ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿ ವಿರುದ್ಧ ಆಡಿಯೋ ಕ್ಲಿಪ್: ಶಿಕ್ಷಕ ಅಮಾನತ್ತು

|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 30: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅವಹೇಳನಕಾರಿ ಆಡಿಯೋ ಕ್ಲಿಪ್‌ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಆರೋಪದ ಮೇಲೆ ಚಿಕ್ಕಮಗಳೂರಿನ ಶಿಕ್ಷಕನನ್ನು ಅಮಾನತ್ತು ಮಾಡಲಾಗಿದೆ.

Recommended Video

ಪೋಷಕರಿಂದ ಹಣ ವಸೂಲಿ ಮಾಡಬೇಡಿ ಎಂದು ಖಾಸಗಿ ಶಾಲೆಗಳಿಗೆ ವಾರ್ನಿಂಗ್ ಕೊಟ್ಟ ಸರ್ಕಾರ..! | Suresh Kumar | Education

ಚಿಕ್ಕಮಗಳೂರು ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬಿ ಎಸ್‌ ಮಂಜುನಾಥ್ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಅಮಾನತ್ತಾದ ಶಿಕ್ಷಕರಾಗಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿ ಹಣದ ಬಗ್ಗೆ ಶಿಕ್ಷಕ ಅವಹೇಳನಕಾರಿಯಾಗಿ ಮಾತನಾಡಿದ್ದರು.

ಹುಟ್ಟೂರಿನ ಋಣ ತೀರಿಸಲು ಆಹಾರ ಧಾನ್ಯ ವಿತರಿಸಿದ ಶಿಕ್ಷಕ ದಂಪತಿಹುಟ್ಟೂರಿನ ಋಣ ತೀರಿಸಲು ಆಹಾರ ಧಾನ್ಯ ವಿತರಿಸಿದ ಶಿಕ್ಷಕ ದಂಪತಿ

ಕೊರೊನಾ ಹೋರಾಟಕ್ಕೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ತಿಳಿಸಿದ್ದರು. ಆ ರೀತಿ ರಾಜ್ಯದ ಸಾಕಷ್ಟು ಮಂದಿ, ಸಿನಿಮಾ ನಟರು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ ಅನೇಕರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದರು.

Social Media Post Against BS Yediyurappa Chikkamagaluru Lecturer Suspended

ಇದರ ಬಗ್ಗೆ ಉಪನ್ಯಾಸಕ ಬಿ ಎಸ್‌ ಮಂಜುನಾಥ್ ಅವಹೇಳನಕಾರಿಯಾಗಿ ಮಾತಾಡಿ ಆ ಆಡಿಯೋ ಕ್ಲಿಪ್‌ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು ಎನ್ನುವ ಆರೋಪ ಬಂದಿದೆ. "ಹಲೋ ಸಿಎಂ ಸಾಹೇಬ್ರೆ ಫ್ರೀ ಇದ್ದೀರಾ..!, ಕೊರೋನಾ ಪರಿಹಾರಕ್ಕೆ ಜನರ ಹತ್ತಿರ ದುಡ್ಡು ಕೇಳ್ತಿದ್ದೀರಿ, ದುಡ್ಡು ಎಲ್ಲಿದೆ ಅಂತ ಲಿಸ್ಟ್ ಇಲ್ಲಿದೆ ನೋಡಿ..!" ಎಂದು ಶಿಕ್ಷಕ ಮುಖ್ಯಮಂತ್ರಿ ವಿರುದ್ಧ ಮಾತನಾಡಿದ್ದರಂತೆ.

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ವಿರುದ್ಧ ಮಾತನಾಡಿ, ವೈರಲ್ ಮಾಡಿದ ಆರೋಪದ ಮೇಲೆ ಶಿಕ್ಷಕ ಮಂಜುನಾಥ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಿಸ್ತು ಪ್ರಾಧಿಕಾರ ಮಂಜುನಾಥ್ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

English summary
Social media post against BS Yediyurappa chikkamagaluru lecturer suspended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X