ಚಿಕ್ಕಮಗಳೂರು; ಚುನಾವಣಾ ದ್ವೇಷಕ್ಕೆ ಕೊಟ್ಟಿಗೆಗೆ ಬೆಂಕಿ ಇಟ್ಟರು
ಚಿಕ್ಕಮಗಳೂರು, ಜನವರಿ 02: ಚಿಕ್ಕಮಗಳೂರು ತಾಲೂಕಿನ ಸಗನೀಪುರದಲ್ಲಿ ಗುರುವಾರ ರಾತ್ರಿ ಗೆದ್ದ, ಸೋತ ಗುಂಪುಗಳ ನಡುವೆ ಘರ್ಷಣೆ ನಡೆದ ಬೆನ್ನಲ್ಲೇ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯಲ್ಲಿ ಚುನಾವಣೆ ದ್ವೇಷಕ್ಕೆ ಕೊಟ್ಟಿಗೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿದ್ದು 2 ರಾಸುಗಳು ಮೃತಪಟ್ಟಿವೆ. ನಾಲ್ಕೈದು ಜಾನುವಾರುಗಳು ತೀವ್ರವಾದ ಸುಟ್ಟ ಗಾಯಗಳಿಂದ ನರಳುತ್ತಿವೆ. ಜನರ ನಡುವಿನ ದ್ವೇಷಕ್ಕೆ ಜಾನುವಾರುಗಳನ್ನು ಸಜೀವ ದಹನ ಮಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಜಾವೂರು ಹೊಸಳ್ಳಿಯ ಚಂದ್ರಪ್ಪ ಎಂಬುವವರಿಗೆ ಈ ಕೊಟ್ಟಿಗೆ ಸೇರಿತ್ತು. ಕೊಟ್ಟಿಗೆಯಲ್ಲಿದ್ದ ಕೊಬ್ಬರಿ, ತೆಂಗಿನಕಾಯಿಗಳೂ ಘಟನೆಯಲ್ಲಿ ಭಸ್ಮವಾಗಿವೆ. ಶುಕ್ರವಾರ ರಾತ್ರಿ 1 ಗಂಟೆ ಹೊತ್ತಿಗೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ 5 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವುದಾಗಿ ತಿಳಿದುಬಂದಿದೆ.












Click it and Unblock the Notifications