ಮಳೆ ನಿಲ್ಲಲೆಂದು ಋಷ್ಯಶೃಂಗನ ಮೊರೆ ಹೋದ ಮಲೆನಾಡಿಗರು
ಚಿಕ್ಕಮಗಳೂರು, ಸೆಪ್ಟೆಂಬರ್ 9: ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರಂಭಗೊಂಡಿದೆ. ತಿಂಗಳ ಹಿಂದಷ್ಟೇ ಕಾಣಿಸಿಕೊಂಡು ಪ್ರವಾಹ ಸೃಷ್ಟಿಸಿ ಆತಂಕ, ಅನಾಹುತ ತಂದಿತ್ತಿದ್ದ ಮಳೆ ಇದೀಗ ಎರಡನೇ ಬಾರಿ ಭಯದ ವಾತಾವರಣ ತಂದಿತ್ತಿದೆ.
ಮಳೆ ಸೃಷ್ಟಿಸಿದ್ದ ಅವಾಂತರಕ್ಕೆ ನಲುಗಿ ಹೋಗಿದ್ದ ಚಿಕ್ಕಮಗಳೂರು ಜಿಲ್ಲೆಯ ಜನರು ದಿಕ್ಕೇ ತೋಚದಂತಾಗಿದ್ದಾರೆ. ಮಳೆ ಬಾರದೇ ಇದ್ದರೆ ಸಾಕು ಎಂದು ಬೇಡಿಕೊಳ್ಳುತ್ತಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿರುವ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಅತಿವೃಷ್ಟಿ ತಡೆಯಲು ಪ್ರಾರ್ಥಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗಿದೆ.
ಶಾಸಕರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ಅತಿವೃಷ್ಟಿ ತಡೆಗೆ ವಿಶೇಷ ಪೂಜೆ ನಡೆಯಿತು, ರುದ್ರಾಭಿಷೇಕ, ಪ್ರಾರ್ಥನೆ ಸಲ್ಲಿಸಲಾಯಿತು.

ಕಿಗ್ಗಾದ ಋಷ್ಯಶೃಂಗ ಮಳೆ ದೇವರೆಂದೇ ಖ್ಯಾತಿ. ಕಳೆದ ಬಾರಿಯೂ ಮಳೆ ನಿಲ್ಲಲೆಂದು ಋಷ್ಯಶೃಂಗನಿಗೆ ಅಗಿಲು ಸೇವೆ ಅರ್ಪಿಸಲಾಗಿದ್ದು, ಅಚ್ಚರಿಯ ರೀತಿಯಲ್ಲಿ ಮಳೆ ನಿಂತಿತ್ತು.












Click it and Unblock the Notifications