಾಟ- ಪೊಲೀಸ್ ದಾಳಿ!
ಚಿಕ್ಕಮಗಳೂರು ಆಗಸ್ಟ್ 25: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ದಾಳಿ ಮಾಡಿ ಗಾಂಜಾ ಸೀಜ್ ಮಾಡಿರುವ ಘಟನೆ ಚಿಕ್ಕಮಗಳೂರು ಘಟನೆ ನಡೆದಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಬಳ್ಳಾವರ ಗ್ರಾಮದಲ್ಲಿ ಪೊಲೀಸರು ದಾಳಿ ವೇಳೆ ಗಾಂಜಾ ಸೀಜ್ ಮಾಡಿದ್ದಾರೆ.
ವ್ಯಕ್ತಿಯೊಬ್ಬ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಸಿ.ಇ.ಎನ್ ಠಾಣೆಯ ಪಿಎಸ್‌ಐ ರಘುನಾಥ್ ನೇತೃತ್ವದ ತಂಡ ದಾಳಿ ಮಾಡಿದೆ. ಪೊಲೀಸರು ದಾಳಿ ನಡೆಸುವ ಮಾಹಿತಿ ತಿಳಿದು ಆರೋಪಿ ಸ್ಥಳದಿಂದ ಎಸ್ಕೆಪ್ ಆಗಿದ್ದಾನೆ. ಇನ್ನೂ ಆರೋಪಿ ಮಾರಾಟ ಮಾಡುತ್ತಿದ್ದ 1 ಕೆಜಿ 60 ಗ್ರಾಂ ತೂಕದ ಗಾಂಜಾವನ್ನು ಸೀಜ್ ಮಾಡಿದ್ದಾರೆ. ಈ ಸಂಬಂಧ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಜಲಾಗಿದೆ.

ಮನೆಯಂಗಳಕ್ಕೆ ಬಂದ ಕಾಡನೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡನೆಗಳ ಉಪಟಳ ಮುಂದುವರೆದಿದ್ದು ಇಷ್ಟು ದಿನ ಕಾಫಿ ತೋಟಗಳಲ್ಲಿ ದಾಳಿ ಇಡುತ್ತಿದ್ದ ಕಾಡನೆಗಳು ಇದೀಗ ಮನೆ ಬಾಗಿಲಿಗೆ ಬರಲು ಆರಂಭಿಸಿವೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗಾಳಿಗಂಡಿ ಗ್ರಾಮದ ಆನಂದ್ ಎಂಬುವವರ ಮನೆಯಂಗಳಕ್ಕೆ ನಿನ್ನೆ ರಾತ್ರಿ ಒಂಟಿ ಸಲಗ ಬಂದು ಆಹಾರಕ್ಕಾಗಿ ಹುಡುಕಾಡಿದೆ. ಇಂದು ಬೆಳಗ್ಗೆ ಎದ್ದು ನೋಡಬೇಕಾದರೆ ಮನೆಯಂಗಳದಲ್ಲಿ ಕಾಡಾನೆ ಹೆಜ್ಜೆ ಗುರುತು ಪತ್ತೆಯಾಗಿರುವುದರಿಂದ ಸುತ್ತಲಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರ ಕೈಚಳಕ
ಚಿಕ್ಕಮಗಳೂರು: ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದ ಸತೀಶ್ ಎಂಬುವವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹಿಂದಿನ ಬಾಗಿಲನ್ನು ಮುರಿದು ಒಳ ನುಗ್ಗಿರುವ ಖದೀಮರು ಕಪಾಟಿನಲ್ಲಿದ್ದ 50 ಸಾವಿರ ನಗದು ಹಾಗೂ ಚಿನ್ನದ ಬ್ರಾಸ್ಲೈಟ್ ನ್ನು ಕದ್ದೋಯ್ದಿದ್ದಾರೆ.

ದೇವರ ಕೋಣೆಯಲ್ಲಿದ್ದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಮುಟ್ಟದ ಖದೀಮರು, ಮನೆಯ ಉಳಿದ ಎಲ್ಲಾ ಕೋಣೆಗಳನ್ನು ಜಾಲಾಡಿದ್ದಾರೆ. ಈ ಕುರಿತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರಾದ ಸೂರ್ಯಕಾಂತ್ ಶೆಟ್ಟಿ ಆರೋಪಿದ್ದಾರೆ.
ಮೆಸ್ಕಾಂ ಅಧಿಕಾರಿಗೆ ಶಾಸಕ ತಮ್ಮಯ್ಯ ಖಡಕ್ ಸೂಚನೆ
ಚಿಕ್ಕಮಗಳೂರು: ರೈತರಿಂದ ದೂರು ಬರದಂತೆ ಕಾರ್ಯ ನಿರ್ವಹಿಸಬೇಕು. ರೈತರಿಗೆ ಸೂಕ್ತ ಸಮಯಕ್ಕೆ ವಿದ್ಯುತ್ ನೀಡಬೇಕು. ಮತ್ತೆ ರೈತರಿಂದ ದೂರು ಬಂದರೆ ಪೆನ್ನು ಪೇಪರ್ ಕೆಲಸ ಮಾಡುತ್ತೆ ಎಂದು ಮೆಸ್ಕಾಂ ಅಧಿಕಾರಿಗೆ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ತರಾಟೆ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಹುಲಿಕೆರೆ ಗ್ರಾಮದಲ್ಲಿ ಇಂದು ನಡೆದಿದೆ.
ರೈತರಿಗೆ ಸರಿಯಾಗಿ ವಿದ್ಯುತ್ ನೀಡಬೇಕು. ಸರ್ಕಾರ ವಿದ್ಯುತ್ ಕೊಡ್ತಿದ್ರೆ ನಿಮ್ಮಗೆ ಏನು ತೊಂದರೆ ರೈತರಿಗೆ ಸರಿಯಾಗಿ ವಿದ್ಯುತ್ ನೀಡಲು ಸಮಸ್ಯೆ ಏನು ಅಂತಾ ಮೆಸ್ಕಾಂ ಅಧಿಕಾರಿಗೆ ಶಾಸಕರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕಂಪ್ಲೆಟ್ ಬಂದ್ರೆ ಬೇರೆಡೆ ಹಾಕಿಸಬೇಕಾಗುತ್ತೆ ಎಂದು ಶಾಸಕರು ಖಡಕ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications