ಗ್ರಾಮ ಲೆಕ್ಕಿಗನ ಜೊತೆ ಎನ್. ಆರ್. ಪುರ ತಹಶೀಲ್ದಾರ್ ವಿವಾಹ; ಏನಿದು ವಿವಾದ?
ಚಿಕ್ಕಮಗಳೂರು, ಸೆಪ್ಟೆಂಬರ್ 21; ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಹಶೀಲ್ದಾರ್ ಸಿ. ಜಿ. ಗೀತಾ ತರೀಕೆರೆ ತಾಲೂಕು ಗ್ರಾಮ ಲೆಕ್ಕಿಗ ಡಿ. ಟಿ. ಶ್ರೀನಿಧಿ ಜೊತೆ ವಿವಾಹವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಈ ಕುರಿತು ವಿವರಣೆ ಕೇಳಿ ಶಹಶೀಲ್ದಾರ್‌ಗೆ ನೋಟಿಸ್ ನೀಡಿದ್ದಾರೆ. ಏಳು ದಿನದಲ್ಲಿ ತಹಶೀಲ್ದಾರ್ ಈ ಕುರಿತು ವಿವರಣೆ ನೀಡಬೇಕಿದೆ.
ಗ್ರಾಮ ಲೆಕ್ಕಿಗ ಡಿ. ಟಿ. ಶ್ರೀನಿಧಿಗೆ ಈಗಾಗಲೇ ಟಿ. ಆರ್. ಲೀಲಾ ಜೊತೆ ವಿವಾಹವಾಗಿದೆ. ಅಲ್ಲದೇ ಅವಿವಾಹಿತೆ ಎಂದ ಸಹ ಸಿ. ಜಿ. ಗೀತಾ ಮಾಹಿತಿ ನೀಡಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
19/7/2021ರಂದು ಸಿ. ಜಿ. ಗೀತಾ ಮತ್ತು ಡಿ. ಟಿ. ಶ್ರೀನಿಧಿ ವಿವಾಹ ಎನ್. ಆರ್. ಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. 2006ರಲ್ಲಿ ಡಿ. ಆರ್. ಲೀಲಾ ದಾವಣಗೆರೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಡಿ. ಟಿ. ಶ್ರೀನಿಧಿ ವಿವಾಹವಾಗಿದ್ದಾರೆ.

ಡಿ. ಆರ್. ಲೀಲಾ ಮತ್ತು ಡಿ. ಟಿ. ಶ್ರೀನಿಧಿ ದಂಪತಿಗೆ ಎರಡು ಮಕ್ಕಳಿದ್ದಾರೆ. ಡಿ. ಟಿ. ಶ್ರೀನಿಧಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ಡಿ. ಆರ್. ಲೀಲಾ ಪ್ರಕರಣ ದಾಖಲಿಸಿದ್ದಾರೆ.
ಡಿ. ಟಿ. ಶ್ರೀನಿಧಿ ಟಿ. ಆರ್. ಲೀಲಾ ವಿರುದ್ಧ ಹಿರಿಯ ಸಿವಿಲ್ ನ್ಯಾಯಾಲಯ ಕಡೂರು ಇಲ್ಲಿಗೆ 2021ರಲ್ಲಿ ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸಹ ಇನ್ನು ಪೂರ್ಣಗೊಂಡು ಆದೇಶ ಪ್ರಕಟವಾಗಿಲ್ಲ. ಸಿ. ಜಿ. ಗೀತಾ ಮತ್ತು ಡಿ. ಟಿ. ಶ್ರೀನಿಧಿ ವಿವಾಹದ ಕುರಿತು ಟಿ. ಆರ್. ಲೀಲಾ 6/9/2021ರಂದು ಸಲ್ಲಿಸಿರುವ ಅರ್ಜಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ.
ನೋಟಿಸ್ ಏಕೆ?; 19/7/2021ರಂದು ಸಿ. ಜಿ. ಗೀತಾ ಮತ್ತು ಡಿ. ಟಿ. ಶ್ರೀನಿಧಿ ಎನ್. ಆರ್. ಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಈ ರೀತಿ ನಡವಳಿಕೆ ಸರ್ಕಾರಿ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಟಿ. ಆರ್. ಲೀಲಾ ಮನವಿ ಮಾಡಿದ್ದು, ಈ ಅರ್ಜಿಯ ಆಧಾರದ ಮೇಲೆ ನೋಟಿಸ್ ಕೊಡಲಾಗಿದೆ.
ಟಿ. ಆರ್. ಲೀಲಾ ಪ್ರಸ್ತಾವಿತ ಮನವಿ ವಿಚಾರವು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ 2021ರ ನಿಯಮ 30ರ ವ್ಯಾಪ್ತಿಗೆ ಬರುವ ಅಂಶವಾಗಿರುವುದರಿಂದ ಈ ಕೆಳಕಂಡ ಅಂಶಗಳಿಗೆ ವಿವರಣೆ ನೀಡುವುದು ಅವಶ್ಯವಿದೆ.
ಡಿ. ಟಿ. ಶ್ರೀನಿಧಿ ಇವರು ಲೀಲಾ ಇವರನ್ನು ಈಗಾಗಲೇ ಮದುವೆಯಾಗಿದ್ದಾಗ್ಯೂ ನೀವು ಡಿ. ಟಿ. ಶ್ರೀನಿಧಿ ಅವರನ್ನು ನರಸಿಂಹರಾಜಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 19/7/2021ರಂದು ವಿವಾಹವಾಗಿರುತ್ತೀರಿ ಎಂಬ ಅಂಶಕ್ಕೆ ನಿಮ್ಮ ಸಮರ್ಥನೆ ಏನು? ಎಂದು ನೋಟಿಸ್‌ನಲ್ಲಿ ವಿವರಣೆ ಕೇಳಲಾಗಿದೆ.
ಉಪನೋಂದಣಾಧಿಕಾರಿಗಳು ನರಸಿಂಹರಾಜಪುರ ಇವರ ಕಚೇರಿಯ ಫಾರ್ಮ್ -1ರಂತೆ ಕಾಲಂ 4 (ಜಿ)ರಲ್ಲಿ ನೀವು ಅವಿವಾಹಿತ ಎಂಬುದಾಗಿ ಮಾಹಿತಿ ನೀಡಿದ್ದು, ಇದಕ್ಕೆ ನಿಮ್ಮ ವಿವರಣೆ ಏನು? ಎಂದು ನೋಟಿಸ್‌ನಲ್ಲಿ ವಿವರಣೆ ಕೇಳಿದ್ದಾರೆ.
ನರಸಿಂಹರಾಜಪುರ ತಹಶೀಲ್ದಾರ್ ಸಿ. ಜಿ. ಗೀತಾಗೆ ನೀಡಿರುವ ನೋಟ್‌ನಲ್ಲಿ ನಿಮ್ಮ ಸಮರ್ಥನೆಯನ್ನು ಈ ನೋಟಿಸ್ ತಲುಪಿದ 7 ದಿನದೊಳಗೆ ಕಚೇರಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನೂ ಇಲ್ಲವೆಂದು ಭಾವಿಸಿ ನಿಯಮಾನುಸಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಈ ಕುರಿತು ಮಾತನಾಡಿದ್ದು, "ಗ್ರಾಮ ಲೆಕ್ಕಿಗನ ಕುಟುಂಬ ದೂರು ನೀಡಿದ್ದಾರೆ. ತಹಶೀಲ್ದಾರ್‌ಗೆ ನೋಟಿಸ್ ನೀಡಲಾಗಿದೆ. ಅವರು ಸಮಾಜಾಯಿಷಿ ನೀಡಬೇಕು" ಎಂದು ಹೇಳಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications