• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆ.8ಕ್ಕೆ ಕೊಟ್ಟಿಗೆಹಾರದಲ್ಲಿ ತೇಜಸ್ವಿ ಸಾಹಿತ್ಯ ವಿಚಾರ ಮಂಥನ

|
Google Oneindia Kannada News

ಕೊಟ್ಟಿಗೆಹಾರ, ಸೆಪ್ಟೆಂಬರ್ 5: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 8 ರಂದು ತೇಜಸ್ವಿ ಸಾಹಿತ್ಯ ವಿಚಾರ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 11;30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ''ವರ್ತಮಾನದಲ್ಲಿ ತೇಜಸ್ವಿ ವಿಚಾರಧಾರೆ'' ವಿಷಯದ ಕುರಿತು ಚಿಕ್ಕಮಗಳೂರಿನ ನಿವೃತ್ತ ಉಪನ್ಯಾಸಕರಾದ ಬಿ ತಿಪ್ಪೆರುದ್ರಪ್ಪ ಅವರು ಉಪನ್ಯಾಸ ನೀಡಲಿದ್ದಾರೆ. ಹಾಸನದ ಅಬಚೂರಿನ ಮಿತ್ರವೃಂದ ಪ್ರಕಾಶನದ ತೇಜಸ್ವಿಯವರ ನೆನಪಿನ ಕಥಾಸ್ಪರ್ಧೆ 2021ರ ''ತೆರೆದ ಅಂಚೆ'' ಎಂಬ ಕಥಾ ಸಂಕಲನ ಬಿಡುಗಡೆಯಾಗಲಿದೆ.

ಆ ದಿನ ಸಂಜೆ ತೇಜಸ್ವಿ ಓದು ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಪಾಕಕ್ರಾಂತಿ ಮತ್ತು ಇತರ ಕಥೆಗಳು ಕೃತಿಯ ಬಗ್ಗೆ ಸಾಹಿತಿಗಳಾದ ರೇಖಾ ನಾಗರಾಜರಾವ್ ಅವರು ಮಾತನಾಡಲಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರವಾಗಲಿದ್ದು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಫೇಸ್‌ಬುಕ್‌ನ ಕೆಪಿಪಿಟ್ರಸ್ಟ್ ಅಧಿಕೃತ ಪೇಜ್‌ನಲ್ಲಿ ವೀಕ್ಷಿಸಬಹುದಾಗಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದು, ಸರ್ಕಾರವು ಇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಸ್ಥಾಪಿಸಲಾಗಿದೆ. ಈ ಮುಖಾಂತರ ತೇಜಸ್ವಿಯವರ ಸಾಹಿತ್ಯ, ಪರಿಸರ, ಫೋಟೋಗ್ರಫಿ, ಚಿತ್ರಕಲೆ, ಕೃಷಿ ಮುಂತಾದ ಹಲವಾರು ವಿಚಾರಧಾರೆಗಳನ್ನು ಯುವಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೇಂದ್ರ ಆಶಯ. ವ್ಯಕ್ತಿ ವಿಶಿಷ್ಟ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತ ಬೆಳೆಯುತ್ತದೆ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ಉಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ತೇಜಸ್ವಿ.

   ಶತೃಗಳ Drone Attacks ಎದುರಿಸಲು ಭಾರತೀಯ ನೌಕಾಸೇನೆಗೆ ಸಿಕ್ತು ಹೊಸ ಶಕ್ತಿ | Oneindia Kannada

   ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ , ಸಂಗೀತ ಆಸ್ವಾದನೆ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಗೆಗಿನ ಕುತೂಹಲ ಹಾಗೂ ಅದರ ಬಳಕೆಯ ಸಾಧ್ಯತೆಗಳು, ಅಡುಗೆ ಹೀಗೆ ಹತ್ತು ಹಲವು ಇವರ ಆಸಕ್ತಿ, ಅಭಿರುಚಿ, ಕುತೂಹಲಗಳಾಗಿದ್ದವು. ಹಾಗಾಗಿ ತೇಜಸ್ವಿ ಎಂದರೇನೆ ಒಂದು ವಿಸ್ಮಯ, ನಿಗೂಢ.

   English summary
   KP Poornachandra Tejaswi trust organises day long event on Sept 08 on the eve of Tejaswi's birthday at Trust office Kottigehara in Chikkamagaluru District.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X