CT Ravi Dance: ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ- ಮಹಿಳೆಯರ ಜೊತೆ ಸಿಟಿ ರವಿ ಭರ್ಜರಿ ಡ್ಯಾನ್ಸ್
ಚಿಕ್ಕಮಗಳೂರು ಸೆಪ್ಟೆಂಬರ್ 19: ಕಾಫಿನಾಡಲ್ಲಿ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ವೇಳೆ ಮಹಿಳೆಯರ ಜೊತೆ ಬಿಜೆಪಿ ಮುಖಂಡ ಸಿಟಿ ರವಿ ಭರ್ಜರಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಕಾಫಿನಾಡಲ್ಲಿ ಕಳೆದ ದಿನ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ಮಾಡಲಾಯಿತು. ಈ ವೇಳೆ ಗಣೇಶನನ್ನು ಚಿಕ್ಕಮಗಳೂರು ರಸ್ತೆಗಳಲ್ಲಿ ಮೆರವಣಿಗೆ ಮಾಡುವಾಗ ಯುವತಿಯರು ಮನಸ್ಸೋ ಇಚ್ಛೆ ಕುಣಿಯುತ್ತಿದ್ದರು.
ಹನುಮಂತಪ್ಪ ವೃತ್ತದಲ್ಲಿ ಮೆರವಣಿಗೆ ನಡೆಯುತ್ತಿರುವಾಗ ಸ್ಥಳಕ್ಕೆ ಬಂದ ಎಂಎಲ್‌ಸಿ ಸಿಟಿ ರವಿ ಅವರನ್ನ ಯುವತಿಯರು ಮುತ್ತಿಕೊಂಡಿದ್ದಾರೆ. ಈ ವೇಳೆ ಸಿಟಿ ರವಿ ಸಾವಿರಾರು ಮಹಿಳೆಯರ ಮಧ್ಯೆ ಭರ್ಜರಿಯಾಗಿ ಕುಣಿದು ಗಮನ ಸೆಳೆದಿದ್ದಾರೆ.

ಡಿಜೆ ಸೌಂಡ್ ಗೆ ಮನಸ್ಸೋ-ಇಚ್ಛೆ ಕುಣಿದು ಕುಪ್ಪಳಿಸುತ್ತಿರೋ ಯುವ ಸಮೂಹದೊಂದಿಗೆ ಸಿಟಿ ರವಿ ಸಾಥ್ ನೀಡಿದ್ದಾರೆ. 20 ಸಾವಿರಕ್ಕೂ ಅಧಿಕ ಜನ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಪೊಲೀಸರ ಸರ್ಪಗಾವಲಿನಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಅಂದಹಾಗೆ ಸಿಟಿ ರವಿ ಅವರು ಹಿಂದೂ ಮಹಾ ಸಭಾ ಗಣಪತಿಯನ್ನು ತರುವಾಗಲೂ ನೃತ್ಯ ಮಾಡಿದ್ದರು.
ಅಲ್ಲದೆ ಗಣಪನನ್ನು ವಿಸರ್ಜನಾ ಮೆರವಣಿಗೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಉದ್ದಕ್ಕೂ ದಾರಿಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಮುಂಜಾಗ್ರತೆಗಾಗಿ ಗಣೇಶ ಸಾಗಿ ಬರುವ ದಾರಿಯಲ್ಲಿ ಪಥಸಂಚಲನ ಮಾಡಲಾಗಿತ್ತು.

ಸೆಪ್ಟೆಂಬರ್ 7ರಂದು ಚಿಕ್ಕಮಗಳೂರಿನ ಹಿಂದೂ ಮಹಾಗಣಪತಿಯನ್ನು ಸಡಗರದಿಂದ ಬರಮಾಡಿಕೊಳ್ಳಲಾಗಿತ್ತು. ಮೆರವಣಿಗೆ ವೇಳೆ ಗಣಪತಿಯ ಮುಂಭಾಗದಲ್ಲಿ ಡ್ರಮ್ ಸೆಟ್ ಶಬ್ದಕ್ಕೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಭರ್ಜರಿ ಡ್ಯಾನ್ಸ್ ಮಾಡಿದ್ದರು. ಅವರೊಂದಿಗೆ ಯುವಕರೂ ಕೂಡ ಕುಣಿದು ಸಂಭ್ರಮಿಸಿದರು.
ಕಳೆದ ಹತ್ತು ವರ್ಷದಿಂದ ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಅದೇ ಉತ್ಸಾಹದಲ್ಲಿ ಪುಟಾಣಿ ಮಕ್ಕಳು, ಯುವಕ, ಯುವತಿಯರು ನೃತ್ಯ ಮಾಡಿ ಗಜಾನನ್ನು ವಿಸರ್ಜನೆ ಮಾಡಿದರು. ಗಣೇಶನ ಮೆರವಣಿಗೆ ದಾರಿಯುದ್ದಕ್ಕೂ ಗಣೇಶನಿಗೆ ವಿಶೇಷ ಪೂಜೆ, ಮಂಗಳಾರತಿ ಮಾಡಿಸಿ ಸಂಭ್ರಮಿಸಿದರು. ಅಲಂಕೃತಗೊಂಡ ಗಣಪನನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಿಕೊಂಡು ಹೋಗಿ ವಿಸರ್ಜನೆ ಮಾಡಲಾಯಿತು.

ಬಿಳಿ ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿದ ಹಿಂದೂ ಮಹಾ ಗಣಪತಿ ಸಮಿತಿ ಸದಸ್ಯರು ಕೇಸರಿ ಶಾಲು ಹಾಕಿಕೊಂಡು ಮೆರವಣಿಗೆಗೆ ವಿಶೇಷ ಕಳೆ ತಂದಿದ್ದ ಕಂಡು ಬಂದಿದೆ. ಅಲ್ಲದೆ ಸಂಭ್ರಮದ ಮೆರವಣಿಗೆಗೆ ಭಕ್ತಿ ಭಾವವನ್ನು ತುಂಬಿದ್ದರು. ಅದರೊಂದಿಗೆ ದಾರಿ ಉದ್ದಕ್ಕೂ ಡಿಜೆ ಸದ್ದಿಗೆ ಸಹಸ್ರಾರು ಮಂದಿ ಏಕ ಕಾಲದಲ್ಲಿ ಹೆಜ್ಜೆ ಹಾಕಿದ ದೃಶ್ಯ ಆಕರ್ಷಕವಾಗಿತ್ತು. ಗಣಪತಿ ಬಪ್ಪ ಮೋರಯಾ, ವಿನಾಯಕನಿಗೆ ಜಯವಾಗಲಿ, ಜೈ ಶ್ರೀರಾಮ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಹೀಗೆ ಚಿಕ್ಕಮಗಳೂರಿನಲ್ಲಿ ಮಹಾಸಭಾ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಗಿದ್ದು ಅದರಲ್ಲೂ ಬಿಜೆಪಿ ನಾಯಕರು ಡಿಜೆ ಸೌಂಡ್‌ಗೆ ಸ್ಟೆಪ್ ಹಾಕಿರುವುದು ಹೆಚ್ಚಾಗಿ ಗಮನ ಸೆಳೆದಿದೆ. ಯುವಕರು, ಮಕ್ಕಳು ಹೆಜ್ಜೆ ಹಾಕಿ ಗಣೇಶನ ವಿಸರ್ಜನಾ ಮೆರವಣಿಗೆಯ ರಂಗನ್ನು ಹೆಚ್ಚಿಸಿದರು.
ಗಣೇಶನ ವಿಸರ್ಜಯಂದು ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನ, ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದವರೆಗೆ ತೆರಳಿ, ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಸಾಗಿದೆ. ಈ ಬಾರಿ ಸಿಟಿ ರವಿ ಅವರು ಮಹಿಳೆಯರೊಂದಿಗೆ ನೃತ್ಯ ಮಾಡಿರುವುದು ತುಂಬಾ ವಿಶೇಷವಾಗಿತ್ತು.
-
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications