ಶೃಂಗೇರಿ: ಮಕ್ಕಳನ್ನು ಟವಲ್‌ನಂತೆ ಸಾರಿಗೆ ಬಸ್‌ ಕಿಟಕಿಯಲ್ಲಿ ತುರುಕಿ ಸೀಟ್‌ ಹಿಡಿದ ಪ್ರಯಾಣಿಕರು, ವಿಡಿಯೋ ವೈರಲ್‌

ಚಿಕ್ಕಮಗಳೂರು, ಅಕ್ಟೋಬರ್‌, 22: ನವರಾತ್ರಿ ಹಬ್ಬ ಹಿನ್ನೆಲೆ ದೇವಾಲಯಗಳು ತುಂಬಿ ತುಳುಕುತ್ತಿವೆ. ಇನ್ನು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಲಾಯಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿಸು ಬರುತ್ತಿದ್ದಾರೆ. ಭಕ್ತರ ಹೆಚ್ಚಿದ ಹಿನ್ನೆಲೆ ಸಾರಿಗೆ (KSRTC) ಬಸ್‌ಗಳು ತುಂಬಿ ತುಳುಕುತ್ತಿವೆ. ಇನ್ನು ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನು ಟವೆಲ್‌ನಂತೆ ಪೋಷಕರು ಹತ್ತಿಸುತ್ತಿದ್ದಾರೆ.

ಬಸ್‌ನ ಕಿಟಕಿಯಿಂದ ಮಕ್ಕಳನ್ನು ಹತ್ತಿಸಿ ರಿಸರ್ವೇಶನ್ ಮಾಡುತ್ತಿದ್ದಾರೆ ಕೆಲ ಪ್ರವಾಣಿಕರು. ಒಂದೇ ಸಾರಿಗೆ ಬಸ್‌ಗೆ 300ಕ್ಕೂ ಹೆಚ್ಚು ಜನ ಮುಗಿಬಿದ್ದಿದ್ದಾರೆ. ಶಕ್ತಿ ಯೋಜನೆಯ ಫ್ರೀ ಬಸ್ ಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತಾದಿಗಳು ಶೃಂಗೇರಿಗೆ ಆಗಮಿಸುತ್ತಿದ್ದಾರೆ. ಶಕ್ತಿ ಯೋಜನೆಯ ಎಫೆಕ್ಟ್‌ನಿಂದ ಪ್ರವಾಸಿ ಕೇಂದ್ರ ಫುಲ್ ರಶ್ ಆಗಿವೆ.

Passengers Overcrowded in KSRTC buses at Sringeri

ಇನ್ನು ಜನರನ್ನು ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೈರಾಣಾಗಿದ್ದಾರೆ. ಶೃಂಗೇರಿಯಲ್ಲಿ ಬಸ್ ಹತ್ತಲು ಮಹಿಳಾ ಮಣಿಗಳು ಮುಗಿಬಿದ್ದಿದ್ದು, ಪ್ರಯಾಣಿಕರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಸಹ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ

ರಾಜ್ಯದೆಲ್ಲೆಡೆ ನವರಾತ್ರಿ ಉತ್ಸವ ಜೋರಾಗಿದೆ. ಅದರಂತೆ ಮಲೆನಾಡಲ್ಲೂ ಕೂಡ ಶರನ್ನವರಾತ್ರಿ ಉತ್ಸವ ಜೋರಾಗಿದೆ. ಕಾಫಿನಾಡಿನ ಪ್ರಮುಖ ಆಕರ್ಷಣೆ ಸ್ಥಳಗಳಲ್ಲಿ ಒಂದಾಗಿರುವ ಹೊರಾನಾಡಿನ ತಾಯಿ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲೂ ಸಂಭ್ರಮ ಮನೆ ಮಾಡಿದೆ.

ನವರಾತ್ರಿ ಹಿನ್ನೆಲೆ ದಿನನಿತ್ಯ ಸಾವಿರಾರು ಭಕ್ತರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡಿಗೆ ಆಗಮಿಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ತಾಯಿಯ ದರ್ಶನದೊಂದಿಗೆ ಆಶೀರ್ವಾದ ಪಡೆಯುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಅವತಾರಗಳಲ್ಲಿ ಅನ್ನಪೂರ್ಣೇಶ್ವರಿ ಕೂಡ ಒಂದಾಗಿದ್ದು, ಆದ್ದರಿಂದ ವಿಶೇಷ ಪೂಜೆ ಪುನಸ್ಕಾರಗಳು ಜರುಗುತ್ತಿವೆ. ತಾಯಿಯಂತೂ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+