• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಡೂರಿನಲ್ಲಿ ಜೀವಂತ ಮಗುವನ್ನೇ ಬೆಂಕಿ ಒಲೆಗೆ ಹಾಕಿ ಕೊಂದ ಅಮ್ಮ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಮಾರ್ಚ್ 26: ಹೆತ್ತ ತಾಯಿಯೇ ತನ್ನ 23 ದಿನದ ಕಂದಮ್ಮನನ್ನು ಬೆಂಕಿ ಒಲೆಗೆ ಹಾಕಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದಿದೆ.

ಹೆಣ್ಣು ಮಗು ಹುಟ್ಟಿತೆಂಬ ಕಾರಣಕ್ಕೆ 23 ದಿನದ ಮಗುವನ್ನು ಕಡೂರು ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ತಾಯಿಯೇ ಕೊಲೆ ಮಾಡಿದ್ದಾಳೆ. ಜೀವಂತ ಮಗುವನ್ನು ಒಲೆಗೆ ಹಾಕಿದ್ದಾಳೆ. ಕೊಲೆ ಮಾಡುವ ಮುನ್ನ ಕುತ್ತಿಗೆಗೆ ಕಚ್ಚಿ ನಂತರ ಬೆಂಕಿಗೆ ಹಾಕಿದ್ದಾಳೆ.

ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸದ ಪತಿ:ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ!

ಮಗುವನ್ನು ಕೊಂದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ಕೊಲ್ಲಲು ಪ್ರೇರೇಪಿಸಿದ ಬಾಬು, ರಮೇಶ್, ಚಂದ್ರಮ್ಮ ಎಂಬ ಮೂವರನ್ನೂ ಬಂಧಿಸಲಾಗಿದೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
mother killed her 23 days old baby girl by throwing baby to fire in kaduru of chikkamagaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X