• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿ. ಟಿ. ದೇವೇಗೌಡರು ಉಚ್ಛಾಟನೆ ಮಾಡಲು ಎಂದು ಕಾಯುತ್ತಿದ್ದಾರೆ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಜನವರಿ 11: "ಜಿ. ಟಿ. ದೇವೇಗೌಡರನ್ನು ನಾವು ಪಕ್ಷದಿಂದ ಉಚ್ಛಾಟನೆ ಮಾಡ್ತೀವಿ ಎಂದು ಹೇಳಿಲ್ಲ. ಅವರು ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿಯಲ್ಲಿ ಹೆಚ್. ಕೆ. ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡರಿಗೆ ಟಾಂಗ್ ಕೊಟ್ಟರು.

ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!

"ಪಕ್ಷದದಿಂದ ಗೆದ್ದ ಮೇಲೆ ಅವಧಿ ಮುಗಿಯುವ ತನಕ ನಿಷ್ಠರಾಗಿ ಇರಬೇಕು. ಉಚ್ಛಾಟನೆಗೆ ಹೆದರಲ್ಲ, ಮೆಂಬರ್ ಶಿಪ್ ಹೋಗಲ್ಲ ಅದಕ್ಕೆ ಎಲ್ಲವನ್ನೂ ಮಾತನಾಡುತ್ತಿದ್ದಾರೆ. ಇನ್ನೂ ಹಗುರವಾಗಿ ಮಾತನಾಡಬಹುದು. ಅವರಿಗೆ ಬೇರೆ ತರಹದ ಅವಕಾಶಗಳಿವೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ರಾಜಕೀಯ ಭವಿಷ್ಯ ನೋಡಿಕೊಳ್ಳಿ; ಗೌಡರಿಗೆ ಹೆಚ್‌ಡಿಕೆ ತಿರುಗೇಟು!

"ಸಾ. ರಾ. ಮಹೇಶ್ ಕೂಡ ನಮ್ಮ ಪಕ್ಷದ ಶಾಸಕರು. ಜಿ. ಟಿ. ದೇವೇಗೌಡರಿಗೆ ಅವರದ್ದೇ ಆದ ಕ್ಷೇತ್ರವಿದೆ.

ಮೊದಲು ಅವರ ಕ್ಷೇತ್ರದಲ್ಲಿ ಗೆದ್ದವರಿಗೆ ಸನ್ಮಾನ ಮಾಡಲಿ. ಆಮೇಲೆ ಬೇರೆ ಕ್ಷೇತ್ರಕ್ಕೆ ಹೋಗಲಿ" ಎಂದು ಕುಮಾರಸ್ವಾಮಿ ಹೇಳಿದರು.

ಮೈಸೂರು ಹೈಕಮಾಂಡ್; ಜಿಟಿಡಿಗೆ ಸಾ. ರಾ. ಮಹೇಶ್ ಪ್ರತಿಕ್ರಿಯೆ!

"ಅವರು ನಮ್ಮ ಪಕ್ಷದಲ್ಲಿ ಇನ್ನೂ ಇದ್ದಾರೆ. ಪಕ್ಷದ ಬಗ್ಗೆ ಪ್ರೀತಿ ಇಟ್ಟುಕೊಂಡು ಕರೆದರೂ, ಕರೆದಿದ್ದರೂ ಪಕ್ಷದ ಸಭೆಗೆ ಬರಬೇಕು. ಅವರು ಯಾವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ" ಎಂದು ಹೆಚ್‌. ಕೆ. ಕುಮಾರಸ್ವಾಮಿ ತಿಳಿಸಿದರು.

ಶಾಸಕ ಜಿ. ಟಿ. ದೇವೇಗೌಡ ಹೆಚ್. ಡಿ. ಕುಮಾರಸ್ವಾಮಿ, ಶಾಸಕ ಸಾ. ರಾ. ಮಹೇಶ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಅವರು ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

English summary
JD(S) state president H. K. Kumaraswamy said that Mysuru Chamundeshwari MLA G. T. Deve Gowda waiting to expel from party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X