ನಿಡಘಟ್ಟ: ನಾನು ಪ್ರೀತಿಯ ರಾಜಕಾರಣ ಮಾಡಿದವನಾಗಿದ್ದೇನೆ, ಸಿ.ಟಿ.ರವಿ

ಚಿಕ್ಕಮಗಳೂರು, ಅಕ್ಟೋಬರ್‌, 29: ಸಮುದಾಯ ಭವನಗಳು ಜಾತಿಗೆ ಸೀಮಿತವಾಗದೆ, ಎಲ್ಲಾ ಸಮಾಜದವರು ಸಮುದಾಯ ಭವನಗಳನ್ನು ಬಳಸುವಂತಾಗಲಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ನಿಡಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬೀರಲಿಂಗೇಶ್ವರ ಸಮುದಾಯ ಭವನವನ್ನು ಉದ್ಘಾಟಿಸಲಾಯಿತು. ಇದೇ ವೇಳೆ ಶಾಸಕ ಸಿ.ಟಿ.ರವಿ ಮಾತನಾಡಿ, ಹಾಲು ಕೆಟ್ಟಿತೇ ಹೊರತು ಹಾಲು ಮತಸ್ಥರು ಕೆಡುವುದಿಲ್ಲ. ತಿನ್ನುವ ಅನ್ನಕ್ಕೆ ಜಾತಿಯಿಲ್ಲ. ಜಾತಿ-ಜಾತಿಗಳ ನಡುವೆ ಸಂಘರ್ಷ ಇರಬಾರದು. ನಾನು ಪ್ರೀತಿಯ ರಾಜಕಾರಣ ಮಾಡಿದವನಾಗಿದ್ದೇನೆ. ಹಿಂದುತ್ವದ ಮೇಲೆ ರಾಜಕೀಯಕ್ಕೆ ಬಂದ ನನಗೆ ಕುರುಬರು ಬೇರೆಯವರು ಎಂದು ಅನ್ನಿಸಿಲ್ಲ ಎಂದರು.

ಆಪತ್ತಿಗಾದವನೆ ಬಂಟ, ಸಮಯಕ್ಕಾದವನೆ ನೆಂಟ ಎಂಬ ಮಾತಿನಂತೆ ನಿಡಘಟ್ಟ ಗ್ರಾಮದ ಎಲ್ಲರ ಸಹಕಾರದಿಂದ ಸಮುದಾಯ ಭವನ ನಿರ್ಮಾಣವಾಗಿದೆ. ಇದಕ್ಕೆ ಜಾತಿಯ ಲೇಪ ಬೇಡ. ಕನಕ, ಬಸವಣ್ಣ ಇಂತಹ ಹಲವಾರು ಮಹನೀಯರ ನೀತಿಯಿಂದ ಅವರನ್ನು ಗುರುತಿಸಿದ್ದೇವೆ. ಅವರಿಗೆ ಜಾತಿಯ ಪಟ್ಟ ಕಟ್ಟುವುದು ಬೇಡ. ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಕ್ಕೆ ಅವರು ಎಲ್ಲರ ಮನಸ್ಸಿನಲ್ಲಿದ್ದಾರೆ ಎಂದರು.

ಯುವಕರು ಸಮಾಜ ಕಟ್ಟಲು ಮುಂದಾಗಬೇಕು

ಯುವಕರು ಸಮಾಜ ಕಟ್ಟಲು ಮುಂದಾಗಬೇಕು

ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾಂದಪುರಿ ಶ್ರೀಗಳು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಸಮಾಜ ಕಟ್ಟುವ ಕೆಲಸ ಮಾಡಬೇಕು. ಧಾರ್ಮಿಕ ಪಾವಿತ್ರ್ಯತೆ ಇರುವ ಹಾಲುಮತಸ್ಥರು ಹಿಂದಿನಿಂದಲೂ ಒಳ್ಳೆಯ ರೀತಿಯಲ್ಲಿ ಬದುಕುತ್ತಿದ್ದಾರೆ. ಅದರಲ್ಲಿಯೂ ಹಾಲಿಗೆ ಹುಳಿ ಹಿಂಡುವವರು ಇದ್ದು, ಅದು ಮೊಸರಾಗುತ್ತದೆ. ಮೊಸರಿಗೆ ಕಡ್ಡಿಯಾಡಿಸಿದರೆ ಬೆಣ್ಣೆ ಆಗುತ್ತದೆ. ಬೆಣ್ಣೆಗೆ ಬೆಂಕಿ ಇಟ್ಟರೆ ತುಪ್ಪ ಆಗುತ್ತದೆ. ತುಪ್ಪವು ಎಲ್ಲರಿಗೂ ಬೇಕಾದ ವಸ್ತುವಾಗಿದೆ. ಅದೇ ರೀತಿ ನಾವುಗಳು ತುಪ್ಪವಾಗಬೇಕು ಎಂದರು.

ಕೃತಕ ಅಂಗಾಂಗ ಪಡೆದ ವಿಶೇಷಚೇತನರು

ಕೃತಕ ಅಂಗಾಂಗ ಪಡೆದ ವಿಶೇಷಚೇತನರು

ಇನ್ನು ನಗರದಲ್ಲಿ ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ ಹಾಗೂ ಅರ್ಹರಿಗೆ ಕೃತಕ ಅಂಗಾಂಗ ವಿತರಣೆ ಶಿಬಿರವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ವಿಶೇಷ ಚೇತನರ ಅಭಿವೃದ್ಧಿ ಇಲಾಖೆ ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಅಲಿಂಕೋ ಸಂಸ್ಥೆ ಸಹಯೋಗದಲ್ಲಿ 50 ಜನ ವಿಶೇಷಚೇತನರಿಗೆ 10 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕೃತಕ ಅಂಗಾಂಗ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಶೇಷಚೇತನರನ್ನು ಗುರುತಿಸುವ ಕಾರ್ಯ

ವಿಶೇಷಚೇತನರನ್ನು ಗುರುತಿಸುವ ಕಾರ್ಯ

ನಂತರ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ 15,584 ಮಂದಿ ವಿಶೇಷಚೇತನರಿದ್ದಾರೆ ಎಂದು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ ಯುಡಿಐಡಿ ಕಾರ್ಡ್‌ಗಳನ್ನ 13,354 ಜನರಿಗೆ ವಿತರಿಸಲಾಗಿದೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಕಾರ್ಡು ವಿತರಿಸಿರುವ ಎರಡನೇ ಜಿಲ್ಲೆಯಾಗಿದೆ. ಇಲಾಖೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಅರ್ಹರಿಗೆ ಶೇಕಡಾ 100ರಷ್ಟು ಕಾರ್ಡು ವಿತರಣೆ ಮೂಲಕ ಮೊದಲ ಕ್ರಮಾಂಕಕ್ಕೆ ತಲುಪಬೇಕು. ನಗರದ ಎಐಟಿ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶೇಷ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಅಲಿಂಕೋ ಸಂಸ್ಥೆ ಮೂಲಕ ಕೃತಕ ಅಂಗಾಂಗಗಳನ್ನು ಕೊಡಲು ಯೋಜನೆ ರೂಪಿಸಿದ್ದೆವು.

ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ರಾಜ್ಯದವರೇ ಆದ ಕೇಂದ್ರ ಸಚಿವ ಚಿತ್ರದುರ್ಗದ ಸಂಸದರಾದ ಎ.ಆರ್‌.ನಾರಾಯಣಸ್ವಾಮಿ ಅವರಿಗೆ ನಾವು ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ಒಂದೇ ಒಂದು ಶಿಬಿರದಲ್ಲಿ ಇಷ್ಟು ಜನರಿಗೆ ಕೃತಕ ಅಂಗಾಗ ವಿತರಿಸಿರುವುದು ದಾಖಲೆ ಆಗಿದೆ. ನಾವು ಇನ್ನೊಮ್ಮೆ ಈ ರೀತಿ ಶಿಬಿರವನ್ನು ಆಯೋಜನೆ ಮಾಡಿ ಉಳಿದ ವಿಶೇಷ ಚೇತನರಿಗೂ ಸಹ ಕೃತಕ ಅಂಗಾಂಗಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಈ ಹಿಂದೆ ಶಾಸಕರ ಅನುದಾನವನ್ನು ಚರಾಸ್ತಿಗಳಿಗೆ ಕೊಡಲು ಅವಕಾಶ ಇರಲಿಲ್ಲ. ಸ್ಥಿರಾಸ್ತಿಗಳಿಗೆ ಮಾತ್ರ ಕೊಡಬಹುದಿತ್ತು ಎಂದಿದ್ದರು.

ವಿಶೇಷ ಚೇತನರಿಗೆ ಅಭಯ ನೀಡಿದ ಶಾಸಕ

ವಿಶೇಷ ಚೇತನರಿಗೆ ಅಭಯ ನೀಡಿದ ಶಾಸಕ

ನಾವು ಎಂಎಲ್‌ಎ ಅನುದಾನದಲ್ಲಿ ಮೂರು ಚಕ್ರ ವಾಹನಗಳನ್ನು ಕೊಡಬಹುದು ಎಂದು ಕಾನೂನು ತಿದ್ದುಪಡಿ ಮಾಡಿಸಿ, ನನ್ನ ಅನುದಾನದಲ್ಲಿ ಪ್ರತಿವರ್ಷ ಅನುದಾನ ಮೀಸಲಿಟ್ಟು ಈವರೆಗೆ 106 ಜನರಿಗೆ ತ್ರಿಚಕ್ರ ವಾಹನ ಕೊಡಿಸಲಾಗಿದೆ. ತಿದ್ದುಪಡಿ ಮಾಡಿಸಿ ನಗರಸಭೆಯಿಂದಲೂ ಕೊಡಿಸಲು ಕ್ರಮ ವಹಿಸಿದೆವು. ನಂತರ ಉಳಿದವರೂ ಆರಂಭಿಸಿದ್ದರು. ಇದರಿಂದ ವಿಶೇಷ ಚೇತನರಿಗೆ ನಾವೂ ಸಹ ಸಮಾಜದ ನಡುವೆ ಧೈರ್ಯದಿಂದ ಬದುಕಬಹುದು ಎನ್ನುವ ಆತ್ಮವಿಶ್ವಾಸ ಬಂದಿದೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+