ನೋಡುಗರ ಮನ ಕಲಕುವಂತಿತ್ತು ತಾಯಿಯ ಜೊತೆ ಸಾವಿಗೆ ಶರಣಾದ ಕಂದಮ್ಮನ ದೃಶ್ಯ
ಚಿಕ್ಕಮಗಳೂರು, ನವೆಂಬರ್.13: ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ತಾಯಿ, ಮಗು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.
ಅನು (23 ವರ್ಷ) ಹಾಗೂ ದರ್ಶನ್ (2) ಸಾವಿಗೆ ಶರಣಾದವರು. ತಾಯಿಯ ಜೊತೆ ಏನೂ ಅರಿಯದ ಮುಗ್ಧ ಕಂದಮ್ಮ ಸಹ ಸಾವನ್ನಪ್ಪಿದ ದೃಶ್ಯ ಕಟುಕರ ಮನವೂ ಕಲಕುವಂತಿತ್ತು.
ಘಟನೆಯ ವಿವರ
ನವೆಂಬರ್ 2ರಂದು 50 ಸಾವಿರ ರೂಪಾಯಿ ಸಾಲ ಮರುಪಾವತಿಗೆ ವಿಜಯ್ ಬ್ಯಾಂಕ್ ನೋಟಿಸ್ ನೀಡಿದ್ದು, ತೋಟ ಮಾರಿ ಸಾಲ ತೀರಿಸುವ ವಿಚಾರದಲ್ಲಿ ಅನು ಹಾಗೂ ಅವರ ಗಂಡನ ನಡುವೆ ಕಲಹವುಂಟಾಗಿತ್ತು.

ಈ ಘಟನೆಯಿಂದ ಮನನೊಂದ ಅನು ಇಂದು ಮಂಗಳವಾರ ಬೆಳಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications